ತುಮಕೂರು ಜಿಲ್ಲೆಯ ಗೃಹರಕ್ಷಕದಳದ ಹಲವು ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಾ ಗೃಹರಕ್ಷಕ/ಗೃಹರಕ್ಷಕಿಯರ ಹುದ್ದೆಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಗೃಹರಕ್ಷಕದಳದ ತುಮಕೂರು ಜಿಲ್ಲಾ ಸಮಾದೇಷ್ಟ ಆರ್ ಪಾತಣ್ಣ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ ಪ್ರಕಟಣೆಗೆ ತಿಳಿಸಿರುವ ಅವರು, ತುಮಕೂರು ಘಟಕ 6, ಕೊರಟಗೆರೆ 6, ಮಧುಗಿರಿ 3, ಪಾವಗಡ-6, ಶಿರಾ-4, ಚಿಕ್ಕನಾಯಕನಹಳ್ಳಿ-5, ತಿಪಟೂರು-5, ತುರುವೇಕೆರೆ-4, ಕುಣಿಗಲ್-9, ಗುಬ್ಬಿ-7, ಊರ್ಡಿಗೆರೆ-5, ನೊಣವಿನಕೆರೆ-4, ಹೊನ್ನವಳ್ಳಿ-11, ಅಮೃತೂರು-5, ಮಿಡಿಗೇಶಿ-4, ತಾವರೆಕೆರೆ-5, ಕಳ್ಳಂಬೆಳ್ಳ-3, ವೈ.ಎನ್ ಹೊಸಕೋಟೆ-3 ಸೇರಿದಂತೆ ಒಟ್ಟು 93 ಗೃಹರಕ್ಷಕರನ್ನು ನೋಂದಣಿ ಮಾಡಿಕೊಳ್ಳಲಾಗುವುದೆಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಾಧುಸ್ವಾಮಿ ಬೆಂಬಲಿಗರಿಂದ ‘ಗೋ ಬ್ಯಾಕ್ ಸೋಮಣ್ಣ’ ಚಳವಳಿ
ಅರ್ಹ ಗೃಹರಕ್ಷಕ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸಸ್ಥಳ ದೃಢೀಕರಣ(ರೇಷನ್ ಕಾರ್ಡ್), ರಾಷ್ಟ್ರೀಕೃತ ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಪೊಲೀಸ್ ಪರಿಶೀಲನಾ ವರದಿಯ ಮೂಲ ದಾಖಲಾತಿಗಳೊಂದಿಗೆ ಮಾರ್ಚ್ 14ರಂದು ಬೆಳಿಗ್ಗೆ 8ಕ್ಕೆ ತುಮಕೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನ, (ಡಿಎಆರ್)ದಲ್ಲಿ ಹಾಜರಾಗಬೇಕೆಂದು ತಿಳಿಸಿದ್ದಾರೆ.
