ಕಾಂಗ್ರೆಸ್ ಮಂಗಳವಾರ ತನ್ನ ಲೋಕಸಭೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೇಶಕ್ಕೆ ಬದಲಾವಣೆಯು ಅತೀ ಅಗತ್ಯ ಎಂದಿದೆ. “ನಮ್ಮ ಪ್ರಣಾಳಿಕೆಯು ಜನರಿಗೆ ನ್ಯಾಯ ಒದಗಿಸುವ ಉದ್ದೇಶ” ಎಂದಿರುವ ಕಾಂಗ್ರೆಸ್ ಐದು ‘ನ್ಯಾಯ’ಗಳನ್ನು ಪರಿಚಯಿಸಿದೆ. ಜೊತೆಗೆ ’25 ಗ್ಯಾರಂಟಿ’ಗಳನ್ನು ಘೋಷಿಸಿದೆ.
ಉನ್ನತ ಮಟ್ಟದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು (ಸಿಡಬ್ಲ್ಯೂಸಿ) ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯ ಬಗ್ಗೆ ಸತತ ಮೂರು ಗಂಟೆಗಳ ಕಾಲ ಸಭೆಯನ್ನು ನಡೆಸಿದೆ. ಅದಾದ ಬಳಿಕ ತನ್ನ ಐದು ನ್ಯಾಯ ಗ್ಯಾರಂಟಿಗಳೊಂದಿಗೆ ಜನರನ್ನು ತಲುಪಲು ಸಜ್ಜಾಗಿದೆ.
ಈ ಐದು ನ್ಯಾಯ ಗ್ಯಾರಂಟಿಗಳು ಯುವಕರು, ಮಹಿಳೆಯರು, ಉದ್ಯೋಗಿಗಳು, ರೈತರು ಮತ್ತು ದಮನಿತರಿಗಾಗಿ ಜಾರಿ ಮಾಡಲಾಗಿದೆ. ಪ್ರತಿ ನ್ಯಾಯ ಗ್ಯಾರಂಟಿಯಡಿಯಲ್ಲೂ ಐದು ಗ್ಯಾರಂಟಿಗಳು ಇದೆ. ಅಂದರೆ ಒಟ್ಟಾಗಿ ಕಾಂಗ್ರೆಸ್ ಈಗ 25 ಗ್ಯಾರಂಟಿಗಳನ್ನು ಘೋಷಿಸಿದೆ.
देश के सभी अन्नदाताओं को मेरा प्रणाम!
कांग्रेस आपके लिए 5 ऐसी गारंटियां लेकर आई है जो आपकी सभी समस्याओं को जड़ से खत्म कर देंगी।
1. MSP को स्वामीनाथन आयोग के फार्मूले के तहत कानूनी दर्ज़ा देने की गारंटी।
2. किसानों के ऋण माफ़ करने और ऋण माफ़ी की राशि निर्धारित करने के लिए एक… pic.twitter.com/sfIUcdeW6t
— Rahul Gandhi (@RahulGandhi) March 14, 2024
ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ಭರವಸೆಯನ್ನು ಕೂಡಾ ಈ ಪ್ರಣಾಳಿಕೆಯಲ್ಲಿ ನೀಡಲಿದೆ. ಜೊತೆಗೆ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಕಾನೂನು ಜಾರಿ ಮಾಡುವ ಭರವಸೆ ನೀಡಲಿದೆ. “ಈ ಐದು ಗ್ಯಾರಂಟಿಗಳು ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ಗೇಮ್‌ಚೇಂಜರ್ ಆಗಲಿದೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಗ್ಯಾರಂಟಿ ಯೋಜನೆಗಳು ಮಹಿಳಾ ಮತದಾನದ ಪ್ರಮಾಣವನ್ನು ಹೆಚ್ಚಿಸಲಿವೆಯೇ?
“ಲೋಕಸಭೆ ಚುನಾವಣೆಗೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಜನರಿಗೆ ನಮ್ಮ ಗ್ಯಾರಂಟಿಗಳ ಬಗ್ಗೆ ತಿಳಿಸಲು ನಾವು ಬೃಹತ್ ಪ್ರಚಾರವನ್ನು ನಡೆಸಲಿದ್ದೇವೆ” ಎಂದು ಕೆಸಿ ವೇಣುಗೋಪಾಲ್ ತಿಳಿಸಿದರು. ಇನ್ನು ಬಿಜೆಪಿಯ ಗ್ಯಾರಂಟಿಗಳನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ಅದು “ಸುಳ್ಳುಗಳ ಗೊಂಚಲು” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಐದು ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿದೆ. ಭಾಗಿಧಾರಿ ನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ್ರಮಿಕ ನ್ಯಾಯ ಮತ್ತು ಯುವ ನ್ಯಾಯ ಎಂಬ ಐದು ಗ್ಯಾರಂಟಿ ಅಡಿಯಲ್ಲಿ ತಲಾ ಐದು ಗ್ಯಾರಂಟಿಗಳಂತೆ ಜೊತೆಯಾಗಿ 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದ್ದಾರೆ.