ಉತ್ತರಾಖಂಡದ ಸುರಂಗ ಕಾರ್ಮಿಕರನ್ನು ರಕ್ಷಿಸಿದ್ದ ವಕೀಲ್ ಹಸನ್ ಮನೆ ಧ್ವಂಸಗೊಳಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ!

Date:

Advertisements

ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವ ಉಳಿಸಿದ್ದ ‘ಇಲಿ ಬಿಲ ಗಣಿಗಾರಿಕೆ’ (ರ‌್ಯಾಟ್ ಹೋಲ್‌ ಮೈನಿಂಗ್‌) ತಂತ್ರಗಾರಿಕೆ ಮೂಲಕ ರಂಧ್ರ ಕೊರೆಯುವ ಗುಂಪಿನ ನೇತೃತ್ವ ವಹಿಸಿದ್ದ ವಕೀಲ್ ಹಸನ್ ಅವರ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.

ಅಕ್ರಮ ಒತ್ತುವರಿಯ ನೆಪವೊಡ್ಡಿ ಫೆಬ್ರವರಿ 28ರ ಬುಧವಾರದಂದು ಡಿಡಿಎ ಅಧಿಕಾರಿಗಳು ಬುಲ್ಡೋಜರ್ ಅನ್ನು ತಂದು ವಕೀಲ್ ಹಸನ್ ಅವರ ಮನೆಯನ್ನು ಕೆಡವಿದ್ದಾರೆ. ಅವರ ಮನೆಯನ್ನು ಧ್ವಂಸಗೊಳಿಸಿದಾಗ ಹಸನ್ ಅವರನ್ನು ಪೊಲೀಸರು ಬಂಧಿಸಿದ್ದರು ಎಂದು ತಿಳಿದುಬಂದಿದೆ.

“ಮನೆ ಕೆಡಹುವ ಮುನ್ನ ಡಿಡಿಎ ನನಗೆ ಯಾವುದೇ ನೋಟಿಸ್ ನೀಡಿರಲಿಲ್ಲ ಎಂದು ಹಸನ್ ತಿಳಿಸಿದ್ದು, “ಉತ್ತರಾಖಂಡದ ಕಾರ್ಮಿಕರನ್ನು ರಕ್ಷಿಸಿದಾಗ ನನಗೆ ಕೋಟಿ ರೂಪಾಯಿಯ ಬಹುಮಾನ ಘೋಷಿಸಿದ್ದರು. ಆದರೆ ನನಗೆ ನನ್ನ ಮನೆಯನ್ನು ಮಾತ್ರ ಬಹುಮಾನವಾಗಿ ನೀಡಿ ಎಂದು ಕೇಳಿದ್ದೆ. ಅದನ್ನು ನೀಡುವ ಬದಲಾಗಿ, ಡಿಡಿಎ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ನನ್ನ ಮನೆಯನ್ನು ಕೆಡವಿದ್ದಾರೆ” ಎಂದು ದೆಹಲಿಯಲ್ಲಿ ರಾಕ್‌ವೆಲ್ ಎಂಟರ್‌ಪ್ರೈಸಸ್ ಎಂಬ ರಾಟ್‌ ಹೋಲ್‌(Rat Miner) ಮೈನಿಂಗ್‌ ಸಂಸ್ಥೆ ನಡೆಸುತ್ತಿರುವ ವಕೀಲ್ ಹಸನ್ ತಿಳಿಸಿದ್ದಾರೆ.

Advertisements

ಕಳೆದ ವರ್ಷ ನವೆಂಬರ್ 15ರಂದು ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ಫಲಪ್ರದವಾಗದಿದ್ದಾಗ,  ಹಸನ್ ಮತ್ತವರ ಇಲಿ ಗಣಿಗಾರರ ತಂಡವನ್ನು ಸಿಲ್ಕ್ಯಾರಾಕ್ಕೆ ಕರೆಸಲಾಗಿತ್ತು. ಇವರ ತಂಡದ ನಿರಂತರ ಶ್ರಮದ ಫಲವಾಗಿ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿತ್ತು. 17 ದಿನಗಳ ನಂತರ ಕಾರ್ಮಿಕರು ಹೊರ ಬಂದಿದ್ದರು.

ಈ ಪ್ರಯತ್ನಕ್ಕೆ ಇವರ ತಂಡವನ್ನು ಇಡೀ ದೇಶವೇ ಕೊಂಡಾಡಿತ್ತು. ಇವರ ಶ್ರಮಕ್ಕೆ ಉತ್ತರಾಖಂಡದ ಮುಖ್ಯಮಂತ್ರಿ ಪರಿಹಾರ ಮೊತ್ತವನ್ನು ಘೋಷಿಸಿದ್ದರು. ಇದನ್ನು ಸ್ವೀಕರಿಸಲು ನಿರಾಕರಿಸಿದ್ದ ವಕೀಲ್ ಹಸನ್ ಅವರ ತಂಡ, “ನಾವು ದೇಶದ ಸೇವೆ ಮಾಡಿದ್ದೇವೆ. ಅದಕ್ಕಾಗಿ ನಮಗೆ ಹಣ ಬೇಡ” ಎಂದು ಮೊತ್ತವನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು. ಅಂದು ಹೀರೋ ಆಗಿದ್ದ ವ್ಯಕ್ತಿ, ಇಂದು ಮನೆ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ.

ಈ ಘಟನೆಯನ್ನು ಖಂಡಿಸಿರುವ ಟಿಎಂಸಿಯ ರಾಜ್ಯಸಭಾ ಸಂಸದೆ ಸಾಗರಿಕಾ ಘೋಸ್ಮ ಇದೊಂದು ನಿಜಕ್ಕೂ ದುರಂತ ಮತ್ತು ನಾಚಿಕೆಗೇಡು ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X