ಪ್ರಧಾನಿ ನರೇಂದ್ರ ಮೋದಿಯವರು ಮಾ.18ರಂದು ತಮಿಳುನಾಡಿನ ಪ್ರವಾಸದ ವೇಳೆ ಕೊಯಂಬತ್ತೂರಿನಲ್ಲಿ ಆಯೋಜಿಸಿದ್ದ ರೋಡ್ ಶೋ ವೇಳೆ ಶಾಲಾ ಮಕ್ಕಳನ್ನು ಬಳಸಿಕೊಂಡಿರುವುದು ಈಗ ಸದ್ಯ ವಿವಾದಕ್ಕೆ ಕಾರಣವಾಗಿದೆ. ಇದು ಸುದ್ದಿಯಾಗುತ್ತಿದ್ದಂತೆಯೇ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ವರದಿ ಮಾಡಿದ್ದ ದಿ ಹಿಂದೂ, ಚುನಾವಣಾ ಪ್ರಚಾರದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಾರದು ಎಂಬ ನಿಷೇಧವಿದೆ. ಇದರ ಹೊರತಾಗಿಯೂ ಸುಮಾರು 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಕೊಯಂಬತ್ತೂರಿನಲ್ಲಿ ಸೋಮವಾರ ನಡೆದ ಪ್ರಧಾನಿ ಮೋದಿಯವರ ರೋಡ್‌ಶೋನಲ್ಲಿ ಬಳಸಿಕೊಳ್ಳಲಾಗಿತ್ತು. ಶಾಲಾ ಮಕ್ಕಳು ತಮ್ಮ ಶಿಕ್ಷಕರೊಂದಿಗೆ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಶಾಲೆಯಿಂದ ನಿರ್ದೇಶನ ನೀಡಲಾಗಿತ್ತು” ಎಂದು ತಿಳಿಸಿದೆ.
#PMModiRoadshow | Despite prohibition on #schools involving students in election campaigns, around 50 Govt. school kids in #Coimbatore were seen with their teachers at PM Modi’s roadshow on Monday. #Students said they were directed by the school to attend the event.@THChennai pic.twitter.com/Ym47mmznNn
— Avantika Krishna (@AvantikaKrish) March 18, 2024
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದ ಮೂಲಕ ಮಾಹಿತಿ ನೀಡಿರುವ ಕೊಯಂಬತ್ತೂರು ಜಿಲ್ಲಾಧಿಕಾರಿ ಕ್ರಾಂತಿ ಕುಮಾರ್ ಪಟಿ, “ಈ ಬಗ್ಗೆ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲು ಆದೇಶಿಸಿದ್ದೇವೆ. ಎಆರ್‌ಎ ಅವರು ಮುಖ್ಯ ಶಿಕ್ಷಣಾಧಿಕಾರಿ ಮತ್ತು ಕಾರ್ಮಿಕ ಇಲಾಖೆ ಜಂಟಿ ಆಯುಕ್ತರಿಂದ ವರದಿ ಕೇಳಿದ್ದಾರೆ. ವಿಚಾರಣೆಯ ಫಲಿತಾಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
We have taken cognisance of the matter are inquiring into it. ARO has sought reports from Chief education officer and Joint commissioner, Labour department. Suitable action will be taken based on the findings of the inquiry. https://t.co/B7TUaFZCdv
— District Collector, Coimbatore (@CollectorCbe) March 19, 2024
ಅಲ್ಲದೇ, ಈ ಬೆಳವಣಿಗೆಯ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಪಿ ಸುರೇಶ್ ಪ್ರತಿಕ್ರಿಯಿಸಿದ್ದು, “ಈ ರೀತಿಯ ಪದ್ಧತಿಗಳು ನೀತಿ ಸಂಹಿತೆಯ ಉಲ್ಲಂಘನೆಯಾಗಿವೆ. ತನಿಖೆ ಪೂರ್ಣಗೊಂಡ ನಂತರ ವರದಿಗಳನ್ನು ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.
Children on the left can be seen wearing synthetic strips of cloth with the BJP symbol. On the right, the music display organised by the BJP cadre during the #PMModiRoadShow in #Coimbatore, includes children, among whom some can be spotted wearing saffron cloth bands.@THChennai pic.twitter.com/mOnGAJD0Tx
— Avantika Krishna (@AvantikaKrish) March 18, 2024
ಪ್ರಧಾನಿಯ ರೋಡ್ ಶೋ ಸೋಮವಾರ ನಡೆದಾಗ ಹಲವಾರು ಶಾಲಾ ಮಕ್ಕಳು ಅದನ್ನು ವೀಕ್ಷಿಸಲು ಆಗಮಿಸಿದ್ದರು.ಇವರ ಪೈಕಿ 14 ವರ್ಷಕ್ಕಿಂತ ಕಿರಿಯ ಮಕ್ಕಳು ಹನುಮಂತನ ವೇಷ ಧರಿಸಿರುವುದು ಹಾಗೂ ಪಕ್ಷದ ಚಿಹ್ನೆ ಇರುವ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ರೋಡ್ ಶೋ ಹಾದು ಹೋಗುವ ವಿವಿಧೆಡೆ ನಿಂತಿರುವುದು ಕಾಣಿಸಿದೆ.
ಇದನ್ನು ಓದಿದ್ದೀರಾ? ಉ. ಪ್ರದೇಶ | ನಾಲ್ಕು ವರ್ಷದಿಂದ ಹಣ ನೀಡದ ಯೋಗಿ ಸರ್ಕಾರ: ಹೈಕೋರ್ಟ್ ಮೊರೆ ಹೋದ ದೇವಾಲಯಗಳು!
ಅಲ್ಲದೇ, ಬಿಜೆಪಿ ಕಾರ್ಯಕರ್ತರು ಸಿದ್ಧಪಡಿಸಿದ್ದ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿರುವ ವಿಡಿಯೋಗಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂಬ ಸ್ಪಷ್ಟ ನಿರ್ದೇಶನವನ್ನು ಚುನಾವಣಾ ಆಯೋಗ ಹೊರಡಿಸಿದೆ. ಮಕ್ಕಳನ್ನು ಬಳಸಿಕೊಂಡರೆ ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.
