ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳು ಬಿಸಿಲಿನ ನಾಡು ಬೇಸಿಗೆಯಲ್ಲಿ ಅತೀ ಹೆಚ್ಚು ತಾಪಮಾನ ಕಂಡುಬರುವ ಜಿಲ್ಲೆಗಳಾಗಿವೆ. ಸಧ್ಯ ಬೇಸಿಗೆಯ ಬಿಸಿ ಹೆಚ್ಚಾಗಿದ್ದು ಈ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಬಸ್ ನಿಲ್ದಾಣ ಕೊರತೆಯಿಂದ ಸಾರ್ವಜನಿಕರು ಸಾರಿಗೆ ಬಳಸುವ ಸ್ಥಳೀಯರು ಕಂಗಾಲಾಗಿದ್ದಾರೆ.
ಯಾದಗಿರಿ ಜಿಲ್ಲಾ ಕೇಂದ್ರದಿಂದ ಅಬ್ಬೆತುಮಕುರು ಗ್ರಾಮ ಆರು ಕಿ.ಮೀ ಅಂತರದಲ್ಲಿದೆ. ಆದರೇ ಈ ಗ್ರಾಮದಲ್ಲಿ ಒಂದು ಬಸ್ ತಂಗುದಾಣವಿಲ್ಲದೇ ಬಸ್‌ಗಾಗಿ ಕಾಯುವ ಗ್ರಾಮಸ್ಥರು ಬೇಸಿಗೆಯಲ್ಲಿ ನೆರಳಿಲ್ಲದೇ ಒದ್ದಾಡುವ ಸ್ಥಿತಿ ಇದೆ.
ಊರಿಂದ ಬೇರೆ ಊರಿಗೆ ತೆರಳುವ ದಿನನಿತ್ಯದ ಪ್ರಯಾಣಿಕರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು, ಸಣ್ಣ ಮಕ್ಕಳು, ಗರ್ಭಿಣಿಯರು, ರೋಗಿಗಳು ಸರಿಯಾದ ಬಸ್ ನಿಲ್ದಾನ ವಿಲ್ಲದೇ ಬಿಸಿಲಲ್ಲೇ ಬಸ್‌ಗಾಗಿ ಕಾಯಬೇಕಿದೆ. ಪ್ರಯಾಣಿಕರು ಬಿರು ಬಿಸಿಲಿನ ಬೇಗೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳವುದಕ್ಕೆ ಆಗದೇ, ಬಸ್‌ಗಾಗಿ ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ. ಇದು ಈ ಒಂದು ಗ್ರಾಮದ ಸ್ಥಿತಿಯಲ್ಲಿ. ಜಿಲ್ಲೆಯ ಎಷ್ಟೋ ಗ್ರಾಮಗಳು ಈ ವರೆಗೂ ಬಸ್ ತಂಗುದಾಣ ಕಾಣೆಯಾಗಿವೆ.
ಬೇಸಿಗೆಯಲ್ಲಿ ಬಸ್ ತಂಗುದಾಣಗಳ ಅಗತ್ಯತೆ ಹೆಚ್ಚಾಗಿದ್ದು, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಬೇಕಿದ್ದ ಬಸ್ ವ್ಯವಸ್ಥೆಸಹ ಕೆಲವು ಹಳ್ಳಿಗಳಿಗೆ ಇಲ್ಲ. ಇನ್ನು ಕೆಲವು ಹಳ್ಳಿಗಳಿಗೆ ಒಂದು ಅಥವಾ ಎರಡು ಬಸ್‌ಗಳು ಬರುತ್ತವಷ್ಟೇ. ಈ ಗ್ರಾಮಗಳ ಜನ ಬಸ್ ಬರುವ ವರೆಗೂ ಕಾಯುತ್ತಾರೆ, ಬಸ್ ಬಂದಮೇಲೆ ಬಸ್‌ನಲ್ಲಿ ಜನ ತುಂಬಿಕೊಳ್ಳುವವರೆಗೂ ಕಾಯಬೇಕು. ನಾವುಗಳು ನಮ್ಮ ಈ ಸಮಸ್ಯೆಯ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಈ ಗ್ರಾಮಸ್ಥರ ಆರೋಪ.
