ವಿಜಯನಗರ | ಕಟ್ಟಡ ಕಾರ್ಮಿಕರ ರಕ್ಷಣೆ, ಸಾಮಾಜಿಕ ಭದ್ರತೆಗೆ ಆಗ್ರಹ

Date:

Advertisements

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ರಕ್ಷಣೆಗೆ, ಸಾಮಾಜಿಕ ಭದ್ರತೆಗೆ ಆಗ್ರಹಿಸಿ ವರ್ಷಗಟ್ಟಲೆ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು ಈವರೆಗೆ ಯಾವುದೇ ಪ್ರಯೋಜನಗಳಾಗಿಲ್ಲ. ಈಗಲಾದರೂ ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘಟನಾಕಾರರು ವಿಜಯನಗರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

“ರಾಜ್ಯ ಹಾಗೂ ದೇಶದೆಲ್ಲೆಡೆ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು. ಕಾರ್ಮಿಕರನ್ನು ರಕ್ಷಿಸಲು ಹಾಗೂ ಬೆಲೆಯೇರಿಕೆ ನಿಯಂತ್ರಣ ಸವಾಲಿನ ಬಗ್ಗೆ ಹೋರಾಟಗಳನ್ನು ಮಾಡುತ್ತಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಲ್ಯಾಣ ಮಂಡಳಿಯ ಹಣವನ್ನು ಲೂಟಿ ಮಾಡಿದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೂಲ್ ಕಿಟ್ ಖರೀದಿ ಹಗರಣಗಳ ವಿರುದ್ಧ ರಾಜ್ಯಾದ್ಯಂತ ಚಳವಳಿ ನಡೆಸಲಾಗಿದೆ. ಭಾರತೀಯ ಸಮಾಜವು ಕಟ್ಟಡ ಕಟ್ಟುವವರನ್ನು ನಾಡು ಕಟ್ಟುವರೆಂದು ಕರೆಯುತ್ತದೆ. ಮಾನವನ ಉಗಮದ ದಿನದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಶ್ರಮವಹಿಸಿದ್ದೇವೆ. ಇನ್ನೂ ಕೂಡ ನಮ್ಮ ಜವಾಬ್ದಾರಿಯನ್ನು ಪೂರೈಸಲು ಸನ್ನದ್ಧವಾಗಿದ್ದೇವೆ” ಎಂದು ಹೇಳಿದರು.

“ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯ ಕ್ಷೇತ್ರಗಳು ಕ್ಷೀಣಿಸಿದವು. ಕೃಷಿ ಬಿಟ್ಟರೆ ನಮಗೆ ನಿರಂತರ ನಿರ್ಮಾಣ ವಲಯವೇ ಈ ದೇಶದ ಆರ್ಥಿಕ ಸ್ತಂಭ. ಈ ಕ್ಷೇತ್ರದವು ಇಂದು ಕೇಂದ್ರ ಸರ್ಕಾರದ ನಿರಂಕುಶ ಕುಂಠಿತವಾಗಲು ಆರಂಭವಾಯಿತು. ಆದರೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಭವ್ಯ ಬಂಗಲೆ, ಬೃಹತ್ ಕಟ್ಟಡಗಳನ್ನು ಕಟ್ಟುತ್ತಿದ್ದೇವೆ” ಎಂದರು.

Advertisements

ರಾಜ್ಯ ಕಾರ್ಮಿಕ ಸಚಿವಾಲಯದ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕ ವಿರೋಧಿ ತಿರ್ಮಾನಗಳನ್ನು ಹಿಂದಿನ ಸರ್ಕಾರದಂತೆ, 1996ರ ಕಾಯ್ದೆ ಪ್ರಕಾರ ಖರೀದಿ ಕಾನೂನು ಇಲ್ಲದಿದ್ದರೂ ಪಿಯುಸಿ ಓದುವ ಸರಿಸುಮಾರು ಲಕ್ಷಾಂತರ ಮಕ್ಕಳಿಗೆ 1000 ಲ್ಯಾಪ್ ಟಾಪ್ ಖರೀದಿಸಿ ದುಂದುವೆಚ್ಚ ಮಾಡುವುದು ಸೇರಿದಂತೆ ವಿದ್ಯಾಭ್ಯಾಸ ಶ್ರೇಣಿಕೃತ ಅಡಿಯಲ್ಲಿ ಅವುಗಳನ್ನು ವಿತರಿಸಲು ಮುಂದಾಗಿರುವುದು ತಾರತಮ್ಯ ಮಾಡಿದಂತೆ ಆಗುವುದಿಲ್ಲವೇ, ಈ ತಿರ್ಮಾನಗಳಿಂದ ನಮ್ಮ ಮಂಡಳಿಯನ್ನು ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ. ಇದರಿಂದ ಮುಂದಿನ ಪೀಳಿಗೆಗೆ ಸಿಗಬೇಕಿರುವ ಸೌಲಭ್ಯಗಳು ಅವನತಿ ಹೊಂದಬಹುದು. ಹಾಗಾಗಿ 1996ರ ಕಾನೂನು ಕಟ್ಟಡ ಕಾರ್ಮಿಕರ ಆರೋಗ್ಯ ಮತ್ತು ಅವರ ಕುಟುಂಬದ ಇತರೆ ಸೌಲಭ್ಯಗಳ ರಕ್ಷಣೆಗೆ ಮಾತ್ರ ಇರುವುದು. ಹಾಗಾಗಿ ಕಾನೂನನ್ನು ರಕ್ಷಿಸಲು ಅವಕಾಶ ಕೊಡುವುದರ ಜತೆಗೆ ತಮ್ಮ ಅಧ್ಯತಕ್ಷತೆಯಲ್ಲಿ ಕಲ್ಯಾಣ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

“1996ರ ಕಾನೂನು ಪ್ರಕಾರ ಸೂರಿಲ್ಲದ ಕಟ್ಟಡ ಕಾರ್ಮಿಕರಿಗೆ ಪ್ರತ್ಯೇಕ ವಸತಿ ನಿವೇಶನ ಯೋಜನೆ ತಮ್ಮ ಅಭಿಪ್ರಾಯದಂತೆ ತ್ವರಿತ ಜಾರಿಗಾಗಿ ಕ್ರಮ ಕೈಗೊಳ್ಳಲು ಮುಂದಾಗಬೇಕು. ಕಟ್ಟಡ ಕಾರ್ಮಿಕರ ಮಕ್ಕಳ ಇತರೆ ಸಮಸ್ಯೆಗಳ ಪರಿಹಾರಕ್ಕೆ ಬಾಕಿ ಉಳಿದಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಮೊದಲಿನಂತೆ ಕಡಿತಗೊಳಿಸದೆ ಆದೇಶ ಮಾಡಬೇಕು. ಸಹಾಯಧನ ಮಂಜೂರು ಮಾಡಬೇಕು. ಮತ್ತು ಶೈಕ್ಷಣಿಕ ಸಹಾಯಧನ ಪ್ರತಿ ವರ್ಷದ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯ ವಿಳಂಬ ಧೋರಣೆ ಮಾಡುವುದನ್ನು ತಡೆಯಬೇಕು. ಸ್ಥಳಾಂತರ ಮಾಡಿದರೆ ನಕಲಿ ಕಾರ್ಡ್ ತಡೆಯಲು ಸಾಧ್ಯವಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೋಂದಣಿಗೊಂಡಿರುವ(ಬೊಗಸ್) ನಕಲಿ ಕಾರ್ಡ್ ರದ್ದುಗೊಳಿಸಲು ಸಮಿತಿ ರಚಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ಮೂರ್ತಿಗೆ ಅವಮಾನ ಪ್ರಕರಣ; ಆರೋಪಿತರ ಜಾಮೀನು ಅರ್ಜಿ ರದ್ದು

“1996ರ ಸೆಸ್ ಸಂಗ್ರಹ ಕಾಯ್ದೆ ರಾಜ್ಯದಲ್ಲಿ ಕಟ್ಟುನಿಟ್ಟಿನ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳನ್ನು ಕಾಯ್ದೆಗೆ ಮಾತ್ರವೇ ಬಳಸಬೇಕು. ಪ್ರಸಕ್ತ ಸಾಲಿನಲ್ಲಿ ಟೂಲ್ ಕಿಟ್ ಖರೀದಿ ನಿಲ್ಲಿಸಬೇಕು ಮತ್ತು ಹಿಂದಿನ ಸರ್ಕಾರವು ಟೂಲ್‌ಕಿಟ್ ಖರೀದಿ ಮಾಡಿದ ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಿನ ಬೆಲೆಯನ್ನು ತೋರಿಸಿರುವುದರ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ವರದಿ : ಅಂಕಲೇಶ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X