ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಲಯವನ್ನು ಶಿರಹಟ್ಟಿ ಮತ ಕ್ಷೇತ್ರದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ಯ ಸಂಘಟನಾ ತಾಲೂಕ ಘಟಕದ ಅಧ್ಯಕ್ಷ ಫಕ್ಕೀರೇಶ ಮ್ಯಾಟನ್ನವರ ಮಾತನಾಡಿ, ಈ ದೇಶ ಆರ್ಥಿಕವಾಗಿ ದಿವಾಳಿಯಾಗಿ, ನಿರಂಕುಶ ಪ್ರಭುತ್ವದ ಆಡಳಿತಕ್ಕೆ ಸಿಕ್ಕು ನಲುಗಿದೆ. ದೇಶದಲ್ಲಿ ಸಾಕಷ್ಟು ಯುವಕರು ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವುಗಳನ್ನು ಮೆಟ್ಟಿನಿಲ್ಲಬೆಕಂದರೇ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕು. ಆದುದರಿಂದ ನಮ್ಮವರೇ ಆದ ನಮ್ಮ ಮನೆ ಮಗನಾದ ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠರವರನ್ನು ಗೆಲ್ಲುಸಬೇಕೆಂದು, ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ತಾಲೂಕ ಘಟಕದ ಅಧ್ಯಕ್ಷ ಜಿ.ಆರ್.ಕೊಪ್ಪದರವರು, ರಾಜಣ್ಣ ಕುಂಬಿ, ಅಂಬರೀಷ್ ತೆಂಬದಮನಿ, ಜಗದೀಶ ಹುಲಿಗೆಮ್ಮನವರ, ಫಕ್ಕೀರೇಶ ನಂದೆಣ್ಣವರ, ರಾಮು ಅಡಗಿಮನಿ, ಷಾಹಾಬ್ಜಾನ್ ಹವಾಲ್ದಾರ್, ಪಹೀಮ್ ಪಲ್ಲಿ, ರಾಜು ಕಳ್ಳಿ, ಮಾರ್ತಾಂಡ ಪೆದ್ದರವರು, ಮುತ್ತು ಕಾಂಬ್ಳಿ, ಅಜ್ಜಪ್ಪ ಬೆಳಗಟ್ಟಿ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.