ಬೆಂಗಳೂರು | ಮಹಾಶಿವರಾತ್ರಿ ದಿನ ರೌಡಿಶೀಟರ್ ಕೊಲೆ: ಆರು ಜನರ ಬಂಧನ

Date:

Advertisements

ಕಳೆದ ವಾರ ಮಹಾ ಶಿವರಾತ್ರಿಯ ದಿನ ಕುಖ್ಯಾತ ರೌಡಿಶೀಟರ್ ಕಾಟನ್ಪೇಟೆ ಶಿವ ಅಲಿಯಾಸ್ ವರ್ತೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆ ಪೊಲೀಸರು ಸದ್ಯ ಆರು ಜನರನ್ನು ಬಂಧಿಸಿದ್ದಾರೆ.

35 ವರ್ಷದ ರೌಡಿ ಶಿವ ಅಲಿಯಾಸ್ ವರ್ತೆ ಎಂಬಾತನನ್ನು ಸೆಂಟ್ರಲ್ ಬೆಂಗಳೂರಿನ ಕಾಟನ್‌ಪೇಟೆಯ ಅಂಜನಪ್ಪ ಗಾರ್ಡನ್ನ ಓಣಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಳೆಯ ದ್ವೇಷ ಹಾಗೂ ಸ್ಥಳೀಯ ಗ್ಯಾಂಗ್ಗಳ ನಡುವಿನ ಕಿತ್ತಾಟವೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಟೀಫನ್ ಅಲಿಯಾಸ್ ಸೈಲೆಂಟ್, ಚಂದ್ರಶೇಖರ್, ಸಿಂಬಾ ಅಲಿಯಾಸ್ ಸಿಂಬು, ಶೇಖರ್ ಅಲಿಯಾಸ್ ಡೋರಿ, ಮಣಿ ಮತ್ತು ಕಿರಣ ಬಂಧಿತರು.

Advertisements

ಹತ್ಯೆಯಾದ ಶಿವ ಮಾರ್ಚ್ 8ರಂದು ರಾತ್ರಿ 9.30ರ ಸುಮಾರಿಗೆ ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ಮಾಹಿತಿ ಆಧರಿಸಿ ಶಂಕಿತರನ್ನು ಪತ್ತೆಹಚ್ಚಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಡಂಪಿಂಗ್ ಯಾರ್ಡ್‌ನಲ್ಲಿ ಸಿಗರೇಟ್‌ನಿಂದ ಹೊತ್ತಿಕೊಂಡ ಬೆಂಕಿ

“ಆರೋಪಿ ಚಂದ್ರಶೇಖರನ ಆಪ್ತ ಸ್ನೇಹಿತನಿಗೆ ಶಿವ ಥಳಿಸಿದ್ದನು. ಈ ಮಧ್ಯೆ, ಶಿವು ಸಿಂಬು ಮತ್ತು ಡೋರಿಯೊಂದಿಗೆ ಜಗಳವಾಡಿದ್ದನು. ಈ ಮೂವರು ವ್ಯಕ್ತಿಗಳು ಶಿವನೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದರು. ಇನ್ನೂ ಮೂವರನ್ನು ಕರೆತಂದು, ಸ್ಥಳ ಆಯ್ಕೆ ಮಾಡಿ ಹಬ್ಬದ ದಿನ ರಾತ್ರಿಯೇ ಕೊಲೆ ಮಾಡಿದ್ದಾರೆ” ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

2020ರಲ್ಲಿ ರೌಡಿಶೀಟರ್ ಪ್ರಭಾಕರ್ ಅಲಿಯಾಸ್ ಸಾಕ್ರೆ ಕೊಲೆ ಪ್ರಕರಣದಲ್ಲಿ ಶಿವನನ್ನು ಬಂಧಿಸಲಾಗಿತ್ತು. ಕೊಲೆಯ ನಂತರ, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶಿವ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು. ಶಿವ ಜಾಮೀನಿನ ಮೇಲೆ ಹೊರಗಿದ್ದರೂ ವಿಚಾರಣೆ ಪ್ರಗತಿಯಲ್ಲಿತ್ತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X