ಟಿ20 ಪಂದ್ಯಗಳಲ್ಲಿ ಕಾಣಸಿಗುತ್ತಿದ್ದ ಅದ್ಭುತ ಕ್ಯಾಚ್ಗಳು ಈಗ ಟೆಸ್ಟ್ ಕ್ರಿಕೆಟ್ನಲ್ಲೂ ಸಖತ್ ಸುದ್ದಿಯಾಗುತ್ತಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ ಹಾಗೂ ಪ್ರವಾಸಿ ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಸರಣಿ ನಡೆಯುತ್ತಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವು, ಕೀವೀಸ್ ಅನ್ನು 172 ರನ್ಗಳಿಂದ ಸೋಲಿಸಿತ್ತು. ಮಾ.8ರಿಂದ ಆರಂಭಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಝಿಲ್ಯಾಂಡ್ 162 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದ ಆಸೀಸ್ 256 ರನ್ಗಳ ದಾಖಲಿಸಿ, ಸರ್ವಪತನ ಕಾಣುವುದರೊಂದಿಗೆ 94 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು.
ಈ ನಡುವೆ ಆಸ್ಟೇಲಿಯಾದ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ವೇಳೆ ನ್ಯೂಝಿಲ್ಯಾಂಡ್ನ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್, ‘ಸೂಪರ್ಮ್ಯಾನ್’ನಂತೆ ಹಾರಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗ್ಲೆನ್ ಫಿಲಿಪ್ಸ್ ಅವರ ಈ ಅದ್ಭುತ ಕ್ಯಾಚ್ಗೆ ನೆಟ್ಟಿಗರು ಫಿದಾ ಆಗಿದ್ದು, ಹುಬ್ಬೇರಿಸಿದ್ದಾರೆ.
SUPERMAN! 🦸 What a catch from Glenn Phillips! Australia are 221/8 at lunch on Day 2 🏏@BLACKCAPS v Australia: 2nd Test | LIVE on DUKE and TVNZ+ pic.twitter.com/Swx84jNFZb
— TVNZ+ (@TVNZ) March 9, 2024
ಎರಡನೇ ದಿನದ ಆಟದಲ್ಲಿ 147 ಎಸೆತಗಳಲ್ಲಿ 90 ರನ್ ದಾಖಲಿಸಿಕೊಂಡು ಶತಕದತ್ತ ಮುನ್ನುಗುತ್ತಿದ್ದ ಆಸೀಸ್ನ ಪ್ರಮುಖ ಬ್ಯಾಟರ್ ಮಾರ್ನಸ್ ಲಾಬೂಶೈನ್, ಗ್ಲೆನ್ ಫಿಲಿಪ್ಸ್ ಹಿಡಿದ ಅಚ್ಚರಿಯ ಕ್ಯಾಚ್ನಿಂದಾಗಿ ಶತಕ ವಂಚಿತರಾದರು.
ಟಿಮ್ ಸೌಥಿಯ ಬೌಲಿಂಗ್ನಲ್ಲಿ ಗಲ್ಲಿಯಲ್ಲಿ ಬೌಂಡರಿ ಹೊಡೆಯಲು ಯತ್ನಿಸಿದ ಲಾಬೂಶೈನ್ ಅವರ ಲೆಕ್ಕಾಚಾರವನ್ನು ಗ್ಲೆನ್ ಫಿಲಿಪ್ಸ್ ತಲೆಕೆಳಗಾಗಿಸಿತು. ತನ್ನ ಕ್ಷೇತ್ರ ರಕ್ಷಣೆಯ ಬಲಗಡೆಯಿಂದ ದೂರ ಇದ್ದ ಬಾಲ್ ಅನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಹಾರಿದ ಫಿಲಿಪ್ಸ್, ಯಶಸ್ವಿಯಾಗಿ ಕ್ಯಾಚ್ ಹಿಡಿಯುವಲ್ಲಿ ಸಫಲರಾದರು.
ಈ ಡೈವಿಂಗ್ ಕ್ಯಾಚ್ನಿಂದಾಗಿ ಲಾಬೂಶೈನ್ ಅವರು ಪೆವಿಲಿಯನ್ಗೆ ಹಿಂದಿರುಗಬೇಕಾಯಿತು. ಫಿಲಿಪ್ಸ್ ಅವರ ಈ ಕ್ಯಾಚ್ನ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲಾಗಿದೆ. ಫಿಲಿಪ್ಸ್ ಅವರ ಈ ಅದ್ಭುತ ಕ್ಯಾಚ್ನ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಹಾಕುತ್ತಿದ್ದಾರೆ.
A lead of 40 runs at the close of play on Day 2 at Hagley Oval. Tom Latham (65*) and Rachin Ravindra (11*) to resume tomorrow. Head to https://t.co/3YsfR1YBHU or the NZC App for the full scorecard 📲 #NZvAUS pic.twitter.com/Vuz56OHiv0
— BLACKCAPS (@BLACKCAPS) March 9, 2024
ಎರಡನೇ ದಿನದಾಟದ ಕೊನೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಝಿಲ್ಯಾಂಡ್, 2 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ. ಆ ಮೂಲಕ ದಿನದಾಟದ ಅಂತ್ಯಕ್ಕೆ 40 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಸೌತ್ ಆಫ್ರಿಕಾ ವಿರುದ್ಧವೂ ಅದ್ಭುತ ಕ್ಯಾಚ್ ಹಿಡಿದಿದ್ದ ಫಿಲಿಪ್ಸ್
ಕೆಲ ವಾರಗಳ ಹಿಂದೆ ಮುಕ್ತಾಯ ಕಂಡಿದ್ದ ನ್ಯೂಝಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಕೂಡ, ಫಿಲಿಪ್ಸ್ ಇದೇ ರೀತಿಯ ಅದ್ಭುತ ಕ್ಯಾಚ್ ಹಿಡಿದಿದ್ದರು.
An incredible catch by Glenn Phillips as he takes the wicket of Petersen 🔥🏏@BLACKCAPS v South Africa: 2nd Test | LIVE on DUKE and TVNZ+ pic.twitter.com/zTOYDW3Bq7
— TVNZ+ (@TVNZ) February 15, 2024
ಆಫ್ರಿಕಾದ ಕೀಗನ್ ಪೀಟರ್ಸನ್ ಮ್ಯಾಟ್ ಹೆನ್ರಿ ಅವರ ಲೆಂಗ್ತ್ ಎಸೆತವನ್ನು ಕಟ್ ಮಾಡಿದ್ದರು. ಅದನ್ನು ತಡೆಯಲು ಗ್ಲೆನ್ ಫಿಲಿಪ್ಸ್ ಗೋಲ್ಕೀಪರ್ನಂತೆ ಎಡಕ್ಕೆ ಹಾರಿ ಚೆಂಡನ್ನು ಹಿಡಿಯುವ ಮೂಲಕ, ಅದ್ಭುತ ಕ್ಯಾಚ್ ಪಡೆದಿದ್ದರು.
