ನಾಗಠಾಣ ಬ್ಲಾಕ್ ಮಾಜಿ ಅಧ್ಯಕ್ಷ ದೇಸು ಗೇಮು ಚವ್ಹಾಣ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಮರುಸೇರ್ಪಡೆಗೊಂಡಿದ್ದಾರೆ. ಅವರ ಸೇರ್ಪಡೆಯಿಂದ ನಾಗಠಾಣ ಮತ್ತು ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಹೇಳಿದರು.
ದೇಸು ಗೇಮು ಚವ್ಹಾಣ ಅವರು ತಮ್ಮ ಬೆಂಬಲಿಗ ಕುಮಟಗಿ ಎಲ್ ಟಿ, ಆಹೇರಿ, ಮದಬಾವಿ, ಹಡಗಲಿ ಹಾಗೂ ಹಿಂದಿನ ಕಾಂಗ್ರೆಸ್ ಸದಸ್ಯರೊಂದಿಗೆ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ.
ದೇಸು ಗೇಮು ಚವ್ಹಾಣ ಮಾತನಾಡಿ, “ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಚು ಚವ್ಹಾಣ, ಅಪ್ಪು ಹೀರು ಪವಾರ, ದುಂಡು ದೇನು ಜಾಧವ, ಭಾವಸಿಂಗ ಜಾಧವ, ಸಂತೋಷ ಜಾಧವ, ರಾಜು ಜಾಧವ, ಧೋಂಡು ದೇನು ಜಾಧವ, ಸುರೇಶ ಡಿ ಚವ್ಹಾಣ, ಸೇವು ತುಳಜು ನಾಯಕ, ಮಾನು ಕಾರಬಾರಿ, ಹೂನು ಚವ್ಹಾಣ, ಎಂ ಎಂ ಮುಲ್ಲಾ (ದ್ಯಾಬೇರಿ) ಪಾಂಡು ರಾಠೋಡ, ಧರ್ಮು ರಾಠೋಡ, ಎಂ.ವಾಯ್. ಹಲಗಣಿ ಇವರುಗಳೊಂದಿಗೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಅದರಂತೆ ಇನ್ನು ಮುಂದೆ ಜಿಲ್ಲೆಯ ಪ್ರಭಾವಿ ನಾಯಕರು ಹಾಗೂ ಇಬ್ಬರು ಸಚಿವರುಗಳ ಮತ್ತು ಶಾಸಕರುಗಳ ಮಾರ್ಗದರ್ಶನದಲ್ಲಿ ನಡೆದುಕೊಳ್ಳುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀರಾಸಾಬ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಕೃಷ್ಣಾ ಲಮಾಣಿ ಸೇರಿದಂತೆ ಇತರರು ಇದ್ದರು.