ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ ಒಟ್ಟು ₹2,35,36,000 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದರು.
ಫೆ.27 ರಂದು ವಾರದ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ನಗರ ಪೊಲೀಸರು ಭೇದಿಸಿದ ಅನೇಕ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. “ವಿದೇಶಿ ಮೂಲದ 3 ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಒಟ್ಟು 4 ಡ್ರಗ್ ಪೆಡ್ಲರ್‌ಗಳಿಂದ ಒಟ್ಟು ₹2,35,36,000 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 730 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್, 1273 ಎಕ್ಸ್ ಟಿಸಿ ಪಿಲ್ಸ್‌ಗಳು, 42 ಗ್ರಾಂ ಹೈಡೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಹೇಳಿದರು.
“ತರಕಾರಿ ಸಾಗಾಣಿಕೆ ನೆಪದಲ್ಲಿ ನಕಲಿ ಹಾನ್ಸ್ ಚಾಪ್ ಟೊಬ್ಯಾಕೊ (HANS CHAAP TOBACCO) ತಂಬಾಕು ಉತ್ಪನ್ನಗಳನ್ನು ದೆಹಲಿಯಿಂದ ಬೆಂಗಳೂರಿಗೆ ಸಾಗಾಣಿಕೆ ಮಾಡುತಿದ್ದ 2 ಜನರನ್ನು ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ) ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ” ಎಂದರು.
“ಬಂಧಿತರಿಂದ ಸುಮಾರು ₹10 ಲಕ್ಷ ಬೆಲೆ ಬಾಳುವ ನಕಲಿ ತಂಬಾಕು ಪ್ಯಾಕ್‌ಗಳೂ ಹಾಗೂ ಕೃತ್ಯಕ್ಕೆ ಬಳಕೆ ಮಾಡುತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿಯಿಂದ ಕಡಿಮೆ ಬೆಲೆಗೆ ನಕಲಿ ಹಾನ್ಸ್ ಚಾಪ್ ಟೊಬ್ಯಾಕೊ (HANS CHAAP TOBACCO) ಪ್ಯಾಕೆಟ್‌ಗಳನ್ನು ಖರೀದಿ ಮಾಡಿ ತಂದು, ಅವುಗಳನ್ನು ತರಕಾರಿ ಮೂಟೆಗಳ ಮದ್ಯೆ ಮರೆಮಾಚಿ ಇಟ್ಟುಕೊಂಡು ಬೆಂಗಳೂರಿಗೆ ತಂದು ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದೆ” ಎಂದು ಹೇಳಿದರು.
“ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಹುಕ್ಕಾ ಕೇಂದ್ರಗಳ ಮೇಲೆ ದಾಳಿ ನಡೆಸಿ. ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್, ಹೆಚ್.ಎ.ಎಲ್ ಮತ್ತು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕೋಟ್ಫಾ ಕಾಯ್ದೆಯಡಿ ಒಟ್ಟು 7 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತ ವ್ಯಕ್ತಿಗಳಿಂದ ₹12,50,000 ಮೌಲ್ಯದ ಹುಕ್ಕಾ ಪ್ಲೇವರ್‌ಗಳು ಹಾಗೂ ಇದರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಹೇಳಿದರು.
“ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂದಿಸಿದ್ದು, ಇವರಿಂದ ₹20 ಲಕ್ಷ ಮೌಲ್ಯದ ನಾನಾ ಕಂಪನಿಯ ಒಟ್ಟು 68 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಮೊಬೈಲ್ ರಾಬರಿ ಪ್ರಕರಣಗಳು ಪತ್ತೆಯಾಗಿವೆ. ತನಿಖೆ ಕೈಕೊಳ್ಳಲಾಗಿದೆ” ಎಂದು ತಿಳಿಸಿದರು.
During today’s weekly press briefing, @CPBlr briefed the media on multiple cases cracked by the city police. Notably, the Commissioner spoke about the Central Crime Branch (CCB) Anti-Narcotics wing’s successful arrest of 4 drug peddlers, including 3 foreigners. The officers have… pic.twitter.com/ctT1rNAzUV
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) February 27, 2024
“ನಮ್ಮ 112 ಗೆ ಕರೆಮಾಡಿ ನೀಡಿದ ದೂರಿನ ಆಧಾರದ ಮೇಲೆ ಇಂದಿರಾನಗರದ ಪೊಲೀಸ್ ಠಾಣೆಯ ಪೊಲೀಸರು ಮೊಬೈಲ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿದಾಗ ಆ ವ್ಯಕ್ತಿಗಳು ಇಂದಿರಾನಗರದ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಹಲಸೂರು ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ 3 ದರೋಡೆಗೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಿದ್ದಲಿಂಗಯ್ಯ ಕಾಲದ ಸಾಹಿತ್ಯವು ಸಮಾಜಕ್ಕೆ ಹೇಳಿ ಮಾಡಿಸಿದಂತಿತ್ತು: ಶೂದ್ರ ಶ್ರೀನಿವಾಸ್
“ರಾಮಮೂರ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿಯು ಸರಣಿ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂದಿಸಿದ್ದಾರೆ. ವ್ಯಕ್ತಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆತನು ಟಿನ್‌ಪ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಮಹಿಳೆಯರನ್ನು ಗುರುತಿಸಿ ಮೊಬೈಲ್ ಫೋನ್‌ಗಳನ್ನು ಕಳುವು ಮಾಡುತ್ತಿದ್ದನು ಹಾಗೂ ಮೊಬೈಲ್ ಫೋನ್‌ನಲ್ಲಿ ಇರುತ್ತಿದ್ದ ಸಿಮ್ ಕಾರ್ಡ್‌ಗಳನ್ನು ಬೇರೊಂದು ಮೊಬೈಲ್ ಫೋನ್‌ಗೆ ಹಾಕಿ ಫೋನ್ ಪೇ, ಗೂಗಲ್ ಪೇಗಳ ಪಿನ್ ಕೋಡ್‌ಗಳನ್ನು ಬದಲಿಸಿ ಅವುಗಳ ಮೂಲಕ ಕಳುವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿದ ಬ್ಯಾಂಕ್‌ಗಳಲ್ಲಿರುವ ಹಣವನ್ನು ಬೇರೊಂದು ಪರಿಚಯಸ್ಥನ ಅಕೌಂಟ್ ನಂಬರ್‌ಗೆ ವರ್ಗಾವಣೆ ಮಾಡಿ ನಂತರ ಪರಿಚಯಸ್ಥನಿಂದ ಹಣವನ್ನು ಪಡೆದುಕೊಳ್ಳುತ್ತಿದ್ದನು. ಈ ರೀತಿ ಪಡೆದ ಹಣವನ್ನು ಅನ್‌ಲೈನ್‌ನಲ್ಲಿ ಇಸ್ಪೀಟ್ ಆಡಲು ಖರ್ಚು ಮಾಡುತ್ತಿದ್ದನು. ಆತನಿಂದ ₹8 ಲಕ್ಷ ಮೌಲ್ಯದ ಒಟ್ಟು 38 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದರು.