ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಐದನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್ ತಂಡ, ಆರಂಭದ ಮೊದಲ ಗಂಟೆಯಲ್ಲೇ ವಿಕೆಟ್ ಕಳೆದುಕೊಂಡಿದೆ. ಭಾರತ ತಂಡದ ವೇಗಿ ಬೌಲರ್ ಕುಲದೀಪ್ ಯಾದವ್ ಅವರು ಮೊದಲ ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್‌ನ ಬೆನ್ ಡಕೆಟ್ 27 ರನ್‌ಗಳಿಗೆ ಕ್ಯಾಚ್ ಇತ್ತು, ಸ್ಕ್ರೀಜ್‌ನಿಂದ ಹೊರನಡೆದಿದ್ದಾರೆ.
ರಜತ್ ಪಾಟಿದಾರ್ ಬದಲಿಗೆ ದೇವದತ್ ಪಡಿಕ್ಕಲ್ ಅವರು ಟೆಸ್ಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಜತ್ ಗಾಯಗೊಂಡಿದ್ದಾರೆ ಎಂದು ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಪಡಿಕ್ಕಲ್ ತಮ್ಮ ಚೊಚ್ಚಲ ಕ್ಯಾಪ್ ಧರಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರು ತಮ್ಮ 100ನೇ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಕಳೆದ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಬುಮ್ರಾ ಮತ್ತೆ ತಂಡಕ್ಕೆ ಮರಳಿದ್ದಾರೆ.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತವು 5 ವಿಕೆಟ್‌ಗಳ ಜಯ ಸಾಧಿಸಿದೆ. ಟೆಸ್ಟ್ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಈಗಗಲೇ ಸರಣಿಯನ್ನು ಗೆದ್ದಾಗಿದೆ. ಒಂದು ಪಂದ್ಯದಲ್ಲಿ ಮಾತ್ರವೇ ಗೆದ್ದಿರುವ ಇಂಗ್ಲೆಂಡ್ ತನ್ನ ಇಮೇಜ್ ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಬೇಕಾದ ಉಮೇದಿನಲ್ಲಿದೆ. ಇದನ್ನೂ ಭಾರತ ತಂಡ ಗೆದ್ದರೆ, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಂತಾಗುತ್ತದೆ.
4ನೇ ಟೆಸ್ಟ್ ಬಳಿಕ, 10 ದಿನಗಳ ಬಳಿಕ ದೇಶದ ಅತ್ಯಂತ ತಣ್ಣನೆಯ ಪ್ರದೇಶ ಧರ್ಮಶಾಲಾದ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಸರಣಿಯ ಕಡೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೂಲಕ ಕ್ರಿಕೆಟ್‌ಗೆ ಮರಳಿರುವ ಭಾರತ ತಂಡದ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರು ತಮ್ಮ ತಂಡಗಳಿಗಾಗಿ 100ನೇ ಟೆಸ್ಟ್ ಆಡುತ್ತಿದ್ದಾರೆ. ಕಾಕತಾಳೀಯವೆಂಬಂತೆ ಈ ಇಬ್ಬರೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳ ಮೂಲಕವೇ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ದುರದೃಷ್ಟವಶಾತ್, ಕೆಎಲ್ ರಾಹುಲ್ ಅವರು ತಂಡದಿಂದ ಹೊರಗಿದ್ದಾರೆ. ಅವರು 3ನೇ ಟೆಸ್ಟ್ ಆರಂಭವಾದಾಗ 90% ಫಿಟ್ ಆಗಿಯೇ ಇದ್ದರು. ಅಧರೆ, ಮಧ್ಯದಲ್ಲಿ ಅವರು ಲಂಡನ್‌ಗೆ ತೆರಳಿದ್ದಾರೆ. ಇನ್ನೆರಡು ವಾರಗಳಲ್ಲಿ ಆರಂಭವಾಗುವ ಐಪಿಎಲ್‌ನಲ್ಲಿ ಅವರು ಭಾವಹಿಸಲಿದ್ದು, ಅವರು ಆರೋಗ್ಯ ಸುಧಾರಣೆ ಮತ್ತು ವಿಶ್ರಾಂತಿಗೆ ತೆರಳಿದ್ದಾರೆ ಎನ್ನಲಾಗಿದೆ. ತಂಡದಲ್ಲಿ, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ಆಕಾಶ್ ದೀಪ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.