ಕೇರಳ ಸರ್ಕಾರಕ್ಕೆ ಹೆಚ್ಚುವರಿ 13,608 ಕೋಟಿ ರೂ. ಸಾಲ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೇಂದ್ರ ಈ ಹಣವನ್ನು ತಡೆಹಿಡಿದ ಕಾರಣ ಕೇರಳ ಸರ್ಕಾರ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಉದ್ಯೋಗಿಗಳಿಗೆ ವೇತನ ಪಾವತಿಸಲು ಪರದಾಡುತ್ತಿದ್ದ ಕೇರಳಕ್ಕೆ ಹಣ ಬಿಡುಗಡೆಯಿಂದ ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಸುಪ್ರೀಂ ಕೋರ್ಟ್ ಎರಡು ಕಡೆಯ ಅರ್ಜಿದಾರರಿಗೂ ಕಾರ್ಯದರ್ಶಿ ಮಟ್ಟದಲ್ಲಿ ಸಭೆ ನಡೆಸಿ ಸಾಲಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದು ಸಹ ನಿರ್ದೇಶಿಸಿದೆ. ಸಭೆಯು ಇಂದು ಸಂಜೆ ನಡೆಯಲಿದೆ.
ಕೇರಳವು ಹೆಚ್ಚುವರಿಯಾಗಿ 21 ಸಾವಿರ ರೂ. ಕೋಟಿ ರೂ. ಸಾಲ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯನ್ನು ಕೇಂದ್ರ ವಜಾ ಮಾಡಿದ ಕ್ರಮವನ್ನು ಟೀಕಿಸಿದೆ. ರಾಜ್ಯವು ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಅಧಿಕಾರ ಹೊಂದಿದೆ. ಆದರೆ ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ ಎಂದು ಕೋರ್ಟ್ ಹೇಳಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!
ಇದೇ ವಿಷಯವಾಗಿ ಬಹಿರಂಗವಾಗಿ ವಾಗ್ದಾಳಿ ನಡೆಸುವುದನ್ನು ಕಡಿಮೆ ಮಾಡುವಂತೆ ಎರಡು ಕಡೆಯ ಅರ್ಜಿದಾರರಿಗೆ ಕೋರ್ಟ್ ಸೂಚಿಸಿದೆ.13,609 ಕೋಟಿ ರೂ. ಹೆಚ್ಚುವರಿ ಸಾಲದಲ್ಲಿ, ವಿದ್ಯುತ್ ವಲಯದ ಸುಧಾರಣೆಗಳಿಗಾಗಿ 4323 ಕೋಟಿ ರೂ. ಹಾಗೂ 1877 ಕೋಟಿ ರೂ. ಹಣವನ್ನು ಹಿಂದಿನ ವರ್ಷದ ಯೋಜನೆಗಳನ್ನು ಮುಂದುವರಿಸಲು ಹಾಗೂ 2543 ಕೋಟಿ ರೂ. ಹಣವನ್ನು ಸಾಲ ಮರುಪಾವತಿಗಾಗಿ ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾಗಿರುವ ಹಣವು ರಾಜ್ಯದ ಸಂಪೂರ್ಣ ವೇತನ ಪಾವತಿಸಲು ಹಾಗೂ ಇತರ ನಿಗದಿತ ವೆಚ್ಚಗಳಿಗೆ ಸಹಾಯವಾಗಲಿದೆ. ಆದಾಗ್ಯೂ ರಾಜ್ಯವು ತಿಂಗಳ ಕೊನೆಯಲ್ಲಿ ಹೆಚ್ಚು ಹಣವನ್ನು ಪಾವತಿಸಲು ಸಜ್ಜುಗೊಳಿಸಬೇಕಿದೆ. ಕಳೆದ ತಿಂಗಳ ಅಂತ್ಯದ ವೇಳೆಗೆ ಖಾಜನೆಯಿಂದ 22,000 ಕೋಟಿ ರೂ. ಹಣವನ್ನು ಪಾವತಿಸಬೇಕಿದೆ.
