ಲೋಕಸಭಾ ಚುನಾವಣೆ | ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯಾಗುವರೇ ಅಣ್ಣಾಮಲೈ?

Date:

Advertisements

ಲೋಕಸಭಾ ಚುನಾವಣೆಗೆ ಕೆಲವು ವಾರಗಳು ಬಾಕಿ ಇವೆ. ತನ್ನ ನೆಲೆಯೇ ಇಲ್ಲದ ತಮಿಳುನಾಡಿನಲ್ಲಿ ಕಮಲ ಅರಳಿಸಲು ಬಿಜೆಪಿ ನಾನಾ ರೀತಿಯ ತಂತ್ರಗಳನ್ನು ಎಣೆಯುತ್ತಿದೆ. ತಮಿಳಿಗರನ್ನು ಬಿಜೆಪಿಯತ್ತ ಸೆಳೆಯಲು ಬಿಜೆಪಿ ಪ್ರಧಾನಿ ಮೋದಿ ಅವರನ್ನೇ ತಮಿಳುನಾಡಿನಲ್ಲಿ ಕಣಕ್ಕಿಳಿಸಲು ಚಿಂತಿಸುತ್ತಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಇದೇ ವೇಳೆ, ತಮಿಳುನಾಡಿನ ಬಿಜೆಪಿ ರಾಜಾಧ್ಯಕ್ಷ ಕೆ ಅಣ್ಣಾಮಲೈ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವೇ ಎಂಬ ಕುರಿತೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಅಂದಹಾಗೆ, ದ್ರಾವಿಡ ಚಳುವಳಿ ಮೂಲಕ ಹುಟ್ಟಿದ ಪಕ್ಷಗಳು ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಾ ಬಂದಿವೆ. ಕಾಂಗ್ರೆಸ್‌ ಒಂದು ಹಂತದಲ್ಲಿ ತನ್ನ ನೆಲೆಯನ್ನು ಹೊಂದಿದ್ದರೂ, ಬಿಜೆಪಿಗೆ ಅಲ್ಲಿ ನೆಲೆಯಿಲ್ಲ. ದ್ರಾವಡ ಸಿದ್ದಾಂತವನ್ನು ನಂಬಿರುವ ತಮಿಳರು ಬಿಜೆಪಿಯ ಕೋಮುವಾದವನ್ನು ವಸ್ತಿಲಿನಲ್ಲೇ ಒದ್ದೋಡಿಸುತ್ತಿದೆ. ಇತ್ತೀಚೆಗೆ, ಬಿಜೆಪಿ ಜೊತೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಎಐಎಡಿಎಂಕೆ ಕೂಟ ಬಿಜೆಪಿ ಜೊತೆಗಿನ ಸಖ್ಯ ತೊರೆದಿದೆ. ಈಗ, ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿದೆ.

ಇಂತಹ ರಾಜ್ಯದಲ್ಲಿ ಮಾಜಿ ಐಎಎಸ್‌ ಅಧಿಕಾರಿ ಬಿಜೆಪಿಯ ಜವಬ್ದಾರಿ ಹೊತ್ತಿದ್ದಾರೆ. ಕೇಸರಿ ಪಕ್ಷದಲ್ಲಿ ತಮ್ಮ ರಾಜಕೀಯ ಆರಂಭಿಸಲು ತಮ್ಮ ವೃತ್ತಿಯನ್ನೇ ತೊರೆದು ಬಂದಿದ್ದಾರೆ. ಅವರು ರಾಜ್ಯದಲ್ಲಿ ಪಕ್ಷವನ್ನು ಎಳೆದೊಯ್ಯುವುದೇ ಸವಾಲಾಗಿದೆ.

Advertisements

ಅಣ್ಣಾಮಲೈ ಅವರು ತಮಿಳುನಾಡಿನಾದ್ಯಂತ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ದ್ರಾವಿಡ ಪಕ್ಷಗಳ – ಆಡಳಿತಾರೂಢ ಡಿಎಂಕೆ ಮತ್ತು ತಮ್ಮ ಸಕ್ಯ ತೊರೆದ ಎಐಎಡಿಎಂಕೆ – ಆಡಳಿತದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಅಣ್ಣಾಮಲೈ ಅವರ ರಾಜಕೀಯವನ್ನು ವೀಕ್ಷಿಸಲು ರಾಜಕೀಯ ವಿಶ್ಲೇಷಕ ರಾಜಾ ಎಂ ಷಣ್ಮುಘಂ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. “ರಾಜ್ಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಒಟ್ಟು ಮತಗಳು ಸುಮಾರು 50%ಗೂ ಹೆಚ್ಚಿದೆ. ನಂತರ ಸ್ಥಾನಗಳಲ್ಲಿ, ಅನೇಕ ಜಾತಿ ಆಧಾರಿತ ಸಣ್ಣ ಪಕ್ಷಗಳಿವೆ. ಈಗಲೂ ತಮಿಳುನಾಡಿನಲ್ಲಿ ಸ್ವತಂತ್ರವಾಗಿರುವ ಮತದಾರರ ಒಂದು ಗಣನೀಯ ಭಾಗವಿದೆ. ಅವರನ್ನು ಬಿಜೆಪಿಯತ್ತ ಸೆಳೆಯುವುದು ಅಣ್ಣಾಮಲೈಗೆ ಸುಲಭದ ದಾರಿಯಲ್ಲ” ಎಂದು ಅವರು ಹೇಳುತ್ತಾರೆ.

ಅವರ ಪ್ರಕಾರ, ಅಣ್ಣಾಮಲೈ ಸಾಮಾನ್ಯ ತಮಿಳಿಗರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಮಾತನಾಡುತ್ತಾರೆ. ಇದಲ್ಲದೆ, ಎರಡು ಪ್ರಮುಖ ಪಕ್ಷಗಳ ಬಗ್ಗೆ ಅವರ ಪಟ್ಟುಬಿಡದ ಟೀಕೆಗಳನ್ನು ಮಾಡುತ್ತಿದ್ದಾರೆ.

“2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆಯು ಸುಮಾರು 3.5% ಇತ್ತು. ಆದರೆ, 2014ರಲ್ಲಿ ಅದು ಸರಿಸುಮಾರು 19% ಇತ್ತು. ಏಕೆಂದರೆ, 2019ರಲ್ಲಿ ಬಿಜೆಪಿಯು ಕೇವಲ 5 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಆದರೆ, 2014ರಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಈ ಬಾರಿ, ಅಣ್ಣಾಮಲೈ ಅವರಿಂದ ಅಂತಹ ಯಾವುದೇ ಪಾವಾಡಗಳು ನಡೆಯುವ ನಿರೀಕ್ಷೆಗಳಿಲ್ಲ. ಈ ಬಾರಿ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ 15% ರಷ್ಟು ಮತಗಳನ್ನು ಪಡೆದರೆ, ಅದೇ ಅಣ್ಣಾಮಲೈಗೆ ಸಂತೋಷ ಕೊಡಬಹುದು” ಎಂದು ಅವರು ಹೇಳುತ್ತಿದ್ದಾರೆ.

ಕೊಯಮತ್ತೂರಿನಲ್ಲಿ ಷಣ್ಮುಘಂ ಅವರು ಕೆಲವರನ್ನು ಮಾತನಾಡಿಸಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಅಣ್ಣಾಮಲೈ ಹೆಸರು ಕೇಳುತ್ತಲೇ, ತಿರಸ್ಕೃತ ಭಾವನೆ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಒಬ್ಬರಾದ, ಹಿರಿಯ ವಕೀಲ ಜ್ಞಾನಭಾರತಿ ಎಂಬವರು ‘ಅಣ್ಣಾಮಲೈ ಒಬ್ಬ ಜೋಕರ್’ ಎಂದಿದ್ದಾರೆ. ಹಿರಿಯ ಪತ್ರಕರ್ತ ಕೆ.ಎಸ್‌ ವೇಲಾಯು ಎಂಬವರು, ‘ಅಣ್ಣಾಮಲೈ ತಮಿಳು ಮತದಾರರನ್ನು ಓಲೈಸಲು ಸಾಧ್ಯವೇ ಇಲ್ಲ’ ಎಂದು ಭಾವಿಸಿದ್ದಾರೆ.

ಮತ್ತೊಬ್ಬ ಪತ್ರಕರ್ತ, ತಮಗೆ ಅಣ್ಣಾಮಲೈ, ಮೋದಿ ಮತ್ತು ಬಿಜೆಪಿ ಬಗೆಗಿನ ಅಸಹ್ಯ ಭಾವನೆಯನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ತಮಿಳರು ಬಿಜೆಪಿಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈಗಲೂ ಅವರ ನಾಯಕರು ನಮ್ಮ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದ್ದಾರೆ. ದೆಹಲಿಯ ಆಡಳಿತವು ರಾಜ್ಯದ ವಿರುದ್ಧ ತಾರತಮ್ಯ ಮಾಡುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೈತ್ರಿ ಕಗ್ಗಂಟು | ರಾಹುಲ್ ವಯನಾಡ್ ಡೌಟು, ಕರ್ನಾಟಕದಿಂದ ಸ್ಪರ್ಧೆ ಸಾಧ್ಯತೆ

ಬಿಜೆಪಿ ಬೆಂಬಲಿಗರು ಹೇಳುವಂತೆ, ರಾಜ್ಯದಲ್ಲಿ 60 ವರ್ಷಗಳಿಂದ ದ್ರಾವಿಡ ಪಕ್ಷಗಳು ರಾಜ್ಯದ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿವೆ. ಅಣ್ಣಾಮಲೈ ವಿರುದ್ಧ ಪೂರ್ವಾಗ್ರಹವಿಲ್ಲದ ಮುಖ್ಯವಾಹಿನಿಯ ಪತ್ರಕರ್ತರನ್ನು ಕಾಣುವುದೇ ಅಪರೂಪವಾಗಿದೆ.

ಷಣ್ಮುಘಂ ಅವರ ಪ್ರಕಾರ, ಅಣ್ಣಾಮಲೈ ಅವರು ಮತದಾರರನ್ನು ರಾಜ್ಯದಲ್ಲಿ ಓಡಾಡುತ್ತಿದ್ದಾರೆ.  ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಸತ್ಯವೆಂದರೆ, ಅಣ್ಣಾಮಲೈ ಅವರನ್ನು ಇಷ್ಟಪಡುವವರು ಕೂಡ ಅಣ್ಣಾಮಲೈ ಬಿಜೆಪಿಯಲ್ಲಿರುವುದನ್ನು ಸಹಿಸುವುದಿಲ್ಲ. ಅಣ್ಣಾಮಲೈ ಬಿಜೆಪಿಯಲ್ಲಿ ಇರಬಾರದು ಎಂದು ಅವರು ಆಶಿಸುತ್ತಾರೆ.

ಮತ್ತೊಂದು ಸಂಗತಿ ಎಂದರೆ, ತಮಿಳುನಾಡಿನಲ್ಲಿ ನಡೆದ ‘ಸಿ ವೋಟರ್’ ಸಮೀಕ್ಷೆ ಪ್ರಕಾರ, ತಮಿಳು ರಾಜ್ಯದಲ್ಲಿ ಮೋದಿಗಿಂತ ರಾಹುಲ್‌ ಗಾಂಧಿಯೇ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X