ಈವರೆಗೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಅಡಿಕೆ, ತೆಂಗಿನಕಾಯಿಗಳನ್ನು ಕುದಿಯುತ್ತಿದ್ದ ಕಳ್ಳರು, ಈಗ ಬೆಳ್ಳುಳ್ಳಿಯನ್ನೂ ಕದಿಯಲಾರಂಭಿಸಿದ್ದಾರೆ ಬೆಲೆ ಏರಿಕೆಯಾಗುತ್ತಿರುವ ಫಸಲುಗಳನ್ನು ಕದಿಯುತ್ತಿರುವ ಕಳ್ಳರು, ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿಯಲ್ಲಿ ಬೆಳ್ಳುಳ್ಳಿ ಕದಿದ್ದಾರೆ. ಬೆಳ್ಳುಳ್ಳಿ ಕಳವಾಗಿರುವುದು ರೈತರಲ್ಲಿ ಆತಂಕ ಹುಟ್ಟುಹಾಕಿದೆ.
ಕಡರನಾಯ್ಕನಹಳ್ಳಿಯ ಚಂದ್ರಮ್ಮ ಎಂಬುವವರು ಎರಡು ಎಕರೆ ಜಮೀನನ್ನು ಗುತ್ತಿಗೆ ಪಡೆದಿದ್ದರು. ಮಳೆಯಾಗದೇ ನೀರಿಲ್ಲದೇ ಬರಗಾಲದಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬೆಳೆದಿದ್ದರು. ಆದರೆ, ಮಂಗಳವಾರ (ಫೆ.27) ಬೆಳಗಿನ ಜಾವ ಸುಮಾರು ಎರಡು ಕ್ವಿಂಟಲ್ ತೂಕದ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕದ್ಯೋಯ್ದಿದ್ದಾರೆ.
ಕಳ್ಳತನವಾಗಿರುವ ಬೆಳ್ಳುಳ್ಳಿ ಮೌಲ್ಯ ಸುಮಾರು 80,000ರೂ. ಎಂದು ಅಂದಾಜು ಮಾಡಲಾಗಿದೆ. ಗ್ರಾಮದಲ್ಲಿ ರೇಣುಕಾ ಯಲ್ಲಮ್ಮನ ಜಾತ್ರೆಯ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಈ ಘಟನೆ ನಡದಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಈ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಭದ್ರಾ ಅಚ್ಚುಕಟ್ಟು ಪ್ರದೇಶವಾಗಿದ್ದೂ, ಕಾಲುವೆ ನೀರು ಇಲ್ಲಿಗೆ ತಲುಪುವುದಿಲ್ಲ. ಮಳೆಯಾಶ್ರಿತ ಬೆಳೆಗಳ ಮೇಲೆ ರೈತರು ಅವಲಂಬಿತರಾಗಿದ್ದಾರೆ.
ಬೋರ್‌ವೆಲ್ ನೀರು ಬಳಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳಿಗೆ ಇಂತಹ ಪರಿಸ್ಥಿತಿ ಎದುರಾದರೆ ರೈತರು ಫಸಲನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತರು ಕಣ್ಣೀರಾಗುತ್ತಾರೆ.