ಭಟ್ಕಳ ತಾಲೂಕಿನ ತಾಲ್ಲೂಕಿನ ತೆಂಗಿನಗುಂಡಿ ಬಂದರಿನ ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ಹಾರಿಸಲಾಗಿದ್ದ ಹನುಮ ಧ್ವಜ ಮತ್ತು ಅಲ್ಲಿ ಇರಿಸಲಾಗಿದ್ದ ಸಾವರ್ಕರ್ ನಾಮಫಲಕವನ್ನು ಅಧಿಕಾರಿಗಳು ಬುಧವಾರ ರಾತ್ರಿ ತೆರವುಗೊಳಿಸಿದ್ದಾರೆ.
ಈ ಹಿಂದೆ, ಜನವರಿ 28ರಂದು ಇದೇ ಜಾಗದಲ್ಲಿ ಬಿಜೆಪಿ ಮತ್ತು ಹಿಂದುತ್ವ ಕೋಮು ಕಾರ್ಯಕರ್ತರು ಹನುಮ ಧ್ವಜ ಹಾರಿದ್ದರು. ಅದನ್ನು ಹೆಬಳೆ ಗ್ರಾಮ ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿದ್ದರು.
ಆದರೆ, ಹಿಂದುತ್ವವಾದಿಗಳ ಗ್ರಾಮ ಪಂಚಾಯತಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕಳೆದ ಸೋಮವಾರ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ಅನಂತ ಕುಮಾರ್ ಹೆಗಡೆ, ತನ್ನ ಬೆಂಬಲಿಗರನ್ನು ಕರೆದೊಯ್ದು, ತೆರವುಗೊಳಿಸಿದ್ದ ಸ್ಥಳದಲ್ಲೇ ಮತ್ತೆ ಹನುಮ ಧ್ವಜ ಹಾರಿಸಿ, ಸಾವರ್ಕರ್ ನಾಮಫಲಕ ಹಾಕಿದ್ದರು.
ಘಟನೆ ಸಂಬಂಧ ಅನಂತ ಕುಮಾರ್ ಹೆಗಡೆ ಸೇರಿದಂತೆ 21 ಮಂದಿ ವಿರುದ್ಧ ಭಟ್ಕಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದೀಗ, ಧ್ವಜ ಮತ್ತು ನಾಮಫಲಕವನ್ನು ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.