ಬೆಂಗಳೂರು ನಗರ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ 6 ಜನ ಮಾದಕವಸ್ತು ಮಾರಾಟಗಾರರನ್ನು ಬಂಧಿಸಿ, ಬರೋಬ್ಬರಿ ₹44 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ.
ಮಂಗಳವಾರ ವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೂರು ವಿದೇಶಿ ಮೂಲದ ಡ್ರಗ್ ಪೆಡ್ಲರ್ ಹಾಗೂ ಹೊರ ರಾಜ್ಯದ 3 ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಒಟ್ಟು 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಒಟ್ಟು ₹44 ಲಕ್ಷ ಮೌಲ್ಯದ 54 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್, 410 ಗ್ರಾಂ ಹೈಡ್ರೋ ಗಾಂಜಾ. 18 ಕೆಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‌ಗಳು ಹಾಗೂ 4 ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
In today’s weekly press briefing, @CPBlr spoke about the Anti-Narcotics wing of CCB arresting 6 drug peddlers including 3 foreigners and 3 interstate individuals. The operation resulted in the seizure of illegal substances valued at ₹44,00,000, which include 54 gm of MDMA… pic.twitter.com/2uMFgfiKzA
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) March 12, 2024
“ಫೆಬ್ರುವರಿ 29ರಂದು ಕುಮಾರ್ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಸರಣಿ ಚಿನ್ನಾಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದಾಖಲಾದ 8 ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಅವರುಗಳಿಂದ ₹16,00,000 ಬೆಲೆ ಬಾಳುವ 383 ಗ್ರಾಂ ಚಿನ್ನದ ಸರಗಳನ್ನು ಮತ್ತು ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸರು ಲ್ಯಾಪ್ ಟಾಪ್ ಮತ್ತು ಕ್ರೋಮ್ ಬಾಕ್ಸ್‌ಗಳು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.16 ರಂದು ಐವರನ್ನು ಬಂದಿಸಿದ್ದಾರೆ. ಈ ಪೈಕಿ ಇಬ್ಬರು ವ್ಯಕ್ತಿಗಳು ಅದೇ ಕಂಪನಿಯಲ್ಲಿ ಲ್ಯಾಪ್‌ಟಾಪ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಉಳಿದ ಮೂರು ವ್ಯಕ್ತಿಗಳು ಇವರ ಸಹಚರರಾಗಿದ್ದಾರೆ. ಒಟ್ಟು ₹16,00,000 ಮೌಲ್ಯದ ನಾನಾ ಕಂಪನಿಯ 29 ಲ್ಯಾಪ್ ಟಾಪ್ ಮತ್ತು 59 ಕ್ರೋಮ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? 5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
“ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 9ರಂದು ಎರಡು ಪ್ರತ್ಯೇಕ ಮನೆ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 414 ಗ್ರಾಂ ಚಿನ್ನದ ಒಡವೆ, 104ಗ್ರಾಂ ತೂಕದ ಬೆಳ್ಳಿ ವಸ್ತು ಹಾಗೂ 4 ವಿದೇಶಿ ಬ್ರ್ಯಾಂಡ್‌ನ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹28,00.000 ಆಗಿದೆ” ಎಂದು ವಿವರಿಸಿದ್ದಾರೆ.