ಪ್ರಾದೇಶಿಕ ಅಸಮತೋಲನೆ ನಿವಾರಿಸಲು ರಚಿಸಲಾಗಿದ್ದ ನಂಜುಂಡಪ್ಪ ಸಮಿತಿ ಶಿಫಾರಸಿನ ಕುರಿತು ಅಧ್ಯಯನ ನಡೆಸಲು ಆರ್ಥಿಕ ತಜ್ಞ ಗೋವಿಂದರಾವ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಸಮಿತಿ ಗ್ರಾಮ ಪಂಚಾಯಿತಿಯನ್ನು ಘಟಕವನ್ನಾಗಿ ಅಧ್ಯಯನ ನಡೆಸಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಾ ರಜಾಕ್ ಉಸ್ತಾದ್ ಆಗ್ರಹಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “2007-08ನೇ ಸಾಲಿನಿಂದ 2020-21ನೇ ಸಾಲಿನವರೆಗೆ ನಂಜುಡಪ್ಪ ಸಮಿತಿ 8 ವರ್ಷಗಳ ಕ್ರಿಯಾಯೋಜನೆ ರೂಪಿಸಿ ವಿಶೇಷ ಅನುದಾನಕ್ಕಾಗಿ 2 ಸಾವಿರ ಕೋಟಿ, ಸಾಮಾನ್ಯ ಅನುದಾನವಾಗಿ 2 ಸಾವಿರ ಕೋಟಿ ರೂ. ಅನುದಾನ ನೀಡಲು ಶಿಫಾರಸು ಮಾಡಿತ್ತು” ಎಂದು ಹೇಳಿದರು.
“ನಂಜುಂಡಪ್ಪ ಸಮಿತಿ ಶಿಫಾರಸಿನಂತೆ ಆಗಿರುವ ಬದಲಾವಣೆಯಂತೆ ಧಾರವಾಡದ ಸಿಎಂಡಿಆರ್ ಸಂಸ್ಥೆಯಿಂದ ಅಧ್ಯಯನ ನಡೆಸಲಾಗಿತ್ತು. ಅಲ್ಲದೇ ಮೌಲ್ಯಾಂಕ ಪ್ರಾಧಿಕಾರದಿಂದಲೂ ಅಧ್ಯಯನ ನಡೆಸಲಾಗಿದೆ. ತಾಲೂಕನ್ನು ಘಟಕವನ್ನಾಗಿ ಪರಿಗಣಿಸಿದ ಪರಿಣಾಮವಾಗಿ ನಗರ ಮತ್ತು ಗ್ರಾಮೀಣ ಜನರಿಗೆ ಅನ್ಯಾಯವಾಗಿದೆ. ತಾಲೂಕು ಘಟಕವನ್ನಾಗಿಸಿದ್ದರಿಂದ ನಗರ ಜನರ ಜೀವನ ಮಟ್ಟವೇ ಬೇರೆ, ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟವೇ ಬೇರೆಯಾಗಿರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ; ಲೋಕ ಅದಾಲತ್‌ನಲ್ಲಿ ಒಂದಾದ ಆರು ಜೋಡಿ
“ಗ್ರಾಮ ಪಂಚಾಯಿತಿಯನ್ನು ಘಟಕವನ್ನಾಗಿ ಹೊಸ ಸಮಿತಿ ಅಧ್ಯಯನ ನಡೆಸಿದರೆ ಹಿಂದುಳಿದ, ಅತ್ಯಂತ ಹಿಂದುಳಿದ ತಾಲೂಕುಗಳನ್ನು ವಿಗಂಡಿಸಬೇಕಿದೆ. ಈ ಕುರಿತು ಉನ್ನತಾಧಿಕಾರ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪವನ ಪಾಟೀಲ್, ಅಂಜಿನ ಕುಮಾರ ಇದ್ದರು.
ವರದಿ : ಹಫೀಜುಲ್ಲ
