ಹೆತ್ತ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಎರಡು ವರ್ಷದ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.
ಸ್ಟ್ಯಾಲೀನ್ ಮಗುವಿಗೆ ಹಿಂಸೆ ನೀಡಿದ ತಾಯಿ. ಈ ಮಹಿಳೆ ಗಂಡನಿಂದ ವಿಚ್ಛೇಧನ ಪಡೆದಿದ್ದರು. ಈಕೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಎರಡು ಮೂರು ವರ್ಷದ ಮಗುವಿನ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಗುವಿನ ಮೈ ತುಂಬ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗಿದೆ. ಸ್ವತಃ ಮಗುವೇ ತೊದಲನುಡಿಯಲ್ಲಿ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ಹೇಳಿದೆ.
ಅಂಕಲ್‌ವೊಬ್ಬರು ಬಂದು ನನ್ನ ತಲೆಗೆ ಕುಕ್ಕರ್‌ನಿಂದ ಹೊಡೆದಿದ್ದಾರೆ. ಅಮ್ಮನೂ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದಿದ್ದಾರೆ ಎಂದು ಮಗು ಸ್ಥಳೀಯರ ಮುಂದೆ ಹೇಳಿಕೊಂಡಿದೆ.
ಮಗುವನ್ನು ಮನೆಯಲ್ಲಿ ಕೂಡಿಹಾಕಿ ಕೆಲಸಕ್ಕೆ ಹೋಗುತ್ತಾರೆ. ಬೆಳಿಗ್ಗೆ ಹೋಗುವಾಗ ಮನೆಗೆ ಬೀಗ ಹಾಕಿದರೇ, ರಾತ್ರಿ ಬರುವವರೆಗೂ ಮನೆಗೆ ಬೀಗ ಇರುತ್ತೇ, ಮಗು ಒಂದೇ ಮನೆಯಲ್ಲಿ ಇರುತ್ತೇ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಹೆಸರು ಪ್ರಕಟ
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಸಂಘನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಮಗುವನ್ನು ಗೃಹ ಬಂಧನದಿಂದ ರಕ್ಷಿಸಿದೆ.
ಈ ಬಗ್ಗೆ ಸಿಡಬ್ಲ್ಯೂಸಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಮತ್ತೊಂದೆಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.