ರಾಯಚೂರು ಜಿಲ್ಲೆಯ ಎಲ್ಲಾ ತಾಲೂಗಳಲ್ಲಿ ಜೋಳ ಖರೀದಿ ಕೇಂದ್ರ ಸ್ಥಾಪನೆ ವಿಳಂಭ ಮಾಡದೇ ಖರೀದಿ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಮಾನ್ವಿ ಮತ್ತು ಸಿಂಧನೂರು ತಾಲೂಕಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ಸಮರ್ಪಕ ಖರೀದಿ ನಡೆಯುತ್ತಿಲ್ಲ. ಹಿಂಗಾರು ಜೋಳ ಖರೀದಿಗೆ ಯಾವುದೇ ನಿರ್ಧಾರ ಮಾಡದೇ ಇರುವದರಿಂದ ರೈತರು ಆತಂಕಕ್ಕೆ ಸಿಲುಕುವಂತಾಗಿದೆ. ಕೂಡಲೇ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜೋಳ ಖರೀದಿಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದರು ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳು ಒತ್ತಾಯ ಸಾಲ ವಸೂಲಿಗೆಮುಂದಾಗಿವೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಉದ್ಯೋಗ ಖಾತ್ರಿ ಕೂಲಿ ಹಣವನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತಿದೆ. ತಕ್ಷಣ ನಿಲ್ಲಿಸಲು ಆದೇಶ ನೀಡಬೇಕು. ಬರಗಾಲವೆಂದು ಘೋಷಣೆ ಮಾಡಿದ್ದರೂ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯ ಸರ್ಕಾರ ನೀಡಿರುವ ಎರಡು ಸಾವಿರ ರೂ. ಹಣ ಎಲ್ಲ ರೈತರಿಗೆ ತಲುಪುತ್ತಿಲ್ಲ. ಕೂಡಲೇ ಬರಪರಿಹಾರ ಹಣ ಬಿಡುಗಡೆಗೊಳಿಸಬೇಕು. ರಾಷ್ಟ್ರೀಯ ಫಸಲ ಭೀಮಾ ಯೋಜನೆಯಡಿ ಮಾನ್ವಿ, ಸಿರವಾರ, ದೇವದುರ್ಗ ತಾಲೂಕಗಳಲ್ಲಿ ಭಾರೀ ಬ್ರಷ್ಟಾಚಾರ ನಡೆದಿದ್ದು, ಕೂಡಲೇ ತನಿಖೆ ನಡೆಸಿ ಅರ್ಹರಿಗೆ ವಿಮಾ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದ್ದು ಜನರಿಗೆ ಚಿಕಿತ್ಸೆ ದೊರಯುತ್ತಿಲ್ಲ. ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕು. ಭೂ ದಾಖಲೆ ಇಲಾಖೆಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದ್ದು, ಟಿಪ್ಪಣ, ಲೇವನ್ ಸ್ಕೇಚ್, ಮ್ಯಾಪ್ ಪಡೆಯುವಲ್ಲಿ ಆಗುತ್ತಿರುವ ತೊಂದರೆ ನಿವಾರಿಸಬೇಕು. ದೇವದುರ್ಗ ತಾಲೂಕಿನ ಬಿ.ಗಣೇಕಲ್ ರೈತರಿಗೆ ಬಗರ ಹುಕುಂಸಾಗುವಳಿದಾರರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಈ ವೇಳೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಚಾಮರಸಮಾಲಿಪಾಟೀಲ್, ರಾಜ್ಯ ಕಾರ್ಯದರ್ಶಿ ಸೂಗೂರಯ್ಯ ಆರ್.ಎಸ್. ಮಠ, ಜಿಲ್ಲಾ ಉಪಾಧ್ಯಕ್ಷ ಬೂದೆಯ್ಯ ಸ್ವಾಮಿ, ಮಲ್ಲಣ್ಣ ದಿನ್ನಿ, ಯಂಕಪ್ಪ ಕಾರಬಾರಿ, ದೇವರಾಜ ನಾಯಕ, ಹಾಜಿ ಮಸ್ತಾನ್ ದೇವದುರ್ಗ, ಎಚ್.ಶಂಕ್ರಪ್ಪ ಸಿರವಾರ, ಮಲ್ಲಣ್ಣ ಗೌಡೂರು, ಶರಣಗೌಡ, ಬ್ರಮಯ್ಯ ಆಚಾರಿ, ಬಸವರಾಜ ನವಲಕಲ್, ದೇವೆಂದ್ರಪ್ಪ ನಾಯಕ, ಬಸವರಾಜ ತಡಕಲ್, ವಿರೇಶ ಗವಿಗಟ್ಟ, ಶೇಖರಪ್ಪ ಜಾನೇಕಲ್, ಬಸವರಾಜ ಜಾನೇಕಲ್, ಪುತ್ರಪ್ಪ ನಾರಬಂಡಿ, ಉಮಾಪತಿಗೌಡ, ಎ.ಗೋವಿಂದಪ್ಪ ಹಲವರು ಉಪಸ್ಥಿತರಿದ್ದರು.
