ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಸಂಬಳವಿಲ್ಲದ ಮನೆಕೆಲಸ ಮಾಡುತ್ತಾರೆ: ಅಧ್ಯಯನ ವರದಿ

Date:

Advertisements

ಭಾರತೀಯ ಮಹಿಳೆಯರು ಪುರುಷರಿಗಿಂತ ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಜರ್ನಲ್ ಆಫ್ ಫ್ಯಾಮಿಲಿ ಅಂಡ್‌ ಎಕನಾಮಿಕ್ ಇಶ್ಯೂಸ್‌ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.

ಆದಾಗ್ಯೂ, ಮುಂಬೈನಲ್ಲಿರುವ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ನಡೆಸಿದ ಸಂಶೋಧನೆಯ ಪ್ರಕಾರ, ವಿದ್ಯಾವಂತ ಮಹಿಳೆಯರು ತಮ್ಮ ಕೆಲಸದ ಹೊರೆ ನಿಯಂತ್ರಿಸುವಲ್ಲಿ ಕೊಂಚ ಯಶಸ್ವಿಯಾಗಿದ್ದಾರೆ.

ಭಾರತದಲ್ಲಿ ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ವಿವಾಹಿತ ಮಹಿಳೆಯರು ಹೆಚ್ಚಾಗಿ, ಬಹುತೇಕ ದುಪ್ಪಟ್ಟು ವೇತನವಿಲ್ಲದ ಕೆಲಸದ ಹೊರೆ ಹೊಂದಿದ್ದಾರೆ. ಅದರಲ್ಲೂ, ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಹೆಚ್ಚಿನ ಸಮಯವನ್ನು ವೇತನವಿಲ್ಲದ ಮನೆಕೆಲಸಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisements

“ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸಮಯವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರೆ. ಆದರೆ, ಭಾರತದಲ್ಲಿನ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಸಂಬಂಳವಿಲ್ಲದ ಕೆಲಸಕ್ಕಾಗಿ ಕಳೆಯುತ್ತಾರೆ” ಎಂದು ಅಧ್ಯಯನ ವರದಿ ವಿವರಿಸಿದೆ.

ಶಾಲಾ-ವಯಸ್ಸಿನ ಮಕ್ಕಳನ್ನು ಸಲಹುವುದು ವೇತನವಿಲ್ಲದ ಮನೆಕೆಲಸದಲ್ಲಿ ಮಹಿಳೆಯರ ಹೆಚ್ಚು ಸಮಯವನ್ನು ಕಿತ್ತುಕೊಂಡಿದೆ. ಅಲ್ಲದೆ, ವಿಭಕ್ತ ಕುಟುಂಬದಲ್ಲಿ ವಾಸಿಸುವ ಮಹಿಳೆಯರು, ಅವಿಭಕ್ತ ಕುಟುಂಬಗಳ ಮಹಿಳೆಯರಿಗಿಂತ ವೇತನವಿಲ್ಲದ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ವರದಿ ಗಮನಸೆಳೆದಿದೆ.

ಸ್ತ್ರೀ ಪ್ರಧಾನ ಕುಟುಂಬಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಕಡಿಮೆಯಿದ್ದರೆ, ಪುರುಷ ಪ್ರಧಾನ ಕುಟುಂಬಗಳಲ್ಲಿ ಸಂಬಳರಹಿತ ಕೆಲಸ ಹೆಚ್ಚಾಗಿದೆ.

ವೇತನರಹಿತ ಕಾರ್ಮಿಕರು – ಪ್ರಮುಖ ಅಂಶಗಳು

  • ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ 3 ಪಟ್ಟು ಹೆಚ್ಚು ಸಮಯವನ್ನು ಮನೆಕೆಲಸದಲ್ಲಿ ವ್ಯಯಿಸುತ್ತಿದ್ದಾರೆ. ಭಾರತದಲ್ಲಿ, ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಇಂತಹ ಕೆಲಸಗಳಲ್ಲಿ ಕಳೆಯುತ್ತಿದ್ದಾರೆ.
  • ವೇತನವಿಲ್ಲದ ಕೆಲಸಗಳನ್ನು ಮಾರುಕಟ್ಟೆ ಮೌಲ್ಯಗಳ ಆಧಾರದ ಮೇಲೆ ಅಳೆದರೆ, ಆರ್ಥಿಕತೆಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ. ಕೆಲವು ದೇಶಗಳಲ್ಲಿ ಮಹಿಳೆಯರ ವೇತನರಹಿತ ಕೆಲಸವು ಆ ದೇಶದ ಜಿಡಿಪಿಗೆ 10% ಕೊಡುಗೆ ನೀಡಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜಿಡಿಪಿಗೆ 60% ಕೊಡುಗೆ ನೀಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
  • ಭಾರತೀಯ ಅವಿವಾಹಿತ ಮಹಿಳೆಯರಿಗಿಂತ ವಿವಾಹಿತ ಮಹಿಳೆಯರು ದುಪ್ಪಟ್ಟು ಸಂಬಳವಿಲ್ಲದ ಮನೆಕೆಲಸ ಮಾಡುತ್ತಾರೆ.
  • ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಸಂಬಳವಿಲ್ಲದ ಮನೆಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
  • ಶಿಕ್ಷಣವಿಲ್ಲದ ನಗರ ಪ್ರದೇಶದ ಮಹಿಳೆಯರು, ಶಿಕ್ಷಣವಿಲ್ಲದ ಗ್ರಾಮೀಣ ಪ್ರದೇಶದ ಮಹಿಳೆಯರಿಗಿಂತ 86.7% ಹೆಚ್ಚು ಸಂಬಳವಿಲ್ಲದ ಮನೆಕೆಲಸದಲ್ಲಿ ಸಮಯವನ್ನು ಕಳೆಯುತ್ತಾರೆ.

ಭಾರತದಲ್ಲಿ ವೇತನವಿಲ್ಲದೆ ದುಡಿಯುವ ಮಹಿಳೆಯರಿಗೆ ಪರಿಹಾರ/ಪರ್ಯಾಯವಾಗಿ ಸರ್ಕಾರಗಳು ಆರ್ಥಿಕ ಸಹಕಾರ ನೀಡುವ ಕಾರ್ಯಕ್ರಮಗಳು ಇತ್ತೀಚೆಗೆ ಜಾರಿಗೆ ಬರುತ್ತಿವೆ. ಕರ್ನಾಟಕ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಹಿಳೆಯರ ಶ್ರಮವನ್ನು ಗೌರವಿಸುವ ಯೋಜನೆಗಳು ಜಾರಿಯಾಗುತ್ತಿವೆ. ಕರ್ನಾಟಕ ಸರ್ಕಾರವು ಸಂಬಳವಿಲ್ಲದೆ ದುಡಿಯುವ ಗೃಹಿಣಿಯರಿಗೆ ಸಹಾಯಧನ ನೀಡುತ್ತಿದೆ. ಇದು ಮಹಿಳೆಯರು ಸ್ವಾವಲಂಭಿಗಳಾಗಲು ನೆರವಾಗುತ್ತಿದೆ. ಮಾತ್ರವಲ್ಲದೆ, ಕ್ರಾಂತಿಕಾರಕ ಬದಲಾವಣೆಗೂ ನಾಂದಿ ಹಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X