ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆಯೋಪಿಸಿದ್ದ ;ರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿಯೊಬ್ಬರು, ಇದೀಗ ದಯಾಮರಣ ಕೋರಿ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯದ ಸಿಬ್ಬಂದಿ ಶ್ರೀಶೈಲ ದೊಡಮನಿ ಎಂಬುವವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಿಸಿದ್ದಾರೆ.
ಕಳೆದ ಪೆಬ್ರವರಿ 14ರಂದು ಸಂತ್ರಸ್ತೆ ಮಹಿಳೆ ಶ್ರೀಶೈಲ ದೊಡಮನಿ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿವಿಯ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದರು. ದೂರು ನೀಡಿ ಇಷ್ಟು ದಿನ ಕಳೆದರೂ ಸಮಿತಿ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಪತಿ ಇದೇ ವಿವಿ ಉದ್ಯಾನವನದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರು 2015ರಲ್ಲಿ ವಿವಿ ಆವರಣದ ತಡೆಗೋಡೆಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು. ಪತಿಯ ಮರಣದ ನಂತರ ಮಹಿಳೆಗೆ ಉದ್ಯಾನವನ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು.
ಈ ಸುದ್ದಿ ಓದಿದ್ದೀರಾ? ಹೋಳಿ ‘ರೈನ್ ಡ್ಯಾನ್ಸ್’ ಪ್ರಕಟಿಸಿದ್ದ ಹೊಟೇಲ್‌ಗಳಿಗೆ ನೊಟೀಸ್; ಡ್ರೈ ಹೋಳಿ ಆಚರಿಸಲು ಜಲಮಂಡಳಿ ಸೂಚನೆ
ಅಲ್ಲದೇ, ಸಂತ್ರಸ್ತ ಮಹಿಳೆ, “ಪತಿ ಮರಣ ನಂತರ ಪಿಎಫ್ ಹಣ ನೀಡಿಲ್ಲ. ಎಸ್‌ಸಿ/ಎಸ್‌ಟಿ ನೌಕರರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ ಸತಾಯಿಸುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ವಿವಿಯಲ್ಲಿ ಒಂದೆಡೆ ಲೈಂಗಿಕ ಕಿರುಕುಳ ನೀಡುತ್ತಿದ್ದರೇ, ಇನ್ನೊಂದೆಡೆ ಪತಿಯ ಪಿಎಫ್ ಹಣ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಬೇಸರಗೊಂಡು ದಯಾಮರಣಕ್ಕಾಗಿ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ನ್ಯಾಯಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.