ಚುನಾವಣಾ ಬಾಂಡ್ | ಮೇಘಾ, ರಿಲಯನ್ಸ್, ಬಿರ್ಲಾ- ಬಿಜೆಪಿಗೆ ಹೆಚ್ಚು ದೇಣಿಗೆ ಕೊಟ್ಟ ಕಂಪನಿಗಳ ಪಟ್ಟಿ ಇಲ್ಲಿದೆ

Date:

Advertisements
ಅಂತೂ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಆ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಚುನಾವಣಾ ಬಾಂಡ್‌ ಮೂಲಕ ಬಿಜೆಪಿಯೇ ಸಿಂಹಪಾಲು ದೇಣಿಗೆ ಪಡೆದಿದೆ. ಅಂದಹಾಗೆ, ಬಿಜೆಪಿಗೆ ದೇಣಿಗೆ ನೀಡಿದ ಕಂಪನಿಗಳ ಪಟ್ಟಿ ಇಲ್ಲಿದೆ.

ಬಿಜೆಪಿಗೆ ದೇಣಿಗೆ ಕೊಟ್ಟ ಕಂಪನಿಗಳಲ್ಲಿ ಮೇಘಾ ಗ್ರೂಪ್‌ ಆಫ್‌ ಕಂಪನೀಸ್‌ ಅಗ್ರಸ್ಥಾನದಲ್ಲಿದೆ. ಈ ಕಂಪನಿಯು 2019ರ ಏಪ್ರಿಲ್‌ನಿಂದ 2024ರ ಜನವರಿವರೆಗೆ ಬರೋಬ್ಬರಿ 664 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ನೀಡಿದೆ.

ಎರಡನೇ ಸ್ಥಾನದಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಜೊತೆ ಸಂಪರ್ಕ ಹೊಂದಿರುವ ಕಂಪನಿಗಳು ಮತ್ತು ವ್ಯಕ್ತಿಗಳಿದ್ದು. ಈ ಸಮೂಹವು 545 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಬಿಜೆಪಿಗೆ ನೀಡಿವೆ. ಬಿಜೆಪಿಗೆ ಸುಮಾರು 352 ಕೋಟಿ ರೂ. ದೇಣಿಗೆ ನೀಡಿರುವ ‘ಕೆವೆಂಟರ್ಸ್ ಗ್ರೂಪ್‌’ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ 285 ಕೋಟಿ ರೂ. ಮತ್ತು ಭಾರ್ತಿ ಏರ್‌ಟೆಲ್ ಗ್ರೂಪ್ 236.4 ಕೋಟಿ ರೂ. ನೀಡಿವೆ.

ಮೊದಲ ಬಾರಿಗೆ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಎಸ್‌ಬಿಐ ನೀಡಿದಾಗ 2019ರ ಏಪ್ರಿಲ್ ಮತ್ತು 2024ರ ಜನವರಿ ನಡುವೆ ಬಿಜೆಪಿ ಪಡೆದಿದ್ದ 6,060 ರೂ.ಗಳಲ್ಲಿ ಈ ಕಂಪನಿಗಳದ್ದೇ 2,082 ಕೋಟಿ ರೂ. ಸೇರಿದೆ. ಅಂದರೆ, ಬಿಜೆಪಿ ಪಡೆದ 6,000 ಕೋಟಿ ಮತ್ತದಲ್ಲಿ 3ನೇ 1 ಭಾಗಕ್ಕಿಂತ ಹೆಚ್ಚು ದೇಣಿಗೆಯನ್ನು ಈ 5 ಕಂಪನಿಗಳೇ ನೀಡಿವೆ.

Advertisements

ಒಟ್ಟಾರೆಯಾಗಿ, 2018ರ ಮಾರ್ಚ್‌ನಿಂದ ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ 8,252 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. 2018ರ ಮಾರ್ಚ್‌ 1ರಿಂದ 2019ರ ಏಪ್ರಿಲ್ 12ರವರೆಗೆ ನಗದೀಕರಿಸಲಾಗಿರುವ 4,000 ಕೋಟಿ ರೂ. ಮೌಲ್ಯದ ಬಾಂಡ್‌ಗಳ ಡೇಟಾ ಪೂರ್ಣವಾಗಿ ಲಭ್ಯವಾಗಿಲ್ಲ.

ಮೇಘಾ ಗ್ರೂಪ್‌
ಮೇಘಾ ಗ್ರೂಪ್ ಬಿಜೆಪಿಗೆ ನೀಡಿದ 664 ಕೋಟಿ ರೂ.ಗಳಲ್ಲಿ 584 ಕೋಟಿ ರೂಪಾಯಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ನಿಂದ ಬಂದಿದೆ. ಇದರ ಅಂಗಸಂಸ್ಥೆ ಗಾಜಿಯಾಬಾದ್ ಮೂಲದ ‘ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್ ಮಿಷನ್’ ಕಂಪನಿಯು 80 ಕೋಟಿ ರೂ.ಗಳನ್ನು ಬಿಜೆಪಿಗೆ ನೀಡಿದೆ.

ಒಟ್ಟಾರೆಯಾಗಿ, ಮೇಘಾ ಗ್ರೂಪ್‌ 1,186 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಅದರಲ್ಲಿ, ಶೇ.56ರಷ್ಟು ದೇಣಿಗೆಯನ್ನು ಬಿಜೆಪಿ ಪಡೆದಿದೆ.

ರಿಲಯನ್ಸ್-ಲಿಂಕ್ಡ್‌ ಗ್ರೂಪ್‌
ರಿಲಯನ್ಸ್ ಗ್ರೂಪ್‌ ಜೊತೆ ಸಂಪರ್ಕ ಹೊಂದಿರುವ ಸಂಸ್ಥೆಗಳು ಬಿಜೆಪಿಗೆ 545 ಕೋಟಿ ರೂ. ದೇಣಿಗೆ ನೀಡಿವೆ. ಅದರಲ್ಲಿ ಸುಮಾರು 69% ಬಾಂಡ್‌ಗಳನ್ನು ಮುಂಬೈ ಮೂಲದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್‌ ಖರೀಸಿದಿಸಿದೆ. ಈ ಕಂಪನಿಯು ಕೇಸರಿ ಪಕ್ಷಕ್ಕೆ 375 ಕೋಟಿ ರೂ. ದೇಣಿಗೆ ನೀಡಿದೆ.

ಉಳಿದ 170 ಕೋಟಿ ರೂ.ಗಳು ಅಂಬಾನಿ ಅವರ ವ್ಯಾಪಾರ ಸಹವರ್ತಿ ಸುರೇಂದ್ರ ಲೂನಿಯಾ, ಲಕ್ಷ್ಮಿದಾಸ್ ಮರ್ಚೆಂಟ್ ಮತ್ತು ಕೆ ರಾಮಚಂದ್ರನ್ ರಾಜಾ ಅವರಂತಹ ರಿಲಯನ್ಸ್ ಎಕ್ಸಿಕ್ಯೂಟಿವ್‌ಗಳಿಗೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ರಿಲಯನ್ಸ್‌ ಜೊತೆ ಸಂಪರ್ಕ ಹೊಂದಿರುವ ಸತ್ಯನಾರಾಯಣಮೂರ್ತಿ ವೀರ ವೆಂಕಟ ಕೊರ್ಲೆಪ್‌ ಅವರು ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಿಂದ ಬಂದಿದೆ.

ಈ ಸಂಸ್ಥೆಗಳು ಖರೀದಿಸಿದ ಒಟ್ಟು ಬಾಂಡ್‌ಗಳ ಪೈಕಿ, 94%ರಷ್ಟು ಹಣವನ್ನು ಬಿಜೆಪಿ ಸ್ವೀಕರಿಸಿದೆ.

ಕೆವೆಂಟರ್ಸ್ ಗ್ರೂಪ್‌
ಕೆವೆಂಟರ್ಸ್ ಗ್ರೂಪ್ ಬಿಜೆಪಿಗೆ 351.92 ಕೋಟಿ ರೂ. ದೇಣಿಗೆ ನೀಡಿದೆ. ಈ ಮೊತ್ತವನ್ನು ಗ್ರೂಪ್‌ನ ಭಾಗವಾಗಿರುವ ನಾಲ್ಕು ಕಂಪನಿಗಳು ನೀಡಿವೆ: ಕೆವೆಂಟರ್‍ಸ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್ (ಈಗ ಮ್ಯಾಗ್ನಿಫಿಸೆಂಟ್ ಫುಡ್‌ಪಾರ್ಕ್ಸ್ ಪ್ರಾಜೆಕ್ಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ), ಎಂಕೆಜೆ ಎಂಟರ್‌ಪ್ರೈಸಸ್, ಮದನ್‌ಲಾಲ್ ಲಿಮಿಟೆಡ್ ಹಾಗೂ ಸಾಸ್ಮಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್.

ಇವುಗಳಲ್ಲಿ ಮದನ್‌ಲಾಲ್ ಲಿಮಿಟೆಡ್ ಅತಿ ದೊಡ್ಡ ಮೊತ್ತವನ್ನು ನೀಡಿದೆ. ಇದು 175 ಕೋಟಿ ರೂ. ಹಣ ನೀಡಿದೆ.

2019ರ ಏಪ್ರಿಲ್ ಮತ್ತು 2024ರ ಜನವರಿ ನಡುವೆ ರಾಜಕೀಯ ಪಕ್ಷಗಳಿಗೆ ಈ ಗ್ರೂಪ್‌ ಒಟ್ಟು 616.92 ಕೋಟಿ ರೂ. ದೇಣಿಗೆ ನೀಡಿದೆ. ಅದರಲ್ಲಿ, ಬಿಜೆಪಿ 57% ಹಣವನ್ನು ಪಡೆದಿದೆ.

ಆದಿತ್ಯ ಬಿರ್ಲಾ ಗ್ರೂಪ್‌
ಆದಿತ್ಯ ಬಿರ್ಲಾ ಗ್ರೂಪ್‌ ಬಿಜೆಪಿ ಖಜಾನೆಗೆ 285 ಕೋಟಿ ರೂ. ಕೊಟ್ಟಿದೆ. ಈ ಗ್ರೂಪ್‌ನ ಐದು ಅಂಗಸಂಸ್ಥೆಗಳು ದೇಣಿಗೆ ನೀಡಿವೆ: ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್, ಎಬಿಎನ್ಎಲ್ ಇನ್ವೆಸ್ಟ್ಮೆಂಟ್ ಲಿಮಿಟೆಡ್, ಬಿರ್ಲಾ ಕಾರ್ಬನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉತ್ಕಲ್ ಅಲ್ಯುಮಿನಾ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್.

ಈ ಗುಂಪು ಒಟ್ಟು 555.8 ಕೋಟಿ ರೂ. ಮೊತ್ತದ ಬಾಂಡ್‌ಗಳನ್ನು ಖರೀದಿಸಿದೆ. ಅದರಲ್ಲಿ, 51% ಹಣವು ಬಿಜೆಪಿ ಪಾಲಿಗೆ ಹೋಗಿದೆ.

ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್‌ ಬಿಜೆಪಿಗೆ 50 ಕೋಟಿ ರೂ. ನೀಡಿದೆ. ಈ ಕಂಪನಿಗೆ ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಸಂಪರ್ಕವಿದೆ ಎಂಬುದು ಗಮನಾರ್ಹ.

ಇಂಡಿಯಾ ಟುಡೇ ಗ್ರೂಪ್‌ನ ಪ್ರಮುಖ ಶೇರುದಾರ ಕಂಪನಿ ಲಿವಿಂಗ್ ಮೀಡಿಯಾ ಲಿಮಿಟೆಡ್ ಆಗಿದ್ದು, ಇದು 51.61% ಶೇರು ಹೊಂದಿದೆ. ಲಿವಿಂಗ್ ಮೀಡಿಯಾವು ಐಜಿಎಚ್‌ ಹೋಲ್ಡಿಂಗ್‌ ಗ್ರೂಪ್‌ನ ಭಾಗವಾಗಿದೆ. ಈ ಗ್ರೂಪ್‌ ಕೂಡ ಇಂಡಿಯಾ ಟುಡೇಯಲ್ಲಿ 41.5% ಶೇರು ಹೊಂದಿದೆ. ಈ ಐಜಿಎಚ್‌ ಸಂಸ್ಥೆಯು ಎಸ್ಸೆಲ್ ಮೈನಿಂಗ್ ಮತ್ತು ಇಂಡಸ್ಟ್ರೀಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

ಭಾರ್ತಿ ಏರ್ಟೆಲ್ ಗ್ರೂಪ್
ಸುನಿಲ್ ಭಾರ್ತಿ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ಗ್ರೂಪ್‌ ಬಿಜೆಪಿಗೆ 236.4 ಕೋಟಿ ರೂ. ದೇಣಿಗೆ ನೀಡಿದೆ. ಈ ಗ್ರೂಪ್‌ ನಾಲ್ಕು ಕಂಪನಿಗಳನ್ನು ಹೊಂದಿದೆ: ಭಾರ್ತಿ ಏರ್‌ಟೆಲ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಕರೆಂಟ್ ಎಸಿ ಜಿಸಿಒ, ಭಾರ್ತಿ ಇನ್‌ಫ್ರಾಟೆಲ್ ಮತ್ತು ಭಾರ್ತಿ ಟೆಲಿಮೀಡಿಯಾ.

ನಾಲ್ಕು ಕಂಪನಿಗಳ ಪೈಕಿ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ 183 ಕೋಟಿ ರೂ. ನೀಡಿದ್ದು, ಈ ಗ್ರೂಪ್‌ನಲ್ಲಿ ಹೆಚ್ಚು ಹಣ ನೀಡಿದ ಕಂಪನಿಯಾಗಿದೆ.

ಭಾರ್ತಿ ಏರ್‌ಟೆಲ್ ಗ್ರೂಪ್‌ ಒಟ್ಟು 247 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದು, ಅವುಗಳಲ್ಲಿ 96% ಬಾಂಡ್‌ಗಳನ್ನು ಬಿಜೆಪಿ ಪಡೆದುಕೊಂಡಿದೆ.

ವೇದಾಂತ
ಲೋಹ ಮತ್ತು ಗಣಿಗಾರಿಕೆ ಕಂಪನಿಯಾದ ವೇದಾಂತ ಬಿಜೆಪಿಗೆ 230.15 ರೂ. ದೇಣಿಗೆ ನೀಡಿದೆ ಈ ಕಂಪನಿಯು ಒಟ್ಟು 400.65 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದು, ಅದರಲ್ಲಿ ಸುಮಾರು 57% ದೇಣಿಗೆಯನ್ನು ಬಿಜೆಪಿಗೆ ಕೊಟ್ಟಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X