ಗದಗನಲ್ಲಿ ಅಮ್ಮಾ ಫೌಂಡೇಶನ್ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ರೋಟರಿ ಭವನದಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಮಣಕವಾಡದ ಪರಮಪೂಜ್ಯ ಶ್ರಿಸಿದ್ದರಾಮ ದೇವರು ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮುಂದಿನ ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ನಿಮ್ಮ ಪೌಂಡೇಶನ್ ದಿಂದ ಒಳ್ಳೆಯ ಕೆಲಸಗಳು ಆಗಲಿ, ಆ ಕೆಲಸಗಳ ಮುಖಾಂತರ ದೊಡ್ಡ ಪ್ರಮಾಣದಲ್ಲಿ ನಿಮ್ಮ ಫೌಂಡೇಶನ್ ಬೆಳೆಯಲಿ ಎಂದು ಆಶೀರ್ವದಿಸಿದರು.
ಈ ಅಮ್ಮಾ ಫೌಂಡೇಶನ್ ಇದರ ನೂತನ ಅಧ್ಯಕ್ಷರಾಗಿ ವಕೀಲರಾದ ಮೈಲಾರಪ್ಪ ಡಿ.ಎಚ್, ಕಾರ್ಯದರ್ಶಿಯಾಗಿ ವಿಶ್ವನಾಥ ದಾಲಾಲಿ, ಖಜಾಂಚಿಯಾಗಿ ಮಾರುತಿ ಜಿ.ಏಚ್ ಪದಗ್ರಹಣ ಮಾಡಿದರು. ಇದರ ಜೊತೆಗೆ ಇನ್ನುಳಿದ ಎಲ್ಲಾ ಪದಾಧಿಕಾರಿಗಳು ಪದಗ್ರಹಣ ಮಾಡಿದರು ಮತ್ತು ಎಲ್ಲಾ ಅಥಿಗಳು ಈ ಅಮ್ಮಾ ಫೌಂಡೇಶನ್ ಲೋಗೋ ಬಿಡುಗಡೆ ಮತ್ತು ಪದಾಧಿಕಾರಿಗಳ ಪಟ್ಟಿ ಅನಾವರಣ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿದ್ದ ವಾಯ್.ಎನ್. ಗೌಡರ್ ಅವರು ತಮ್ಮ ಹೋರಾಟದ ಅನುಭವವನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ಪದಾಧಿಕಾರಿಗಳು ನ್ಯಾಯುತವಾಗಿ, ಕಾನೂನುಬದ್ಧವಾಗಿ ನಿಮ್ಮ ಈ ಅಮ್ಮಾ ಪೌಂಡೇಶನ ಸಾಮಾಜಿಕ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜಿಕರ್, ತಮ್ಮ ಇಲಾಖೆಯ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಈ ಪೌಂಡೇಶನ್ ಹುಟ್ಟು ಹಾಕುವ ಮುಖಾಂತರ ಸಮಾಜಮುಖಿ ಕೆಲಸ ಮಾಡಲು ಮುಂದಾಗುತ್ತಿರುವುದು ತುಂಬಾ ಖುಷಿಯ ವಿಚಾರ. ನಿಮ್ಮ ನಡೆ ಬಡವರ, ಕಾರ್ಮಿಕರ, ರೈತರ, ದಲಿತರ ಪರವಾಗಿ ಮತ್ತು ಅವರ ಅಭಿವೃದ್ದಿ ಪರವಾಗಿ ಇರುವ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳು ಈ ಪೌಂಡೇಶನ್ ನಿಂದ ಆಗಲಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲ ರುದ್ರಗೌಡ ಪಾಟೀಲ, ನೀವು ಏನೇ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದರೆ ನನ್ನಿಂದ ನಿಮಗೆ ಏನಾದರೂ ಸಹಾಯ ಮತ್ತು ಸಹಕಾರ ಬೇಕಾದ್ರೆ ಕಂಡಿತಾ ಮಾಡುವೆ ಎಂದು ಹೇಳುವ ಮುಖಾಂತರ ಬೆಂಬಲ ಸೂಚಿಸಿದರು.
ಯುವ ನಾಯಕರುಗಳು ಗ್ರಾಮ ಪಂಚಾಯತ ಸದಸ್ಯರುಗಳಾದ ತಿಮ್ಮರೆಡ್ಡಿ ಮರಡ್ಡಿ ಮತ್ತು ಮೋಹನ್ ಗುತ್ತೆಮ್ಮನವರ ಮಾತನಾಡಿ, ನಮ್ಮ ಬಸವರಾಜ್ ಬಳ್ಳಾರಿ ಸರ್ ನೇತೃತ್ವದಲ್ಲಿ ಆರಂಭವಾದ ಈ ಅಮ್ಮಾ ಫೌಂಡೇಶನ್ ಇದು ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುವ ಮುಖಾಂತರ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರು ಏಚ್.ಎಮ್. ಶರಿಪನವರ್, ಪ್ರೇಮನಾಥ ಗರಗ, ರೋಟರಿ ಸಂಸ್ಥೆಯ ಅದ್ಯಕ್ಷ ವಿಜಯ ಹಿರೇಮಠ, ಹುಚ್ಚಪ್ಪ ಸಂದಕದ, ಕೆ.ಎಫ್. ಹಳ್ಯಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಮಹಿಳೆಯರು ಭಾಗವಹಿಸಿದ್ದರು.