ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ದಾವಣಗೆರೆ ಜಯದೇವ ವೃತ್ತದಿಂದ ದಾವಣಗೆರೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅವರ ಕಚೇರಿವರೆಗೆ ಮೆರವಣಿಗೆ ತೆರಳಿ ಶಾಸಕರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಪ್ರಸ್ತುತ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮವಾದ ಆಯ-ವ್ಯಯ ಮಂಡಿಸಿರುತ್ತಾರೆ. ಆದರೆ ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ಅವರು ಆರನೇ ಗ್ಯಾರಂಟಿಯಾಗಿ ಭರವಸೆ ನೀಡಿದ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ₹15,000 ಮತ್ತು ಸಹಾಯಕಿಯರಿಗೆ ₹10.000ಕ್ಕೆ ಹೆಚ್ಚಿಸುವ ಹಾಗೂ ನಿವೃತ್ತರಿಗೆ ಮೂರು ಲಕ್ಷ ಇಡಿಗಂಟು ನೀಡುವ ಭರವಸೆಯನ್ನು ಜಾರಿ ಮಾಡಿಲ್ಲ” ಎಂದು ಪ್ರತಿಭಟಿಸಿದರು.
“ರಾಜ್ಯಾದ್ಯಂತ ಎಲ್ಲ ಶಾಸಕರ ಕಚೇರಿ ಬಳಿ ಧರಣಿ ನಡೆಸಿ ಈ ಮೂಲಕ ಮಯಖ್ಯಮಂತ್ರಿಯವರಿಗೆ ಮನವಿ ಮಾಡುತ್ತಿದ್ದೇವೆ. ಶಾಸಕರು ದಯಮಾಡಿ ಸಿಎಂ ಗಮನ ಸೆಳೆದು ನಮ್ಮಗಳ ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಬೇಕು. ನಮ್ಮಗಳ ಬೇಡಿಕೆಗೆ ಸ್ಪಂದಿಸಿ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಯತ್ನ
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರುಗಳಾದ ಉಮೇಶ್ ಆವರಗೆರೆ, ಚಂದ್ರು, ವಕೀಲ ಅರುಣಕುಮಾರ್, ಶಾರದಮ್ಮ, ನಿರ್ಮಲಾ, ಸುಧಾ, ಮಲ್ಲಮ್ಮ, ಗೀತಾ, ರೇಣುಕಾ ಹಾಗೂ ಕಾರ್ಯಕರ್ತರು ಇದ್ದರು.