ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಮೈಸೂರು ಮತ್ತು ತಮಿಳುನಾಡಿನ ಮನಮದುರೈ ನಡುವೆ ಎರಡೂ ಕಡೆ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸುವುದಾಗಿ ತಿಳಿದುಬಂದಿದೆ.
ವಿಶೇಷ ರೈಲು (06237) ಮಾರ್ಚ್ 11ರಂದು ಸಂಜೆ 6-35 ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಿಗ್ಗೆ 9-10ಕ್ಕೆ ತಮಿಳುನಾಡಿನ ಮನಮದುರೈ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 06238 ಮಾರ್ಚ್ 12ರಂದು ಮಧ್ಯಾಹ್ನ 12ಕ್ಕೆ ಮನಮದುರೈ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 1-55ಕ್ಕೆ ಮೈಸೂರು ತಲುಪಲಿದೆ. ಈ ವಿಶೇಷ ರೈಲು ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ತಿರುಪತ್ತೂರು, ಸೇಲಂ, ನಾಮಕ್ಕಲ್, ಕರೂರು ತಿರುಚಿರಾಪಳ್ಳಿ, ದಿಂಡಿಗಲ್ ಮತ್ತು ಮಧುರೈ ನಿಲ್ದಾಣಗಳಲ್ಲಿ ಎರಡೂ ಕಡೆ ನಿಲ್ಲಲಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮನೆಗಳ ಹಕ್ಕುಪತ್ರ ನೀಡುವಂತೆ ಮನವಿ
ಈ ವಿಶೇಷ ರೈಲಿನಲ್ಲಿ ಎಸಿ-2, ಟೈರ್-2, ಎಸಿ-3 ಟೈರ್-6, ಸ್ಲೀಪರ್ ಕ್ಲಾಸ್ ಕೋಚ್-9, ಜನರಲ್ ಸೆಕೆಂಡ್ ಕ್ಲಾಸ್ ಕೋಚ್-2 ಮತ್ತು ಬ್ರೇಕ್ ವ್ಯಾನ್ ಕಮ್ ಜನರೇಟರ್ ಬೋಗಿ-2 ಸೇರಿದಂತೆ ಒಟ್ಟಾರೆ 21 ಬೋಗಿಗಳಿವೆ.
