ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ಜಗದೀಶ್ (40) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.
ಜಗದೀಶ್ ಅವರು ಹನೂರು ಉಪಖಜಾನಾಧಿಕಾರಿಗಳ ಕಾರ್ಯಾಲಯದಲ್ಲಿ ‘ಡಿ’ ದರ್ಜೆ ನೌಕರರಾಗಿದ್ದರು. ಹನೂರು ಪಟ್ಟಣದ ವಿವೇಕನಂದ ಶಾಲೆಯಲ್ಲಿ ಮಂಗಳವಾರ ಎಆರ್‌ಓ ಮತ್ತು ಪಿಆರ್‌ಓಗಳಿಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಆರಂಭವಾಗುತ್ತಿದ್ದಂತೆ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.