ಇಂದಿನಿಂದ (ಶುಕ್ರವಾರ) ದ್ವಿತೀಯ ಪಿಯುಪಿ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಿ, ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ವಿದ್ಯಾರ್ಥಿಗಳು ಬಸ್ ಇಲ್ಲದೆ, ಪರದಾಡಿದ್ದಾರೆ.
ಕುಣಿಗಲ್‌ನಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿರುವ ಹಿನ್ನೆಲೆ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿವಿಧ ಜಿಲ್ಲೆಗಳಿಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಕುಣಿಗಲ್ ತಾಲೂಕಿನ ಹಳ್ಳಿಗಳಿಗೆ ಬಸ್‌ಗಳಿಲ್ಲದ ಕಾರಣ, ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪರದಾಡಿದ್ದಾರೆ.
ಸಮಾವೇಶಕ್ಕೆ ಬಸ್‌ಗಳನ್ನು ನಿಯೋಜನೆ ಮಾಡಿದ ಕಾರಣದಿಂದಾಗಿ, ಗುರುವಾರ ರಾತ್ರಿ ಹಳ್ಳಿಗಳಿಗೆ ತೆರಳಿದ್ದ ಬಸ್‌ಗಳನ್ನು ಅಧಿಕಾರಿಗಳು ಮರಳಿ ಡಿಪೊಗೆ ಕರೆಸಿಕೊಂಡಿದ್ದಾರೆ. ಪರಿಣಾಮ, ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಾಗದ ಆತಂಕದಲ್ಲಿಯೇ ಆಟೋಗಳನ್ನು ಹಿಡಿದು ಪರೀಕ್ಷೆ ಬರೆಯಲು ತೆರಳಿದ್ದಾರೆ.