ವಿದ್ಯಾರ್ಥಿಯನ್ನು ಚುಡಾಯಿಸಿ, ಮೊಬೈಲ್ ನಂಬರ್ ಕೊಡುವಂತೆ ಪೀಡಿಸಿ ಆಕೆಯ ಮೇಲೆ ಪುಂಡ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ನಡೆದಿದೆ.
ಬುಧವಾರ ರಬಕವಿಯ ಬಸ್‌ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿನಿ ಸ್ವಾತಿ ನಡಕಟ್ಟಿ ಮೇಲೆ ಪುಂಡರ ಗುಂಪು ಹಲ್ಲೆ ಮಾಡಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದfಲಿ ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿಹ್ಮದ್ ಎಂಬ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿಗೆ ತೆರಳಲು ಸ್ವಾತಿ ಮತ್ತು ಆಕೆಯ ಸ್ನೆಹಿತೆಯರು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಈ ವೇಳೆ, ಹಲ್ಲಿಗೆ ಬಂದ ಪುಂಡರು ಆಕೆಯನ್ನು ಚುಡಾಯಿಸಿದ್ದಾರೆ. ಸ್ವಾತಿ ಮತ್ತು ಸ್ನೇಹಿತೆಯರ ಪೋಟೋ ತೆಗೆದು, ಮೊಬೈಲ್ ನಂಬರ್ ಕೊಡುವಂತೆ ಪೀಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಂಬರ್ ಕೊಡಲು ನಿರಾಕಿರಿಸಿದ ಸ್ವಾತಿ ಮೇಲೆ ಗುಂಪು ಹಲ್ಲೆ ಮಾಡಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.