ಪಠ್ಯಪುಸ್ತಕಗಳಲ್ಲಿ ಸಣ್ಣ ಬದಲಾವಣೆ ಕುರಿತು ಸೂಚಿಸಬೇಕಿಲ್ಲ: ಎನ್‌ಸಿಇಆರ್‌ಟಿ

Date:

Advertisements
  • ಪ್ರತಿವರ್ಷ ಪಠ್ಯಪರಿಷ್ಕರಣೆ ಸಾಮಾನ್ಯ ಎಂದ ಮಂಡಳಿ
  • 12ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಅನೇಕ ವಿಷಯ ಕಡಿತ

ಶಾಲಾ ಪಠ್ಯಪುಸ್ತಕಗಳಲ್ಲಿ ಸಣ್ಣ ಬದಲಾವಣೆ ಮಾಡುವುದು ಸ್ವಾಭಾವಿಕ. ಅವುಗಳ ಬಗ್ಗೆ ಸೂಚನೆ ನೀಡಬೇಕಾಗಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹೇಳಿದೆ.

ಮಂಡಳಿ ನೀಡುವ ಸಿಬಿಎಸ್‌ಇ 12ನೇ ತರಗತಿಯ ಪ್ರಸಕ್ತ ವರ್ಷದ ಇತಿಹಾಸ ಪಠ್ಯದಲ್ಲಿ ನಾಥೂರಾಮ್‌ ಗೋಡ್ಸೆ, ಹಿಂದೂ ಭಯೋತ್ಪಾದಕರ ಪಾತ್ರ, 2002ರ ಗುಜರಾತ್‌ ಹಿಂಸಾಚಾರ ಕುರಿತ ಕೆಲವು ವಾಕ್ಯಗಳನ್ನು ಕಡಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಕುರಿತು ಮಂಡಳಿ ತನ್ನ ಅಧಿಕೃತ ಜಾಲತಾಣದಲ್ಲಿ ಭಾನುವಾರ (ಏಪ್ರಿಲ್‌ 16) ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಉಂಟಾಗುವ ಯಾವುದೇ ಗೊಂದಲ ತಪ್ಪಿಸಲು ಸಣ್ಣ ಅಳಿಸುವಿಕೆಗಳನ್ನು ಸೂಚಿಸದ ಕಾರಣ ಕಳೆದ ವರ್ಷ ಪ್ರಕಟಿಸಿದ ಅಳಿಸುವಿಕೆಗಳ ಅಧಿಕೃತ ಪಟ್ಟಿಯಲ್ಲಿ ತೆರವುಗೊಳಿಸಿದ ಭಾಗಗಳು ಕಾಣಿಸಿಕೊಂಡಿಲ್ಲ” ಎಂದು ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

Advertisements

“ಪರಿಷ್ಕರಿಸಿದ ಪಠ್ಯಪುಸ್ತಕಗಳು ಮುದ್ರಣದಲ್ಲಿದ್ದಾಗ ಪ್ರತಿ ಪುಸ್ತಕದ ಪರಿಷ್ಕರಣೆಯ ವಿವರಗಳನ್ನು ಪಠ್ಯಪುಸ್ತಕದೊಂದಿಗೆ ಪಿಡಿಎಫ್ ರೂಪದಲ್ಲಿ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪಠ್ಯಪುಸ್ತಕಗಳ ಮರುಮುದ್ರಣ ಕಾರ್ಯ ಪ್ರತಿ ವರ್ಷ ನಡೆಯುವ ನಿಯಮಿತ ಪ್ರಕ್ರಿಯೆ” ಎಂದು ಎನ್‌ಸಿಇಆರ್‌ಟಿ ಹೇಳಿಕೆಯಲ್ಲಿ ತಿಳಿಸಿದೆ.

“ಪರಿಷ್ಕರಣೆಯ ಹಂತದಲ್ಲಿ ಪಠ್ಯದಲ್ಲಿನ ಒಂದು ವಾಕ್ಯ, ಪದ, ಅನೇಕ ವಾಕ್ಯಗಳನ್ನು ತೆರವುಗೊಳಿಸಲಾಗಿದೆ. ಇವುಗಳನ್ನು ಪರಿಷ್ಕರಣೆಯ ಪಟ್ಟಿಯಲ್ಲಿ ತಿಳಿಸಿಲ್ಲ. ಪಠ್ಯಪುಸ್ತಕಗಳ ಮರುಮುದ್ರಣದಲ್ಲಿ ಇದು ಸಾಮಾನ್ಯ” ಎಂದು ಮಂಡಳಿ ಹೇಳಿಕೆ ತಿಳಿಸಿದೆ.

“2022-23ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಿಸಿದ ನಂತರ ಪಠ್ಯದಲ್ಲಿ ಯಾವ ವಿಷಯವನ್ನೂ ತೆರವುಗೊಳಿಸಿಲ್ಲ. ಪಠ್ಯಪುಸ್ತಕಗಳಲ್ಲಿ ಸಣ್ಣ ಬದಲಾವಣೆ ಹಳೆಯದಾದ, ಹೆಚ್ಚಿನ ಮಾಹಿತಿ ಒಳಗೊಂಡಿತ್ತು. ವಿದ್ಯಾರ್ಥಿಗಳ ಅಧ್ಯಯನ ದೃಷ್ಟಿಯಿಂದ ಇವುಗಳನ್ನು ಸರಳಗೊಳಿಸಲಾಗಿದೆ” ಎಂದು ಎನ್‌ಸಿಇಆರ್‌ಟಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ ಸರ್ಕಾರ ಸಮಾರಂಭದಲ್ಲಿ ಬಿಸಿಲಿನ ಝಳಕ್ಕೆ 11 ಮಂದಿ ಸಾವು

2022ರ ಜೂನ್‌ನಲ್ಲಿ ಮರುಮುದ್ರಣ ಪುಸ್ತಕಗಳಲ್ಲಿ ಕಡಿತಗೊಳಿಸಿದ ಭಾಗಗಳನ್ನು ಎನ್‌ಸಿಇಆರ್‌ಟಿ ಪ್ರಕಟಿಸಿತ್ತು. ಆ ಪಠ್ಯಪುಸ್ತಕಗಳು ಇತ್ತೀಚೆಗೆ ಮಾರುಕಟ್ಟೆಗೆ ಬಂದಿವೆ.

ಆದರೆ ಮಹಾತ್ಮ ಗಾಂಧಿ ಹಾಗೂ ಇತರ ವಿಷಯಗಳ ಅಳಿಸುವಿಕೆಯ ಬಗ್ಗೆ ಮಂಡಳಿ ಸೂಚನೆ ನೀಡಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X