ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತರ ಸ್ವತ್ತಲ್ಲಾ ಅವರು ಸರ್ವ ಜನಾಂಗದವರ ಸ್ವತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಹೇಳಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಕಲಬುರಗಿ ಜಿಲ್ಲಾ ಸಂಚಾಲಕರಾಗಿ ರಮೇಶ್ ದೊಡ್ಮನಿ ಅವರನ್ನು ಆಯ್ಕೆ ಮಾಡಿ ಮಾತನಾಡಿದರು.
“ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಸಮಾನತೆಗಾಗಿ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿ ಕೇವಲ ದಲಿತರ ಸ್ವತ್ತಾಗದೆ ಎಲ್ಲ ಸಮಾಜದವರಿಗೂ ಬೇಕಾಗಿದ್ದಾರೆ” ಎಂದು ಹೇಳಿದರು.
“ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಮ್ಮ ಸಂಘಟನೆ ಮುನ್ನಡೆಸಲಾಗುತ್ತಿದ್ದು, ಹೋರಾಟದ ಮೂಲಕ ಎಲ್ಲರಿಗೂ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲ ಪದಾಧಿಕಾರಿಗಳು ಈಗಿನಿಂದಲೇ ಕೈಗೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ, ಗೆದ್ದ ಬಳಿಕ ಭೇಟಿಯಾಗುತ್ತೇನೆ: ಕೆ ಎಸ್ ಈಶ್ವರಪ್ಪ
ಈ ಸಂದರ್ಭದಲ್ಲಿ ನಾಗೇಶ್ ಹಲಿಗಿ ಚಿತ್ತಾಪುರ, ಯಾದಗಿರಿ ಜಿಲ್ಲಾ ಸಂಚಾಲಕ ಮಾನಪ್ಪ ಕಲ್ಲದೇವನಹಳ್ಳಿ, ಎಂ ಡಿ ಲಾಲ್ ಸಾಬ್, ಸಾಬರೆಡ್ಡಿ ಇಬ್ರಾಂಪುರ್ ಸೇರಿದಂತೆ ಬಹುತೇಕರು ಇದ್ದರು.
ಮಾಹಿತಿ :ಅನಂತ್
