ಐದು ವರ್ಷದ ಸಂಸದ ಅವಧಿಯಲ್ಲಿ ಒಂದು ಸಲ ಕ್ಷೇತ್ರದ ಅಭಿವೃದ್ಧಿ ಮತ್ತು ಕರ್ನಾಟಕದ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಅನಂತಕುಮಾರ್ ಹೆಗಡೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹರಿಹಾಯ್ದರು.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಆನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದರು.
“ಬಾಯಿ ತೆರೆದರೆ ಸಂವಿಧಾನ ಬದಲಾವಣೆ ಆಗಬೇಕೆಂಬ ಹೇಳಿಕೆಯನ್ನು ಆರ್ ಆಶೋಕ್ ಮತ್ತು ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿಯವರು ಸಮರ್ತಿಸಾಕೊಳ್ಳುತ್ತಾರಾ?. ಇಂತಹ ವಿಚಾರಗಳು ಅವರಿಂದ ಪದೇ ಪದೆ ಬರುತ್ತಿವೆ. ಇಂತಹ ಮಾತುಗಳನ್ನಾಡುತ್ತಿರುವ ಹೆಗಡೆ ಅವರಿಗೆ ಇಲ್ಲಿಯವರೆಗೆ ಅವರ ಪಕ್ಷದವರು ಒಂದು ನೋಟಿಸ್ ನೀಡಿಲ್ಲ. ಹಾಗಾದರೆ ಇದನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆ ಎಂದಾಯಿತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಂಸದ ಅನಂತ್ ಕುಮಾರ್ ಹೆಗಡೆ ಗಡಿಪಾರಿಗೆ ದಲಿತ ಸಂಘಟನೆಗಳ ಆಗ್ರಹ
“ಹೆಗಡೆ ಅವರಿಗೆ ಮತ್ತು ಬಿಜೆಪಿ ಅವರಿಗೆ ಅಧಿಕಾರದ ಮದ ಏರಿದೆ ಈ ಬಾರಿಯ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಹೆಗಡೆ ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಲ್ಲ, ಒಬ್ಬ ಬಿಜೆಪಿ ಸಂಸದರು, ಅವರು ಹೇಳಿದಾಗ ಪ್ರಧಾನಿಯವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡಾ, ವಿಜಯೇಂದ್ರ ಸೇರಿದಂತೆ ಯಾರೋಬ್ಬರೂ ಇದಕ್ಕೆ ಪ್ರತಿಕ್ರಿಯೆ ನೀಡದೆ ಮೌನ ಅನುಸರಿಸಿದ್ದಾರೆ.
ಬಿಜೆಪಿಯ ಸಂಸದ, ಶಾಸಕರು ತಮ್ಮ ಮನುಸ್ಮೃತಿ ಮತ್ತು ಆರ್‌ಎಸ್‌ಎಸ್ ತತ್ವ ಸಿದ್ದಾಂತಗಳನ್ನು ತಮ್ಮ ಮನೆಯಲ್ಲಿ ಮಾತ್ರ ಅಳವಡಿಸಿಕೊಳ್ಳಬೇಕು. ಅವರ ಮನೆಯ ಸದಸ್ಯರು ಅದಕ್ಕೆ ಒಪ್ಪಿಗೆ ಸೂಚಿಸಿದರೆ ಜಾರಿಗೆ ತರಲಿ” ಎಂದು ಹರಿಹಾಯ್ದರು.
ಮಾಹಿತಿ :ಅನಂತ್