ಧಾರವಾಡ | ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್‌

Date:

Advertisements

ಚುನಾವಣೆ ಅಂದತಕ್ಷಣ ಯಾರಿಗೆ ಟಿಕೆಟ್? ಎಂಬುದು ಸರ್ವೆಸಾಮಾನ್ಯ ಮತ್ತು ಜನರಲ್ಲೂ ದಿನದಿಂದ ದನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಹಿನ್ನಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರದ ಅಲೆಗಳು ತೇಲಿಬರುತ್ತಿವೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ; ಧಾರವಾಡ ಗ್ರಾಮೀಣ, ಕಲಘಟಗಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಹುಬ್ಬಳ್ಳಿ-ಧಾರವಾಡ ಪೂರ್ವ, ನವಲಗುಂದ, ಕುಂದಗೋಳ, ಶಿಗ್ಗಾವಿ ಹೀಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬಿಜೆಪಿಯ ಭದ್ರಕೋಟೆ ಧಾರವಾಡ, ಈಗ ಸಮೀಪಿಸುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೈತಪ್ಪಿಸಿ ಯಾರ ಕೈ ಸೇರುವುದೊ ಎಂಬುದು ಗೊಂದಲಮಯವಾಗಿ ಕಾಣುತ್ತಿದೆ. ಏಕೆಂದರೆ ಪ್ರಲ್ಹಾದ್ ಜೋಶಿ ಟಿಕೆಟ್ ತಪ್ಪಿಸಲು ಬಹುತೇಕ ವಿರೋಧಾಭಾಸಗಳು ಕೇಳುತ್ತಿವೆ. ಹಾಗೂ ಆಂತರಿಕವಾಗಿ ಬಿಜೆಪಿಯಲ್ಲಿಯೇ ಪ್ರತಿರೋಧಗಳೂ ಕೇಳಿ ಬರುತ್ತಿವೆ. ಒಂದೆಡೆ ನಾನು ಲೋಕಸಭೆ ಸ್ಪರ್ಧೆಗೆ ಎಲ್ಲ ರೀತಿಯ ತಯಾರಿ ನಡೆಸಿದ್ದೇನೆ ಎಂದು ಪ್ರಭಲ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಹೇಳಿದ್ದಾರೆ. ಮತ್ತೊಂದೆಡೆ ಈ ಭಾರಿ ಹೊಸಬರಿಗೆ ಅವಕಾಶ ನೀಡಬೇಕೆಂದು, ಅದರಲ್ಲೂ ಲಿಂಗಾಯತರಿಗೆ ಅವಕಾಶ ನೀಡಬೇಕು ಮತ್ತು ಜೋಶಿಯವರನ್ನು ಸೋಲಿಸಲೇಬೇಕೆಂಬ ಲೆಕ್ಕಾಚಾರಗಳೂ ಸ್ವಪಕ್ಷದಲ್ಲಿಯೇ ಕೇಳಿ ಬರುತ್ತಿವೆ. ಈ ಲೆಕ್ಕಾಚಾರದಲ್ಲಿ ಪ್ರಲ್ಹಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಈ ಎರಡು ಹೆಸರುಗಳು ಮುಂಚೂಣಿಯಲ್ಲಿವೆ.

Advertisements

ಹೀಗೆ ಕಾಂಗ್ರೆಸ್ ನಲ್ಲಿಯೂ ಇದೇರೀತಿಯ ಹೊಸ ಲೆಕ್ಕಾಚಾರಗಳೇ ಕೇಳಿಬರುತ್ತಿವೆ. ಕಾಂಗ್ರೆಸ್ ನಿಂದ ಅನೇಕ ಅಭ್ಯರ್ಥಿಗಳು ಟಿಕೆಟ್ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲಿ ಪ್ರಬಲ ಪೈಪೋಟಿಯ ಹುಡುಕಾಟದಲ್ಲಿ ಕಾಂಗ್ರೆಸ್ ತಲೆಕೆಡಿಸಿಕೊಂಡಿದೆ. ಈ ಭಾರಿ ಧಾರವಾಡವನ್ನು ತಮ್ಮ ಕೈವಶ ಮಾಡಿಕೊಳ್ಳಲೆಬೇಕೆಂಬ ಗಟ್ಟಿ ನಿರ್ಧಾರದೊಂದಿಗೆ, ಅನೇಕ ಹೆಸರುಗಳು ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ಸೇರಿವೆ. ಆದರೆ; ಹೈಕಮಾಂಡ್ ಆದೇಶದ ಮೇರೆಗೆ ನಾವು ಕಣಕ್ಕಿಳಿಯಲು ಸಿದ್ಧರಿದ್ದೇವೆ ಎಂಬ ರೀತಿಯಲ್ಲಿ ಆಕಾಂಕ್ಷಿಗಳ ಉತ್ತರಗಳಿವೆ. ಕಾಂಗ್ರೆಸ್ ನಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹೆಸರೆಂದರೆ; ರಜತ್ ಉಳ್ಳಾಗಡ್ಡಿಮಠ. ಇವರ ಹಿಂದೆ ಸಚಿವೆ ಮತ್ತು ಅವರ ಅತ್ತೆಯಾದ ಲಕ್ಷ್ಮೀ ಹೆಬ್ಬಾಳಕರ್ ಇದಾರೆ. ಆದರೂ ರಜತ್ ಉಳ್ಳಾಗಡ್ಡಿಮಠ ಹೆಚ್ಚು ಪರಿಚಯವಿಲ್ಲದ, ಅಷ್ಟು ಪ್ರಬಲ ಅಭ್ಯರ್ಥಿ ಅಲ್ಲ ಎಂಬುದು ಜನರ ಲೆಕ್ಕಾಚಾರವಾಗಿದೆ.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಕುಟುಂಬವೂ ಟಿಕೆಟ್ ಸಿಗಬಹುದೆಂಬ ನಿರಿಕ್ಷೆಯಲ್ಲಿದೆ. ಅತ್ತ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾನು ಆಕಾಂಕ್ಷಿಯಲ್ಲ ಆದರೆ, ಪಕ್ಷ ನನಗೆ ಜವಾಬ್ದಾರಿ ನೀಡಿದರೆ, ನಾನು ಸ್ಪರ್ಧಿಸುತ್ತೇನೆ ಎಂಬ ಮಾತೂ ಆಂತರಿಕವಾಗಿ ಕೇಳಿ ಬರುತ್ತಿದೆ. ಅದರೊಂದಿಗೆ ಸಂತೋಷ್ ಲಾಡ್ ಕ್ಷೇತ್ರಗಳನ್ನೆಲ್ಲ ಕಾಲಿಗೆ ಚಕ್ರ ಕಟ್ಟಿದವರಂತೆ ದಣಿವರಿಯದೆ ಸುತ್ತುತ್ತಿದ್ದಾರೆ. ಹಲವಾರು ಸಮುದಾಯಗಳ ಸಮಾವೇಶಗಳನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಠಕ್ಕರ ನೀಡುವ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಬಹಳಷ್ಟು ಪೇಮಸ್ ಆಗಿದ್ದಾರೆ. ಬಸವಣ್ಣ ಮತ್ತು ಅಂಬೇಡ್ಕರ್ ವಿಚಾರಗಳೊಂದಿಗೆ ಎಲ್ಲ ಸಮುದಾಯಗಳೊಂದಿಗೆ ಒಳ್ಳೆಯ ಬಾಂದವ್ಯ ಬೆಳೆಸಿಕೊಂಡಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ನಿಂದ ಸಂತೋಷ್ ಲಾಡ್ ಗೆ ಟಿಕೆಟ್ ನೀಡಿದರೆ; ಈ ಬಾರಿಯ ಲೋಕಸಭಾ ಚುನಾವಣೆ ಭಾರಿ ಪೈಪೋಟಿ ಮತ್ತು ಭಾರಿ ಕುತೂಹಲಕಾರಿಯಾಗಿ ಗದ್ದಲ‌ಮಾಡುವುದರಲ್ಲಿ ಸಂಶಯವಿಲ್ಲ. ಮತ್ತೊಂದು ಮಾತು ಹೇಳಬೇಕೆಂದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಹತ್ತಿರವಿದ್ದ ಕೆಲವು ಫಾಲೊವರ್ಸ್ ಸಂತೋಷ್ ಲಾಡ್ ಅವರತ್ತ ಮುಖಮಾಡಿ ಬಂದಿರುವ ಕಾರಣ, ಇದು ಬಿಜೆಪಿ ಮತ್ತು ಪ್ರಲ್ಹಾದ್ ಜೋಶಿಯವರಿಗೆ ಚುನಾವಣೆಯಲ್ಲಿ ಹೊಡೆತ ಕೊಡಬಹುದು. ಅದೇ ರೀತಿ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿದರೂ ಇದೇ ರೀತಿಯ ಪೈಪೋಟಿ ಆಗಬಹುದು ಎಂಬುದು ಪಕ್ಷಗಳ ಕಾರ್ಯಕರ್ತರುಗಳ ಒಳಗಿನ ಮಾತು.

ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಟಿಕೆಟ್ ಯಾರ ಪಾಲಾಗುವುದೊ? ಯಾರು ಪ್ರಬಲವಾಗಿ ಕಣಕ್ಕಿಳಿಯುವರೊ? ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X