ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಕಳಪೆ ಪ್ರಮಾಣದಲ್ಲಿದ್ದು, 2024ರ ಜನವರಿಯಲ್ಲಿ 3.8%ಗೆ ಕುಸಿದಿದೆ ಎಂದು ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಹೇಳಿದೆ.
ಮಂಗಳವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಉತ್ಪಾದನಾ ವಲಯದಲ್ಲಿ ಐಐಪಿ ಸೂಚ್ಯಂಕವು 2023ರ ಡಿಸೆಂಬರ್‌ನಲ್ಲಿ 4.5% ಇತ್ತು. ಇದು, ಜನವರಿಯಲ್ಲಿ 3.8% ಕುಸಿತವಾಗಿದೆ.
ಎಂಟು ಪ್ರಮುಖ ಕೈಗಾರಿಕೆಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಐಐಪಿಯ 40% ರಷ್ಟಿವೆ. ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆಯು 2023ರ ಡಿಸೆಂಬರ್‌ನಲ್ಲಿ ಕ್ರಮವಾಗಿ 5.2% ಮತ್ತು 1.2% ಇದ್ದವು. ಜನವರಿಯಲ್ಲಿ 5.9% ಮತ್ತು 5.6%ಗೆ ಏರಿಕೆಯಾಗಿವೆ.
ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಪ್ರಕಾರ, ಫೆಬ್ರವರಿಯಲ್ಲಿ ಐಐಪಿ ಬೆಳವಣಿಗೆಯು 3-4%ಗೆ ಸೀಮಿತವಾಗುವ ಸಾಧ್ಯತೆಯಿದೆ.
ಏತನ್ಮಧ್ಯೆ, ಗ್ರಾಹಕ-ಬೆಲೆ ಆಧಾರಿತ ಹಣದುಬ್ಬರ (ಸಿಪಿಐ) ಎಂದು ಕರೆಯಲ್ಪಡುವ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ 5.1%ಗೆ ಹೋಲಿಸಿದರೆ ಫೆಬ್ರವರಿಯಲ್ಲಿ 5.09%ಗೆ ಏರಿಕೆಯಾಗಿದೆ.