- ಪ್ರತಿ ಗಾರ್ಮೆಂಟ್ಸ್ಗೆ ಭೇಟಿ ನೀಡಿ ಕಾರ್ಮಿಕರಿಗೆ ಮತದಾನ ಮಾಡಲು ಮನವಿ
- ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ
ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಆದರೆ, ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆಯಿದೆ. ಈ ಪ್ರಮಾಣವನ್ನು ಹೆಚ್ಚಿಸಲು ನಗರ ಜಿಲ್ಲಾ ಚುನಾವಣಾಧಿಕಾರಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದೆ. ಆ ದಿನ ಕಾರ್ಮಿಕರಿಗೆ ಸಂಬಳ ಸಹಿತ ರಜೆ ನೀಡಲಾಗಿದೆ.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ನಗರದಲ್ಲಿರುವ ಪ್ರತಿ ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್ಗೆ ಭೇಟಿ ನೀಡಿ ಕಾರ್ಮಿಕರಿಗೆ ಮತದಾನ ಮಾಡಲು ಮನವಿ ಮಾಡುತ್ತಿದ್ದಾರೆ.
ಮತದಾನ ಮಾಡಿದರೇ ಮಾತ್ರ ಸಂಬಳ ಸಹಿತ ರಜೆ
ಮತದಾನದ ದಿನ ಮತದಾನ ಮಾಡಲು ಊರಿಗೆ ತೆರಳಿದರೇ, ಸಂಬಳ ಕಟ್ ಆಗುತ್ತದೆ ಎಂದು ಹಲವು ಜನ ಮತದಾನ ಮಾಡಲು ತೆರಳುವುದಿಲ್ಲ. ಮೂರು ಲಕ್ಷ ಕಾರ್ಮಿಕರು ಮತದಾನ ಮಾಡುವುದರಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ, ಚುನಾವಣೆ ದಿನ ಗಾರ್ಮೆಂಟ್ಸ್ ನೌಕರರು ಸೇರಿದಂತೆ ಕಾರ್ಮಿಕರಿಗೆಲ್ಲ ಸಂಬಳ ಸಹಿತ ರಜೆ ನೀಡಲು ನಿರ್ಧರಿಸಲಾಗಿದೆ. ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ : ಬಿಬಿಎಂಪಿ
ಬೆಂಗಳೂರಿನಲ್ಲಿ 3 ಲಕ್ಷ ಗಾರ್ಮೆಂಟ್ಸ್ ನೌಕರರಿದ್ದಾರೆ. ಕಾರ್ಖಾನೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ದುಡಿಯುತ್ತಿದ್ದಾರೆ. ನಗರದಲ್ಲಿ ಮತದಾನದ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಆಗುತ್ತಿದೆ. ಹೀಗಾಗಿ ಇದನ್ನ ತಪ್ಪಿಸಲು ವಾರದ ಮಧ್ಯೆ ಮತದಾನದ ದಿನಾಂಕ ಪ್ರಕಟಿಸಿದ್ದಾರೆ ಎನ್ನಲಾಗಿದೆ.