ದಾವಣಗೆರೆಯ ಹೊರವಲಯದ ಕರೂರು ಗ್ರಾಮದಲ್ಲಿರುವ ವಿಜನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕಳೆದ ಫೆ.17 ರಂದು ‘ಮಕ್ಕಳ ಪಾಲನೆಯಲ್ಲಿ ತಾಯಿಂದಿರ ಪಾತ್ರ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಮುಸ್ಲಿಂ ಹಾಗೂ ಕುರಾನ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಲಾಗಿದೆ. ಅಲ್ಲದೆ, ಕಾರ್ಯಕ್ರಮ ನಡೆದು ಮೂರು ದಿನಗಳ ನಂತರ ಖುರಾನನ್ನು ಸುಟ್ಟುಹಾಕಿದ್ದಾರೆ ಎಂದು ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ವಾಸೀಂ ಆರೋಪಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಘಟನೆ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದರೂ, ಪೊಲೀಸರು ಎಫ್‌ಐಆಆರ್ ದಾಖಲಿಸಿಲ್ಲ” ಎಂದು ದೂರಿದ್ದಾರೆ.
“ಶಾಲೆಯ ಆಡಳಿತ ಮಂಡಳಿಯ ಸಜ್ಜಾದ್ ಗೌಸ್, ನಸೀನ್, ಹಾಜೀರ ಹಾಗೂ ಇತರರು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಅಮಾಯಕ ಮುಸ್ಲಿಂ ಮಹಿಳೆಯರು ಸೇರಿದ್ದರು. ಕಾರ್ಯಕ್ರಮದಲ್ಲಿ ಹೈದರ್‌ಬಾದ್‌ನ ಅಯಲೇ ಅದೀಸ್ ಪಂಥದ ನೂರುದ್ದೀನ್ ಉಮೇರಿ ಎಂಬುವವರು ಪ್ರಚೋದನಕಾರಿ ಭಾಷಣ ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ.
“ಕೋಟ್ಯಾಂತರ ಮುಸ್ಲಿಂರು ಪಾಲಿಸುವ, ಅನುಸರಿಸುವ ಪವಿತ್ರ ಗ್ರಂಥವಾದ ಖುರಾನ್ ಅನ್ನು ಸುಡುವಂತೆ ಪ್ರಚೋದನೆ ನೀಡಿದ್ದು.. ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾದ್ಯಾಂತ ಹರಿದಾಡಿರುತ್ತವೆ. ಇದರಿಂದ ನಮಗೆ ಧಾರ್ಮಿಕ ನೋವುಂಟಾಗಿರುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಿಂದ ಪ್ರೇರಿತರಾದ ಗ್ಲೋಬಲ್ ಶಾಲೆಯವರು ತಮ್ಮ ಶಾಲೆಯಿಂದ ಸುನ್ನಿ ಪಂಗಡದವರು ಅನುಸರಿಸುವ ಖುರಾನ್ ಪ್ರತಿಗಳನ್ನು ತಮ್ಮ ಶಾಲೆಯಿಂದ ತೆಗೆದು ಸುಟ್ಟು ಚರಂಡಿಯಲ್ಲಿ ಹಾಕಿರುತ್ತಾರೆ. ಈ ಖುರಾನ್ ಪ್ರತಿಗಳನ್ನು ಸುಡಲು ಗ್ಲೋಬಲ್ ಶಾಲೆಯ ಅಸಾದುಲ್ಲಾ, ರಸೂಲ್ ಹಾಗು ಇತರೆಯವರು ಆದೇಶ ನೀಡಿರುವುದು ಹಾಗೂ ಸುಡಲು ಸಹಾಯ ಮಾಡಿರುವುದು ತಿಳಿದು ಬಂದಿರುತ್ತದೆ.
ಇಷ್ಟಾದರೂ ಅವರುಗಳ ಮೇಲೆ ಸೋಮೊಟೊ ದಾಖಲಿಸಿ, ತನಿಖೆ ಮಾಡಬೇಕಾದ ಪೊಲೀಸರು ಮೌನವಹಿಸಿರುತ್ತಾರೆ. ಈ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮುಸ್ಲಿಂಮರು ಸೇರಿ ಪ್ರತಿಭಟಿಸಲು ಮುಂದಾದಾಗ ನಾಮಕಾವಸ್ಥೆ ಪ್ರಕರಣವನ್ನು ದಾಖಲಿಸಿದ ಪೊಲೀಸರು ಅಮಾಯಕ ನೌಕರರನ್ನು ಬಂಧಿಸಿ, ಪ್ರಕರಣವನ್ನು ಮುಚ್ಚಿಹಾಕುವಂತೆ ಕಾಣುತ್ತದೆ ಎಂದು ಆರೋಪಿಸಿದರು.
ಞಷಪೊಲೀಸರು ಇದುವರೆಗೂ ಸಹ ಎರಡು ಶಾಲೆಯ ಸಿಸಿಟಿವಿ ಪುಟೇಜ್ ಸಾಕ್ಷಿಗಳನ್ನು ಸದರಿಯವರನ್ನು ಒಳಪಡಿಸದೇ, ಮಾಡದೆ. ಕಲೆ ಹಾಕದೇ. ವಿಚಾರಣೆಗೆ ಪರೋಕ್ಷವಾಗಿ ಈ ಪ್ರಕರಣದ ಸಾಕ್ಷಿ ನಾಶಮಾಡಲು ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ. ಈ ಕುರಿತು ಮಾ.1ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸಹ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಬ್ದುಲ್ ರಜಾಕ್, ಡಿ.ಕೆ. ನಯಾಜ್, ಸುಹೇಲ್ ಖಾನ್ ಇದ್ದರು.