ಗದಗ | ಸಂವಿಧಾನ ಬದಲಿಸುವ ವ್ಯವಸ್ಥೆಯ ವಿರುದ್ದ ಜನಕ್ರಾಂತಿ ಆಗಬೇಕಿದೆ: ಚಿಂತಕ ಬಸವರಾಜ ಸೂಳಿಬಾವಿ

Date:

Advertisements

ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸಲೇಬೇಕು ಎಂದೇ ಬೇರೆ ಬೇರೆಯವರಿಂದ ಹೇಳಿಸಲು ಹೊರಡುತ್ತಾರೆ. ಅನಂತಕುಮಾರ್ ಹೆಗಡೆ ನೆಪ ಮಾತ್ರ ಅಷ್ಟೇ. ಬೇರೆ ಬೇರೆ ಸಂದರ್ಭದಲ್ಲಿ ಈಗಾಗಲೇ ಹೇಳಿದ್ದಾರೆ. ಅನಂತ ಕುಮಾರ ಹೆಗಡೆ ಸಾಮಾನ್ಯ ಮನುಷ್ಯನಲ್ಲ. ಈ ಸಂವಿಧಾನದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸಂಸತ್ತಿನ ಒಬ್ಬ ಸದಸ್ಯ, ಬಿಜೆಪಿಯಲ್ಲಿ ಮಂತ್ರಿ ಸ್ಥಾನದಲ್ಲಿದ್ದವನು. ಈ ರೀತಿ ಹೇಳುವುದನ್ನು ಬಿಜೆಪಿ ನಿರಾಕರಿಸುವುದಾಗಲಿ, ಪಕ್ಷಕ್ಕೆ ಸಂಬಂಧಿಸಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಲ್ಲ. ಅಂದರೆ ಬಿಜೆಪಿ ಮೌನವಾಗಿಯೇ ಒಪ್ಪಿಕೊಂಡಿದೆ ಎಂದರ್ಥ” ಎಂದು ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.

ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಪದೇ ಪದೆ ಸಂವಿಧಾನದ ವಿರುದ್ಧ ಮಾತನಾಡುತ್ತಿರುವುದನ್ನು ಖಂಡಿಸಿ ಪ್ರಗತಿಪರ ಚಿಂತಕರು, ದಲಿತಪರ ಮುಖಂಡರು ಒಗ್ಗೂಡಿ ಗದಗ ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

“ಹಿಂದೆ ಸ್ಪಷ್ಟವಾಗಿಯೇ ಹೇಳಿದ್ದಾರೆ, ನಮ್ಮ ಸರ್ಕಾರ‌ ಅಧಿಕಾರಕ್ಕೆ ಬಂದಿದ್ದು, ನಾವು ಸಂವಿಧಾನ ಬದಲಿಸಲಿಕ್ಕಾಗಿಯೇ ಬಂದಿದ್ದೇವೆಂದು ಈಗ ಅನಂತಕುಮಾರ್ ಹೆಗಡೆ ಹೇಳ್ತಿದ್ದಾನೆ” ಸಂವಿಧಾನ ಬದಲಿಸಲಿಕ್ಕೆ 400 ಮಂದಿ ಸಂಸದರು ಬರಬೇಕೆಂದು ಅನಂತಕುಮಾರ ಹೆಗಡೆ ಹೇಳುತ್ತಿದ್ದ, ಈ ಮನುಷ್ಯನಿಗೆ ಇವತ್ತಿಗೂ ಸಂವಿಧಾನ ಓದ್ಕೊಳ್ಳೋಕೆ ಆಗಿಲ್ಲ. ಸಂವಿಧಾನವನ್ನು ಪೂರ್ತಿಯಾಗಿ ಓದಿಕೊಂಡಿದ್ದರೆ, ಇಂತಹ ಪದಗಳನ್ನು ಹೇಳಲು ಸಾದ್ಯವೇ ಇಲ್ಲ” ಎಂದು ಬಸವರಾಜ ಸೂಳಿಬಾವಿ ಹೇಳಿದರು.

Advertisements

“ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆಂದು ಉದ್ಧಟತನ ಹೇಳಿಕೆ ಕೊಟ್ಟಿದ್ದರು. ಈಗ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಿ ಬದಲಾಯಿಸುತ್ತೇವೆಂದು ಹೇಳಿದ್ದಾರೆ. ಇವರ ಸಂವಿಧಾನ ವಿರೋಧಿ ಹೇಳಿಕೆ ಖಂಡನೀಯ” ಎಂದು ಹೇಳಿದರು.

“ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಕೆಲವು ನಿಯಮಗಳಿವೆ. ಇವುಗಳ ಕುರಿತು ಯಾವುದೇ ಪರಿಜ್ಞಾನ ಇಲ್ಲದೇ, ಸಂವಿಧಾ‌ನ ಬದಲಿಸಕ್ಕೆ 400 ಮಂದಿ ಸಂಸದರು ಬೇಕು ಎನ್ನುವುದಿದೆಯಲ್ಲ, ಈ ಸಂವಿಧಾನ ನಿರಾಕರಿಸುವುದಿಷ್ಟೇ, ಈ ದೇಶದ ಗಣರಾಜ್ಯ, ಒಕ್ಕೂಟ ವ್ಯವಸ್ಥೆಯನ್ನೇ ನಿರಾಕರಿಸಿದ ಹಾಗೆ. ಈ ಸಂವಿಧಾನದ ಮೂಲಕವೇ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿರುವುದು, ಗಣರಾಜ್ಯ ಬಂದಿರುವುದು. ಅಂದರೆ ಗಣರಾಜ್ಯವನ್ನು ಪ್ರಜಾಪ್ರಭುತ್ವವನ್ನು ನಿರಾಕರಿಸುವಂತಹ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ಸಂವಿಧಾನವನ್ನು ಇವರು ಯಾಕೆ ನಿರಾಕರಿಸುತ್ತಾರೆಂದರೆ ಈ ಸಂವಿಧಾನ ಎಲ್ಲರಿಗೂ ಸಮಾನತೆಯ ಅವಕಾಶಗಳನ್ನು ಕೊಟ್ಟಿದೆ. ಇಲ್ಲಿ ಯಾರೂ ಶ್ರೇಷ್ಠರಲ್ಲ ಕನಿಷ್ಟರಲ್ಲ, ಎಲ್ಲರೂ ಸಮಾನರೆಂದು ಹೇಳುತ್ತದೆ. ಆದರೆ ಮನುಸ್ಮೃತಿ ಮನುಷ್ಯರನ್ನು ಇವರು ಶ್ರೇಷ್ಠರು, ಇವರು ಕನಿಷ್ಟರೆಂದು ಹೇಳುತ್ತದೆ. ಆದರೆ ಸಂವಿಧಾನ ಎಲ್ಲರೂ ಸಮಾನರೆಂದು ಹೇಳುತ್ತದೆ. ಈ ಸಮಾನತೆ ಕಲ್ಪನೆಯನ್ನು, ಈ ಸನಾತನವಾದವನ್ನು ಎತ್ತಿ ಹಿಡಿಯುತ್ತಿರುವ ಬಿಜೆಪಿಯವರಿಗೆ, ಸಂಘ ಪರಿವಾರದವರಿಗೆ ಈ ಸಮಾನತೆಯನ್ನು ಸಹಿಸಲು ಆಗುತ್ತಿಲ್ಲ. ಜಾತ್ಯತೀತ ವ್ಯವಸ್ಥೆಯ ಬದಲು ಜಾತಿ ವ್ಯವಸ್ಥೆ ತರುತ್ತಿದ್ದಾರೆ. ಧರ್ಮ ತರುತ್ತಿದ್ದಾರೆ. ಇನ್ನು ಚಾತುರ್ವರ್ಣ ವ್ಯವಸ್ಥೆಯನ್ನು ತರುತ್ತಿದ್ದಾರೆ. ಆದರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. ಆದರೆ ಹಿಂದುತ್ವಕ್ಕೆ ಮರಳುವುದೆಂದರೆ, ಬೇದ-ಭಾವ, ಶ್ರೇಷ್ಠ-ಕನಿಷ್ಟ ಎತ್ತಿ ಹಿಡಿಯುವುದಾಗಿದೆ. ಈ ಬಿಜೆಪಿ ಪುನಃ ಚಾತುರ್ವರ್ಣ ಜಾರಿಗೊಳಿಸುವ ಹುನ್ನಾರ ನಡೆಸುತ್ತಿದೆ” ಎಂದು ಹೇಳಿದರು.

“ಸಂವಿಧಾನದ ಮೂಲಕ ಸಮಾನತೆ ಪಡೆದಿದ್ದೇವೆ. ಈ ತಾರತಮ್ಯ ನಿರಾಕರಿಸಿ, ಸಂವಿಧಾನದ ಫಲಾನುಭವಿಗಳಾಗಿದ್ದೇವೆ. ಬ್ರಾಹ್ಮಣ್ಣೇತರ ವರ್ಗಗಳು ಶ್ರೂದ್ರರು, ದಲಿತರೆಲ್ಲ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರೆಲ್ಲರೂ ಕೂಡ ಸಂವಿಧಾನವನ್ನು ಬದಲಿಸುವುದನ್ನು ಮಾತನಾಡುವಂತಹ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವಂತಹ ಗಟ್ಟಿ ನಿರ್ಧಾರ ಮಾಡಿಕೊಂಡು ಅದಕ್ಕೆ ತಕ್ಕ ಉತ್ತರ ಕೊಡಬೇಕು. ಅದರ ಜತೆಗೆ ಸಂವಿಧಾನ ಬದಲಾಯಿಸುವಂತೆ ಮಾತನಾಡುತ್ತಿದ್ದಾರೆ. ಆ ವ್ಯವಸ್ಥೆ ವಿರುದ್ದ ಜನಕ್ರಾಂತಿ ಆಗಬೇಕಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂವಿಧಾನ ಎಲ್ಲರ ಎದೆಯೊಳಗೆ‌ ಅಚ್ಚಾಗಿದೆ. ಸಂವಿಧಾನ ಉಳಿಸಿಕೊಳ್ಳುವುದಕ್ಕಾಗಿ ಈ ದೇಶದ ಎಪ್ಪತ್ತರಷ್ಟು ಜನರು ಯಾವಾಗಲೂ ಸಿದ್ಧರಿರುತ್ತಾರೆ. ಅನಂತಕುಮಾರ್ ಹೆಗಡೆ ಪ್ರತಿನಿಧಿಸುವ ಬಿಜೆಪಿ ಪಕ್ಷವನ್ನು, ಸಂವಿಧಾನ ವಿರೋಧಿಸುವ ಪಕ್ಷವನ್ನು ವಿರೋಧಿಸಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲಸೌಕರ್ಯ ಒದಗಿಸುವಂತೆ ಆಗ್ರಹ

ಬಸವ ತತ್ವ ಅನುಯಾಯಿ ಅಶೋಕ ಬರಗುಂಡಿ, ಶೇಖರ ಕವಳಿಕಾಯಿ ದಲಿತಪರ ಮುಖಂಡರು ಮುತ್ತು ಬಿಳಿಯಲಿ, ಪರಶು ಕಾಳೆ, ಅನಿಲ್ ಕಾಳೆ, ಆನಂದ ಶಿಂಗಾಡಿ, ಬಾಲರಾಜ ಅರಬರ್, ನಾಗರಾಜ್ ಗೋಕಾವಿ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X