ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ನಡೆದಿರುವ ಆತ್ಮಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿ ಬಿಜೆಪಿಯ ಡಬಲ್ ಇಂಜಿನ್ ಆಡಳಿತದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಎಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆಯೋ, ಅಲ್ಲಿ ಜನರಿಗೆ ‘ಡಬಲ್ ಅನ್ಯಾಯ’ ಆಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟ್ಟರ್) ರಾಹುಲ್ ಗಾಂಧಿ ಬರೆದುಕೊಂಡಿದ್ದು, “ನ್ಯಾಯಕ್ಕಾಗಿ ಕಾದು ನ್ಯಾಯ ದೊರೆಯದೆ ಆತ್ಮಹತ್ಯೆ ಮಾಡಿಕೊಂಡ ಎರಡು ನಿದರ್ಶನಗಳನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇರುವಲ್ಲಿ ನ್ಯಾಯ ಕೇಳುವುದು ಅಪರಾಧ” ಎಂದಿದ್ದಾರೆ.
नरेंद्र मोदी की डबल इंजन सरकारों में हो रहे ‘डबल अन्याय’ को इन दो घटनाओं से समझिए!
UP में दो बहनों ने अपने साथ हुए दुष्कर्म के बाद फांसी लगा ली, अब न्याय न मिलने और मुकदमा वापस लेने के दबाव पर उनके पिता को भी फांसी लगानी पड़ी।
MP में एक महिला की इज़्ज़त सरेबाज़ार तार-तार हुई,…
— Rahul Gandhi (@RahulGandhi) March 7, 2024
“ನರೇಂದ್ರ ಮೋದಿಯ ಡಬಲ್ ಇಂಜಿನ್ ಸರ್ಕಾರದಲ್ಲಿ ಆಗುತ್ತಿರುವ ಡಬಲ್ ಅನ್ಯಾಯದ ಬಗ್ಗೆ ಈ ಕೆಳಗಿರುವ ಎರಡು ನಿದರ್ಶನಗಳಿಂದ ಅರ್ಥಮಾಡಿಕೊಳ್ಳಬಹುದು,” ಎಂದು ಹೇಳಿದರು ರಾಹುಲ್ ಗಾಂಧಿ ಎರಡು ಘಟನೆಗಳನ್ನು ವಿವರಿಸಿದ್ದಾರೆ.
“ಯುಪಿಯಲ್ಲಿ, ಅತ್ಯಾಚಾರಕ್ಕೊಳಗಾದ ಇಬ್ಬರು ಸಹೋದರಿಯರು ನೇಣು ಬಿಗಿದುಕೊಂಡಿದ್ದಾರೆ. ಈಗ ನ್ಯಾಯ ಸಿಗದ ಕಾರಣ ಮತ್ತು ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದ ಕಾರಣ ಈ ಇಬ್ಬರು ಹೆಣ್ಣು ಮಕ್ಕಳ ತಂದೆಯೂ ನೇಣು ಹಾಕಿಕೊಂಡಿದ್ದಾರೆ,” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಮಧ್ಯಪ್ರದೇಶದಲ್ಲಿ ಮಹಿಳೆಯ ಮಾನಭಂಗವಾಗಿದೆ. ಆ ಮಹಿಳೆಯ ಬಡ ಪತಿಯು ನ್ಯಾಯಕ್ಕಾಗಿ ಮನವಿ ಮಾಡಿದಾಗ, ವಿಚಾರಣೆಯೇ ಮಾಡಲಾಗಿಲ್ಲ. ಇದರಿಂದಾಗಿ ನಿರಾಶೆಗೊಂಡು ಈ ವ್ಯಕ್ತಿ ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.
“ಡಬಲ್ ಇಂಜಿನ್ ಸರ್ಕಾರದಲ್ಲಿ ನ್ಯಾಯ ಕೇಳುವುದು ಅಪರಾಧವಾಗಿದೆ. ಮಿತ್ರ ಮಾಧ್ಯಮಗಳು ಭಾರೀ ಕಷ್ಟಪಟ್ಟು ಸೃಷ್ಟಿಸಿದ ಸುಳ್ಳು ಚಿತ್ರಣವನ್ನು ರಕ್ಷಿಸಲು, ಸಂತ್ರಸ್ತರನ್ನು ಮಾತ್ರವಲ್ಲದೆ ಅವರ ಸಂಪೂರ್ಣ ಕುಟುಂಬವನ್ನೇ ಶತ್ರುಗಳಂತೆ ನೋಡುವುದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಒಂದು ಸಂಪ್ರದಾಯವಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಹತ್ರಾಸ್‌ನಿಂದ ಉನ್ನಾವ್‌ವರೆಗೆ ಮತ್ತು ಮಂದಸೌರ್‌ನಿಂದ ಪೌರಿವರೆಗಿನ ಮಹಿಳೆಯರ ಮೇಲಿನ ದೌರ್ಜನ್ಯ ನಡೆದಿದೆ. ಈ ದೌರ್ಜನ್ಯದ ನಂತರ, ಅವರ ಕುಟುಂಬಗಳು ನ್ಯಾಯಕ್ಕಾಗಿ ಹಂಬಲಿಸುತ್ತಿದ್ದವು. ಈ ಘೋರ ಅನ್ಯಾಯದ ವಿರುದ್ಧ ದನಿ ಎತ್ತಿ, ಇಲ್ಲವಾದರೆ ಇದ್ದಲ್ಲ ನಾಳೆ ಈ ದೌರ್ಜನ್ಯದ ಬೆಂಕಿ ನಿಮ್ಮನ್ನೂ ತಲುಪುತ್ತದೆ,” ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.