ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಶ್ರೀ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿ ಸಹಯೋಗದಲ್ಲಿ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಾ.24 ರಿಂದ 26ರವರೆಗೆ ಮೂರು ದಿವಸ ನಾಟಕ ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸುವಂತೆ ಭಾಲ್ಕಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಪ್ರತಿವರ್ಷ ಮೂರು ನಾಟಕಗಳು ಪ್ರದರ್ಶನವಾಗುತ್ತವೆ. ನಾಟಕದ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಜೊತೆಗೆ ಸಾಮಾಜಿಕ ವಿಷಯಗಳ ಅರಿವು ಮೂಡಿಸುವ ಕಾರ್ಯ ಶಿವಸಂಚಾರ ಕಲಾವಿದರು ಮಾಡುತ್ತಿದ್ದಾರೆ.ನಾಟಕದಂತಹ ಪ್ರಭಾವಿ ಮಾದ್ಯಮಗಳಿಂದ ತತ್ವಪ್ರಸಾರ ಮಾಡುವ ಹಾಗೂ ನಮ್ಮ ಅರಿವಿನ ಪ್ರಜ್ಞೆಯನ್ನು ವಿಸ್ತರಿಸುವ ಪ್ರಯತ್ನ ಅಭಿನಂದನೀಯವಾಗಿದೆ.
ಚನ್ನಬಸವಾಶ್ರಮದಲ್ಲಿ ಪ್ರತಿದಿನ ಸಂಜೆ 6ಕ್ಕೆ ನಾಟಕ ಪ್ರದರ್ಶನಗೊಳ್ಳಲಿವೆ. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ನಾಟಕ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಸಾಣೇಹಳ್ಳಿಯ ಶಿವಸಂಚಾರ ಅಭಿನಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಲ್ಲಿ ತೀವ್ರ ಬರ; ನೀರಿಗಾಗಿ ತೆಲಂಗಾಣಕ್ಕೆ ಹೊರಟ ತಾಂಡಾ ಜನರು
ಜಯಂತ ಕಾಯ್ಕಿಣಿ ರಚಿಸಿರುವ, ಹುಲಗೆಪ್ಪ ಕಟ್ಟಿಮನಿ ನಿರ್ದೇಶನದ ʼಜತೆಗಿರುವನು ಚಂದಿರʼ ಮತ್ತು ಕೆ.ಎನ್.ಸಾಳುಂಕೆ ರಚನೆಯ, ಮಾಲತೇಶ ಆರ್.ಬಡಿಗೇರ ವಿನ್ಯಾಸ ಮತ್ತು ನಿರ್ದೇಶನದ ʼತಾಳಿಯ ತಕರಾರುʼ ಹಾಗೂ ಡಾ.ನಟರಾಜ್ ಬೂದಾಳು ರಚನೆಯ, ಸಿ.ಬಸವಲಿಂಗಯ್ಯ ಅವರ ನಿರ್ದೇಶನದ ʼಕಲ್ಯಾಣದ ಬಾಗಿಲುʼ ನಾಟಕ ಪ್ರದರ್ಶನಗೊಳ್ಳಲಿವೆ.