ನಿನ್ನೆ ಪಾಟ್ನಾದಲ್ಲಿ ನಡೆದಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಟೀಕಿಸಿದ್ದರು. ಈಗ ಇದನ್ನೇ ಅಸ್ತವನ್ನಾಗಿಸಿಕೊಂಡಿರುವ ಬಿಜೆಪಿ ಪಾಳಯ, ಸೋಷಿಯಲ್ ಮೀಡಿಯಾದಲ್ಲಿ ‘ಮೋದಿ ಕಾ ಪರಿವಾರ್’ ಎಂಬ ಅಭಿಯಾನವನ್ನು ಆರಂಭಿಸಿದೆ.
ಪಾಟ್ನಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ನರೇಂದ್ರ ಮೋದಿ ಕುಟುಂಬದ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, “ನಮ್ಮದು ಕುಟುಂಬ ರಾಜಕಾರಣ ಅಲ್ಲ ಎಂದು ಮೋದಿ ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ” ಎಂದು ಹೇಳಿದ್ದರು.
लालू प्रसाद यादव के निजी हमले के बाद बीजेपी के तमाम दिग्गजों ने अपने प्रोफ़ाइल में जोड़ा
‘मोदी का परिवार’
राजनीति में इसे नेहले पर देहला कहते हैं pic.twitter.com/W985We1kTk
— Rubika Liyaquat (@RubikaLiyaquat) March 4, 2024
ಈಗ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ ನಾಯಕರು, ತಮ್ಮ ‘ಎಕ್ಸ್'(ಟ್ವಿಟ್ಟರ್) ಖಾತೆಗಳಲ್ಲಿ ಹೆಸರಿನ ಮುಂದೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ‘ಮೋದಿ ಕಾ ಪರಿವಾರ್’ ಅಂದರೆ ಮೋದಿಯ ಪರಿವಾರದವರು ಎಂಬರ್ಥದ ಪದವನ್ನು ಸೇರಿಸಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಹುತೇಕ ಎಲ್ಲ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘ಮೋದಿ ಕಾ ಪರಿವಾರ್’ ಅನ್ನು ಸೇರಿಸಿದ್ದಾರೆ.
ಈ ನಡುವೆ ತೆಲಂಗಾಣದ ಆದಿಲಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತನ್ನ ಭಾಷಣದಲ್ಲೂ ಲಾಲೂ ಪ್ರಸಾದ್‌ರ ಟೀಕೆಗೆ ಉತ್ತರವಾಗಿ, “ನೀವು ನನ್ನವರು, ಮೋದಿ ನಿಮ್ಮವ” ಎಂದು ತಿಳಿಸಿದ್ದಾರೆ.
“ನನ್ನ ಜೀವನವು ತೆರೆದ ಪುಸ್ತಕದಂತಿದೆ, ನಾನು ಬಾಲ್ಯದಲ್ಲಿ ನನ್ನ ಮನೆಯನ್ನು ತೊರೆದಿದ್ದೇನೆ. ನಾನು ಈ ದೇಶದ ಜನರಿಗಾಗಿ ಬದುಕುವ ಕನಸನ್ನು ಹೊಂದಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಕನಸುಗಳಿಲ್ಲ, ಆದರೆ ನಿಮ್ಮ ಕನಸುಗಳು ನನ್ನ ನಿರ್ಣಯವಾಗಿರುತ್ತದೆ” ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ.
मेरा भारत- मेरा परिवार !
आज पूरा देश एक सुर में कह रहा है-
मैं हूं मोदी का परिवार ! pic.twitter.com/KvOUoSePJc— Narendra Modi (@narendramodi) March 4, 2024
“ದೇಶದ ಕೋಟ್ಯಂತರ ಜನರು ನನ್ನನ್ನು ತಮ್ಮ ಕುಟುಂಬದ ಸದಸ್ಯನೆಂದು ಪರಿಗಣಿಸುತ್ತಾರೆ. ದೇಶದ 140 ಕೋಟಿ ಜನರಿಗೆ ನಾನು ಇದನ್ನು ಹೇಳುತ್ತೇನೆ. ನೀವು ನನ್ನ ಕುಟುಂಬ. ಯಾರೂ ಇಲ್ಲದವರಿಗೂ ಮೋದಿ ಇದ್ದಾನೆ” ಎಂದರು.
2019ರ ಚುನಾವಣೆಯಲ್ಲೂ ಇದೇ ರೀತಿ ಬಳಸಿಕೊಂಡಿದ್ದ ಬಿಜೆಪಿ
2019ರ ಲೋಕಸಭಾ ಚುನಾವಣೆಯ ಸಂದರ್ಭ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದ ರಾಹುಲ್ ಗಾಂಧಿ, “ಚೌಕೀದಾರ್ ಚೋರ್ ಹೈ” ಎಂದು ಹೇಳಿದ್ದರು. ಆಗ ಇದನ್ನೇ ಬಳಸಿಕೊಂಡಿದ್ದ ಬಿಜೆಪಿ, “ಮೈ ಭಿ ಚೌಕೀದಾರ್’ (ನಾನೂ ಸಹ ಕಾವಲುಗಾರ) ಎಂದು ಅಭಿಯಾನ ನಡೆಸಿದ್ದರು.
#WATCH | Delhi: On BJP leaders adding ‘Modi Ka Parivaar’ to their names on X after former Bihar CM Lalu Prasad Yadav’s “Parivaarvad” jibe, Congress leader Pawan Khera says, “Why are they not worried for the families of those who commit suicide, whether they are youth or farmers.… pic.twitter.com/sR3ntSE4qi
— ANI (@ANI) March 4, 2024
‘ಎಲ್ಲವೂ ಬಿಜೆಪಿಯವರ ನಾಟಕ’ ಎಂದ ಕಾಂಗ್ರೆಸ್
‘ಮೋದಿ ಕಾ ಪರಿವಾರ್’ ಅಭಿಯಾನಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಪವನ್ ಖೇರಾ, “ಈ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಮತ್ತು ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಚಿಂತೆ ಇದ್ದಿದ್ದರೆ ಅವರ ಹೆಸರಿಗೆ ರೈತ ಕುಟುಂಬ ಎಂದು ಸೇರಿಸುತ್ತಿದ್ದರು. ಪ್ರತಿ ಗಂಟೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಆ ಇಬ್ಬರು ಯುವಕರ ಆತ್ಮಹತ್ಯೆಯ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುವಂತೆ ನಾವು ಬಯಸುತ್ತೇವೆ. ಇವೆಲ್ಲವೂ ನಾಟಕ. ನೈಜ ಸಮಸ್ಯೆಗಳ ಬಗ್ಗೆ ಜನರು ಮಾತನಾಡದಂತೆ ಹಾಗೂ ಗಮನ ಬೇರೆಡೆಗೆ ಸೆಳೆಯುವಂತೆ ಮಾಡುವ ಷಡ್ಯಂತ್ರವಷ್ಟೇ” ಎಂದು ತಿಳಿಸಿದ್ದಾರೆ.
