ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಜಾದಿ ಕೀ ಅಮೃತ್ ಮಹೋತ್ಸವ ಅಡಿಯಲ್ಲಿ ನಡೆಸಿದ ತಾಲೂಕು ಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಮತೀರ್ಥ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆನ್ಲೈನ್ ರಸಪ್ರಶ್ನೆಯ ಹಿರಿಯರ ವಿಭಾಗದಲ್ಲಿ(8-10) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮತೀರ್ಥ ಶಾಲೆಯ ಮಕ್ಕಳಾದ ಶೇಕಬಾಬರ್, ಮುಸ್ತಫ ಹಾಗೂ ಅಂಕಿತಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕನ್ನಡೇತರ ನಾಮಫಲಕ ತೆರವು ಕಾರ್ಯಾಚರಣೆ
ಮಕ್ಕಳ ಸಾಧನೆಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಸುರೇಶ್, ಸಿಬ್ಬಂದಿ ವರ್ಗದವರಾದ ವಿಶ್ವನಾಥ ಸಾಳುಂಕೆ, ಭಾಗ್ಯಲಕ್ಷ್ಮೀ, ಆರತಿ, ಅಂಬಿಕಾ, ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು ಸೇರಿದಂತೆ ಸಿಆರ್‌ಪಿ ವಿಜಯಲಕ್ಷ್ಮೀ ಹೊಸಮನಿ, ಊರಿನ ನಾಗರಿಕರು ಹಾಗೂ ಮಕ್ಕಳ ಪಾಲಕರು ಇದ್ದರು.