ಪಾಸ್ಪೋರ್ಟ್ ಧೃಡಿಕರಣ ಮಾಡಲು ಬೆರಳಚ್ಚು ಅಗತ್ಯವಾಗಿದೆ. ಆದರೆ, ಹಿರಿಯ ನಾಗರಿಕರೊಬ್ಬರು ಅಪಘಾತವೊಂದರಲ್ಲಿ ತಮ್ಮ ಎರಡು ಕೈಗಳನ್ನು ಕಳೆದುಕೊಂಡ ಕಾರಣ, ರಾಜ್ಯದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅವರಿಗೆ ಕಡ್ಡಾಯ ಬೆರಳಚ್ಚು ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಿದೆ.
ಕೆ ಸುಂದರ ಮತ್ತು ಅವರ ಪತ್ನಿ ಹೆಚ್.ಕೆ ದೇವಕಿ ಅವರು ಫಿನ್ಲ್ಯಾಂಡ್ನಲ್ಲಿ ಉದ್ಯೋಗದಲ್ಲಿರುವ ತಮ್ಮ ಮಗನೊಂದಿಗೆ ವಾಸಿಸಲು ಶೀಘ್ರದಲ್ಲೇ ಫಿನ್‌ಲ್ಯಾಂಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ, ಅವರು ಮೊದಲ ಬಾರಿಗೆ ತಮ್ಮ ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಕೆ. ಸುಂದರ ಅವರು ಮಂಗಳೂರಿನ ನಿವೃತ್ತ ಮುಖ್ಯೋಪಾಧ್ಯಾಯರು. ಇವರು ತಮ್ಮ ಪುತ್ರಿ ಕೆ.ಎಸ್.ಶಿಲ್ಪಾ ಅವರ ನಿಶ್ಚಿತಾರ್ಥದ ಸಮಾರಂಭದ ಹಿಂದಿನ ದಿನ ಸ್ಟೀಲ್ ರಾಡ್ ಬಳಸಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಕೈ ಕಳೆದುಕೊಂಡಿದ್ದರು.
ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕೆ ಕೃಷ್ಣ ಅವರು ಸುಂದರ ಅವರ ಪ್ರಸ್ತುತ ಸ್ಥಿತಿಯನ್ನು ಉಲ್ಲೇಖಿಸಿ, ಅವರಿಗೆ ಬಯೋಮೆಟ್ರಿಕ್ಗಳನ್ನು ಮನ್ನಾ ಮಾಡುವಂತೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದರು.
“ಇತರಹದ ಅರ್ಜಿ ನೋಡುತ್ತಿರುವುದು ಇದೇ ಮೊದಲು. ಅಪ್ಲಿಕೇಶನ್‌ನಲ್ಲಿನ ಫೋಟೋದ ಕೆಳಗೆ ಅಗತ್ಯವಿರುವ ಸಹಿಯ ಬದಲಿಗೆ ಇಂಕ್ ಪ್ಯಾಡ್‌ನಲ್ಲಿ ಅವರ ಕಾಲ್ಬೆರಳ ಗುರುತನ್ನು ಬಳಸಲು ಸಚಿವಾಲಯ ಅನುಮತಿ ನೀಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಮೈಸೂರು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್‌ಗಾಗಿ ಮರು ಅರ್ಜಿ ಸಲ್ಲಿಸಿದ ನಂತರ ಸುಂದರ ಅವರಿಗೆ ಆದ್ಯತೆ ನೀಡಲಾಯಿತು. ಅದನ್ನು ಈಗಾಗಲೇ ಅವರ ನಿವಾಸಕ್ಕೆ ಕಳುಹಿಸಲಾಗಿದೆ” ಎಂದು ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕೃಷ್ಣ ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿನ ದುರ್ಬಳಕೆ ಮೇಲೆ ಕಣ್ಗಾವಲು; ₹5,000ವರೆಗೂ ದಂಡ
ದಕ್ಷಿಣ ಕನ್ನಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿ ಸುಂದರ ಅವರು ನಿವೃತ್ತರಾಗಿದ್ದಾರೆ. ಇವರು ಮೈಸೂರಿನಲ್ಲಿ ಮನೆ ಖರೀದಿಸಿ ಈಗ ಇಲ್ಲಿಯೇ ವಾಸವಾಗಿದ್ದಾರೆ. ಅವರು ಕೃತಕ ಕೈಗಳನ್ನು ಬಳಸುತ್ತಿದ್ದಾರೆ.
“ಮೈಸೂರಿನಿಂದ ಬೆಂಗಳೂರು ಮತ್ತು ದೆಹಲಿಯವರೆಗೆ ಎಲ್ಲರೂ ನನಗೆ ಸಹಾಯ ಮಾಡಲು ಹೊರಟಿರುವ ವಿಧಾನದ ಬಗ್ಗೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ನನ್ನ ಹೆಂಡತಿ ಮತ್ತು ನಾನು ಇಬ್ಬರೂ ಜನವರಿ 30ರಂದು ಆರಂಭದಲ್ಲಿ ಅರ್ಜಿ ಸಲ್ಲಿಸಿದ್ದೇವು. ಅವಳು ಸ್ವಲ್ಪ ಸಮಯದ ನಂತರ ಅವಳ ಪಾಸ್‌ಪೋರ್ಟ್ ಪಡೆದಳು. ಆದರೆ, ನನ್ನ ಸಮಸ್ಯೆಯಿಂದಾಗಿ ನಾನು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗಿರಲಿಲ್ಲ” ಎಂದು ಸುಂದರ್ ಅವರು ಹೇಳಿದ್ದಾರೆ.
“ಫಿನ್‌ಲ್ಯಾಂಡ್‌ನ ನೋಕಿಯಾ ಸೀಮೆನ್ಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ನಮ್ಮ ಮಗ ಶಿವರಾಜ್ ಅವರನ್ನು ಭೇಟಿ ಮಾಡಲು ಅಲ್ಲಿಗೆ ತೆರಳಬೇಕು ಎಂದು ಯೋಚನೆ ಮಾಡಿದ್ದೇವೆ. ನನ್ನ ಕೈ ಸಮಸ್ಯೆಯಿಂದಾಗಿ ವಿಶೇಷ ಒಪ್ಪಿಗೆಯನ್ನು ಪಡೆಯಬೇಕಾಗಿರುವುದರಿಂದ ಸ್ವಲ್ಪ ಕಾಯಬೇಕು ಎಂದು ನನಗೆ ತಿಳಿಸಿದ್ದರು. ಎಂಟು ವರ್ಷಗಳ ಹಿಂದೆ ನನ್ನ ಕೈಗಳನ್ನು ಕಳೆದುಕೊಂಡ ನಂತರ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದೆ” ಎಂದಿದ್ದಾರೆ.