ದಾವಣಗೆರೆಯ ಕೆಲವು ಬೆಣ್ಣೆ ದೋಸೆ ಹೋಟೆಲ್‌ಗಳಲ್ಲಿ ನಕಲಿ ಬೆಣ್ಣೆ ಬಳಕೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನಗರದ ಬೆಣ್ಣೆ ದೋಸೆ ಹೋಟೆಲ್‌ಗಳ ಮೇಲೆ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಅವರ ನೇತೃತ್ವದಲ್ಲಿ ಶ್ರೀ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಹಾಗೂ ರವಿ ಬೆಣ್ಣೆ ದೋಸೆ ಹೋಟೆಲ್ ಮೇಲೆ ದಾಳಿ ನಡೆದಿದೆ. ಬೆಣ್ಣೆಯನ್ನು ವಶ ಪಡಿಸಿಕೊಂಡಿದ್ದು, ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೀನಾಕ್ಷಿ ತಿಳಿಸಿದ್ದಾರೆ.
ಅಲ್ಲದೆ, ರಾಂ ಅಂಡ್ ಕೋ ಸರ್ಕಲ್‌ನಿಂದ ತೊಗಟವೀರ ಕಲ್ಯಾಣ ಮಂಟಪದವರೆಗಿನ ಅಂಗಡಿ ಮಾಲಿಕರುಗಳಿಗೆ ಆಂಗ್ಲ ನಾಮ ಫಲಕಗಳನ್ನು ತೆರೆವುಗೊಳಿಸಿ ಕನ್ನಡ ನಾಮಫಲಕಗಳನ್ನು ಹಾಕುವಂತೆ ತಿಳಿಸಿ ಜಾಗೃತಿಯನ್ನೂ ಮೂಡಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಚಂದ್ರಮೋಹನ್, ಅಧಿಕಾರಿಗಳಾದ ನಾಗರಾಜ್, ಕೊಟ್ರೇಶ್ವರ್, ಆರೋಗ್ಯ ನಿರೀಕ್ಷಕರುಗಳಾದ ಮದನ್ ಕುಮಾರ್, ಲಕ್ಷ್ಮೀ ಎನ್.ಟಿ, ದಫೇದಾರುಗಳಾದ ಪರಶುರಾಮಪ್ಪ, ಹನು ಮಂತಪ್ಪ, ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.