ಭಾಲ್ಕಿ-ಹುಮನಾಬಾದ್ ರಸ್ತೆಯ ಧರಿ ಸಿದ್ದೇಶ್ವರ್ ಮಂದಿರದ ಬಳಿ ಮಾರಕಾಸ್ತ್ರ ಹಿಡಿದು ದರೋಡೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಖಟಕ ಚಿಂಚೋಳಿ ಪೊಲೀಸರು ಬಂಧಿಸಿದ್ದಾರೆ.
“ಬಂಧಿತ ನಾಲ್ಕು ಜನ ಆರೋಪಿಗಳಿಂದ ಹರಿತವಾದ ತಲ್ವಾರ್, ಮಚ್ಚು, ಕಬ್ಬಿಣದ ಪೈಪ್ ಹಾಗೂ ಖಾರದ ಪುಡಿ ವಶ ಪಡಿಸಿಕೊಳ್ಳಲಾಗಿದೆ. ನಾಲ್ಕರಲ್ಲಿ ಇಬ್ಬರ ಮೇಲೆ ಈ ಮೊದಲು ಮಾರಣಾಂತಿಕ ಹಲ್ಲೆ, ಸುಲಿಗೆ, ಮನೆ ಕಳ್ಳತನ ಪ್ರಕಣಗಳು ದಾಖಲಾಗಿದ್ದು, ತಪ್ಪಿಸಿಕೊಂಡ ಓರ್ವ ಆರೋಪಿತನ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಕಳೆದ ವರ್ಷ ಕ್ರಮ ಕೈಕೊಳ್ಳಲಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರ ತಡರಾತ್ರಿ ದರೋಡೆಗೆ ಸಂಚು ರೂಪಿಸಿದ್ದ ಐದು ಜನ ಆರೋಪಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಾಹನಗಳಿಗೆ ಸಂಚು ಹಾಕುತ್ತಿದ್ದ ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಗ್ರಾಮೀಣ ಠಾಣೆ ಪಿಎಸ್‌ಐ ಹಣಮಂತ ಹಾಗೂ ಸಿಬ್ಬಂದಿ ನಡೆದ ಕಾರ್ಯಾಚರಣೆಯಲ್ಲಿ ಐವರ ಪೈಕಿ ನಾಲ್ವರನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸುಸ್ತಿ ಸಾಲಗಳ ಬಡ್ಡಿ ಮನ್ನಾ; ಅವಧಿ ವಿಸ್ತರಿಸಲು ರೈತ ಸಂಘ ಆಗ್ರಹ
ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕು ಜನ ಡಕಾಯತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಅಧಿಕಾರಿ, ಸಿಬ್ಬಂದಿಯವರ ಪ್ರಶಂಸನಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.