ದಾವಣಗೆರೆ | ಶಿವಗಂಗೋತ್ರಿಯಲ್ಲಿ ಮಹಿಳೆಯರದ್ದೇ ಶೈಕ್ಷಣಿಕ ಸಾಧನೆ

Date:

Advertisements

ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಈ ಬಾರಿಯೂ ಮಹಿಳೆಯರೇ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು ಅತಿ ಹೆಚ್ಚು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ್ ಐದು ಪದಕಗಳೊಂದಿಗೆ ಈ ವರ್ಷ ದಾವಣಗೆರೆ ವಿಶ್ವವಿದ್ಯಾನಿಲಯದ ಚಿನ್ನದ ರಾಣಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ನಾತಕ ಪದವಿಯಲ್ಲಿ ಹೊನ್ನಾಳಿಯ ಎಸ್‌.ಸಿಂಧುಬಾಯಿ ಮೂರು ಚಿನ್ನದ ಪದಕಗಳಿಸಿದ್ದಾರೆ.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟು 79 ಚಿನ್ನದ ಪದಕಗಳನ್ನು 45 ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಇವರಲ್ಲಿ 39 ಮಹಿಳೆಯರಿದ್ದರೆ, ಕೇವಲ 6 ಪುರುಷ ವಿದ್ಯಾರ್ಥಿಗಳಿದ್ದಾರೆ.

Advertisements

ಸ್ನಾತಕ ಪದವಿಯಲ್ಲಿ 10 ಮಹಿಳೆಯರು ಮತ್ತು 2 ಪುರುಷ ವಿದ್ಯಾರ್ಥಿಗಳು 20 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿನಿಯರು ಮತ್ತು 4 ಪುರುಷರು 59 ಸ್ವರ್ಣ ಪದಕಗಳನ್ನುಗಳಿಸಿದ್ದಾರೆ.

ಚಿನ್ನದ ರಾಣಿ ದೀಪ್ತಿ ಜೆ.ಗೌಡರ್ ಅವರು ವೀರಮ್ಮ ಶಾಂತವೀರಪ್ಪ ಅಥಣಿ, ಚನ್ನಬಸಮ್ಮ ಮುರಿಗೆಪ್ಪ ದೇವರಮನೆ, ಚಿಕ್ಕಣ್ಣ ಕಂಪಲಾಪುರ, ಕಣಿವೆ ಜೋಗಿಹಳ್ಳಿ ರಾಮಕ್ಕ ಗೌಡರ ತಿಮ್ಮಪ್ಪ, ಜಿ.ಎಸ್.ಕಮಲಮ್ಮ, ಬಿ.ನರಸಿಂಹಪ್ಪ ಸ್ಮಾರಕ ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸ್ನಾತಕ ಕಲಾ ಪದವಿಯಲ್ಲಿ ಹೊನ್ನಾಳಿಯ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿಂಧುಬಾಯಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಇವರು ತರಳುಬಾಳು ಬೃಹನ್ಮಠ ಸಿರಿಗೆರೆಯ ಲಿಂಗೈಕ್ಯ ಹಿರಿಯ ಜಗದ್ಗುರು ಶ್ರೀಶಿವಕುಮಾರ ಶಿವಾಚಾಯ ಮಹಾಸ್ವಾಮಿಗಳು, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ ಹಾಗೂ ಸುಧಾ ಮತ್ತು ಕಟೀಲ್‌ ಪದ್ಮನಾಭ ಭಟ್‌ ಸ್ಮಾರಕ ಸ್ವರ್ಣ ಪದಕಗಳನ್ನು ಪಡೆದರು.

ಇವರಲ್ಲದೆ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ವಿಭಾಗದ ಎಂ.ವೈ.ಚಂದನ, ಇಂಗ್ಲಿಷ್ ವಿಭಾಗದ ಜಿ.ಕೆ.ಮೋನಿಕಾ, ಬಿಎಡ್‌. ಪದವಿಯ ಟಿ.ಎನ್.ಕಾವ್ಯಾ, ಜೀವರಾಸಾಯನಶಾಸ್ತ್ರ ವಿಭಾಗದ ಸಾನಿಯಾ ಅಂಜುಂ, ಜೀವಶಾಸ್ತ್ರ ವಿಭಾಗದ ಫರಾನಾ ಸುರನ್ ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸ್ನಾತಕೋತ್ತರ ಕನ್ನಡ ವಿಭಾಗದ ಡಿ.ರೇವಣಸಿದ್ದಪ್ಪ, ಪತ್ರಿಕೋದ್ಯಮ ವಿಭಾಗದ ಬಿ.ಮೀನಾಕ್ಷಿ, ರಾಜ್ಯಶಾಸ್ತ್ರ ವಿಭಾಗದ ಆ‌ರ್.ಕೆ.ಪೂಜಾ, ಬಿವಿಎ ವಿಭಾಗದ ಜಯಲಕ್ಷ್ಮೀ ಅನಂತಾಚಾರ್ಯ ಉಪಾಧ್ಯೆ, ಎಂಬಿಎ ವಿಭಾಗ ವೈ.ಶಾಝಿಯಾ ಮತ್ತು ಟಿ.ಕೃತಿಕಾ, ಎಂ.ಪಿ.ಎಡ್ ವಿಭಾಗದ ಎನ್.ಕಿರಣಕುಮಾರ, ರಾಸಾಯನಶಾಸ್ತ್ರ ವಿಭಾಗ ಐ.ಕೆ.ಸಂಗೀತಾ, ಸಸ್ಯಶಾಸ್ತ್ರ ವಿಭಾಗದ ಎಸ್‌.ಜೆ.ಜಯಶ್ರೀ, ಕಂಪ್ಯೂಟ‌ರ್ ವಿಜ್ಞಾನ ವಿಭಾಗದ ಎಂ.ಅಂಬಿಕಾ, ಆಹಾರ ತಂತ್ರಜ್ಞಾನ ವಿಭಾಗದ ಎಚ್.ಎ.ದೀಪಿಕಾ, ಅಣುಜೀವಿಶಾಸ್ತ್ರ ವಿಭಾಗದ ಎಸ್‌.ದಿವ್ಯಶ್ರೀ, ಭೌತಶಾಸ್ತ್ರ ವಿಭಾಗದ ಕೆ.ಯಶೋದಾ ತಲಾ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಸ್ನಾತಕ ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸಿ.ಎಸ್.ಪೂಜಾ ಮತ್ತು ಸ್ನಾತಕ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯಲ್ಲಿ ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್‌ ಹೈಟೆಕ್‌ ಎಜುಕೇಶನ್ ಕಾಲೇಜಿನ ವಿದ್ಯಾರ್ಥಿನಿ ಜಿ.ಎಂ. ಸುಮತಿ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ ಎಲ್ಲಾ ವಿಭಾಗಗಳಲ್ಲಿ ಚಿನ್ನದ ಪದಕಗಳಿಸಿ ಮಹಿಳೆಯರು ಮೇಲುಗೈ ಸಾಧಿಸಿರುವುದು ವಿಶೇಷ ಇಂದು ಘಟಿಕೋತ್ಸವ ಹಾಗೂ ಪದಕ ಪ್ರದಾನ ಸಮಾರಂಭ ನಡೆಯಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್...

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

Download Eedina App Android / iOS

X