ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ 2023ರ ಫೆಬ್ರವರಿಯಲ್ಲಿ ಉಚ್ಚಾಟಿತರಾಗಿದ್ದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಪತ್ನಿ ಪಾಟಿಯಾಲ ಸಂಸದೆ ಪ್ರಣೀತ್ ಕೌರ್ ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಂಜಾಬ್ ಬಿಜೆಪಿ ಘಟಕದ ಅಧ್ಯಕ್ಷ ಸುನೀಲ್ ಜಾಕಡ್ ಸೇರಿದಂತೆ ಬಿಜೆಪಿ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಕಮಲ ಪಕ್ಷಕ್ಕೆ ಸೇರಿದರು.
“ನಾನು ಹಿಂದಿನದಕ್ಕೆ ಹೋಗಲು ಬಯಸುವುದಿಲ್ಲ.ನಾನು ಕಾಂಗ್ರೆಸ್‌ನೊಂದಿಗೆ ಒಳ್ಳೆಯ ಇನಿಂಗ್ಸ್ ಹೊಂದಿದ್ದೆ. ಅದೇ ರೀತಿ ಬಿಜೆಪಿಯಲ್ಲಿಯೂ ಒಳ್ಳೆಯ ಇನಿಂಗ್ಸ್ ಹೊಂದುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ರಾಜ್ಯ, ದೇಶ ಹಾಗೂ ನಾನು ನನ್ನ ಕ್ಷೇತ್ರದ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ
ಲೋಕಸಭೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಇದನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಪ್ರಣೀತಾ ಕೌರ್ ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರ ಪತ್ನಿ. ಕಾಂಗ್ರೆಸ್ ತ್ಯಜಿಸಿರುವ ಅಮರೇಂದರ್ ಸಿಂಗ್ 2022ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸೇರ್ಪಡೆಗೊಂಡರು.
