ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಕಸವಿಲೇವಾರಿ ಮಾಡುತ್ತಿದ್ದ ವಾಹನಕ್ಕೆ ಬೆಂಕಿ ತಗುಲಿದ್ದು, ವಾಹನ ಹೊತ್ತಿ ಉರಿದಿದೆ.
ನಿನ್ನೆ (ಫೆ.29) ಪುರಸಭೆ ಹಿಂಭಾಗ ನಿಂತಿದ್ದ ಕಸವಿಲೇವಾರಿ ವಾಹನಕ್ಕೆ ನಿಂತಲ್ಲಿಯೇ ತಡ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಗೆ ವಾಹನ ಆಹುತಿಯಾಗಿದೆ. ಪುರಸಭೆಯಲ್ಲಿ ವಾಹನಗಳಿಗೆ ಸರಿಯಾದ ಶೆಡ್ ಇಲ್ಲದೆ, ಸಮರ್ಪಕ ನಿರ್ವಹಣೆ ಇಲ್ಲದೆ ಇಂತಹ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುಸುತ್ತಿದ್ದಾರೆ.
ಪುರಸಭೆಯಲ್ಲಿ ಕಸವಿಲೇವಾರಿಗೆ 4 ಟಿಪ್ಪರ್ ವಾಹನಗಳಿವೆ. ಈ ವಾಹನಗಳಿಗೆ ವಿಮೆ ಮಾಡಿಸಿಲ್ಲ. ಪುರಸಭೆಯ ದಿವ್ಯ ನಿರ್ಲಕ್ಷ್ಯದಿಂದ ಇಂತಹ ಅವಗಢ ಸಂಭವಿಸಿದೆ ಎಂದು ಡಿಎಸ್ಎಸ್ ಸಂಚಾಲಕ ರಮೇಶ್ ಯಾರೇಕಟ್ಟೆ ಆರೋಪಿಸಿದ್ದಾರೆ.
ಪುರಸಭೆಯಲ್ಲಿ ಕಸವಿಲೇವಾರಿಗೆ ಬಳಸುವ ವಾಹನಗಳನ್ನು ಸಮರ್ಪಕವಾಗಿ ನಿರ್ವಣೆ ಮಾಡಬೇಕು. ಪೌರಕಾರ್ಮಿಕರು ವಾಹನ ಚಾಲಾಯಿಸುತ್ತಾರೆ. ಹಾಗಾಗಿ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೖಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
