ದಾವಣಗೆರೆ | ಸ್ವಾತಂತ್ರ್ಯವೀರ ಭಗತ್ ಸಿಂಗ್ ಹುತಾತ್ಮ ದಿನಾಚರಣೆ

Date:

Advertisements

ಸ್ವಾತಂತ್ರ್ಯ ವೀರ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ 90ನೇ ವರ್ಷದ ಹುತಾತ್ಮ ದಿನವನ್ನು ಸಂಕಲ್ಪ ದಿನವಾಗಿ ಆಚರಿಸೋಣ ಎಂದು ಎಐಎಂಎಸ್ಎಸ್‌ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಗಳ ಮುಖಂಡರು ಕರೆ ನೀಡಿದರು.

ದಾವಣಗೆರೆಯ ರೈಲು ನಿಲ್ದಾಣ ಮುಂಬಾಗದಲ್ಲಿರುವ ಸ್ವಾತಂತ್ರ್ಯವೀರ ಭಗತ್ ಸಿಂಗ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖಂಡರು, “ಮಾರ್ಚ್ 23 ಒಂದು ಚಾರಿತ್ರಿಕ ದಿನವಾಗಿದೆ. ಕ್ರಾಂತಿಯ ವೀರ ಹುತಾತ್ಮ ಭಗತ್ ಸಿಂಗ್ ಹಾಗೂ ಆತನ ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ಹುತಾತ್ಮರಾಗಿ 90 ವರ್ಷಗಳು ಸಂದಿರುವ ದಿನ ಈ ದಿನವನ್ನು ಇಡೀ ದೇಶವೇ ಅಮರ ವೀರರನ್ನು ನೆನೆಯುವ ಸಂದರ್ಭವಾಗಿದೆ. ಭಗತ್ ಸಿಂಗ್ ನೇಣುಗಂಬಕ್ಕೆ ಏರಿದಾಗ 23 ವರ್ಷದ ಯುವಕ ಸಣ್ಣ ವಯಸಿನಲ್ಲಿಯೇ ದೇಶವ್ಯಾಪಿಯಾಗಿ ಕ್ರಾಂತಿಯ ಜ್ವಾಲೆಯನ್ನು ಬೆಳಗಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರ ತಿರುವು ನೀಡಿದ, ಚರಿತ್ರೆಯ ಪುಟದಲ್ಲಿ ಎಂದೂ ಅಳಿಸಿಹೋಗದಂತಹ ದಿನವಾಗಿದೆ” ಎಂದು ಸ್ಮರಿಸಿದರು.

“ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಭಗತ್ ಸಿಂಗ್ ಹೀಗೆ ಘೋಷಿಸಿದ್ದರು – ಯುದ್ಧ ಆರಂಭವಾಗಿದೆ. ಬಲಾಢ್ಯರು ಭಾರತದ ಜನತೆಯ ಮತ್ತು ಕಾರ್ಮಿಕರ ಎಲ್ಲ ಆದಾಯ ಸಾಧನಗಳನ್ನೂ ತಮ್ಮ ಏಕಸ್ವಾಮ್ಯಕ್ಕೆ ಒಳಪಡಿಸಿಕೊಂಡಿರುವವರೆಗೂ ಈ ಯುದ್ಧ ನಿಲ್ಲುವುದಿಲ್ಲ. ಈ ಬಲಾಢ್ಯರು ಬ್ರಿಟಿಷ್ ಬಂಡವಾಳಶಾಹಿಗಳಾಗಿರಲಿ ಅಥವಾ ಸ್ವತಃ ಭಾರತೀಯರಾಗಿರಲಿ, ಅವರು ಒಟ್ಟುಗೂಡಿಯೇ ಲೂಟಿ ಮಾಡುತ್ತಿದ್ದಾರೆ. ಬಡಜನರ ರಕ್ತವನ್ನು ಭಾರತೀಯ ಬಂಡವಾಳಿಗರೇ ಹೀರುತ್ತಿದ್ದರೂ ಸರಿ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನು ಇಲ್ಲ – ಎಂಬ ಅವರ ಮಾತು ಇಂದಿಗೆ ಅಕ್ಷರಶಃ ಸಂಪೂರ್ಣ ಸತ್ಯವಾಗಿದೆ. ಹೋರಾಟವೆಂಬ ಯುದ್ಧ ಇಂದಿಗೂ ಮುಂದುವರಿಯುತ್ತಿದೆ” ಎಂದು ತಿಳಿಸಿದರು.

Advertisements

“ಸ್ವಾತಂತ್ರ್ಯಾನಂತರ ಬಲಾಢ್ಯರು ಮತ್ತು ಬಂಡವಾಳಿಗರು ಭಾರತದ ಜನತೆ ಮತ್ತು ರೈತ, ಕಾರ್ಮಿಕರ ಎಲ್ಲ ಆದಾಯದ ಸಾಧನವನ್ನು ತಮ್ಮ ಏಕಸ್ವಾಮ್ಯದಡಿ ಹಿಡಿದಿಟ್ಟುಕೊಂಡಿದ್ದಾರೆ. ಅದರಿಂದಾಗಿ ದುಡಿವ ಜನತೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಈಗ ದೇಶದ ಜನರ ಮುಂದಿರುವ ದಾರಿ ತಮ್ಮ ಸಂಘಟಿತ ಶಕ್ತಿಯ ಆಧಾರದಲ್ಲಿ ತಮ್ಮ ಸಾಮೂಹಿಕ ಅಧಿಕಾರವನ್ನು ಸ್ಥಾಪಿಸಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ. ನಮ್ಮ ವಿಮೋಚನೆಯ ಹಾದಿಯಲ್ಲಿ ಮುನ್ನಡೆಯಬೇಕಿದೆ” ಎಂದು ಕರೆ ನೀಡಿದರು.

“ಭಗತ್ ಸಿಂಗ್ ಹೇಳಿದಂತೆ ಅವರ ಚಿಂತನೆಗಳು ನಮಗೆ ಸ್ಫೂರ್ತಿಯಾಗಬೇಕಿದೆ. ಇಂದಿಗೂ ಸಾಕಾರವಾಗದೇ ಉಳಿದಿರುವ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಆಶಯಗಳ ಈಡೇರಿಕೆಗೆ ಶ್ರಮಿಸುತ್ತಿರುವ, ಶ್ರಮಿಸಬೇಕಾಗಿರುವ ದೇಶದ ಯುವಜನತೆ ಆ ವೀರರ ತ್ಯಾಗ, ದೇಶಪ್ರೇಮ, ಕ್ರಾಂತಿಕಾರಿ ಬದ್ಧತೆ ಸಮಾಜವಾದಿ ಆಶಯಗಳಿಂದ ಇನ್ನಷ್ಟು ಸ್ಫೂರ್ತಿ ಪಡೆಯಲು ಭಗತ್ ಸಿಂಗ್ ಮತ್ತವರ ಸಂಗಾತಿಗಳ ನೆನೆಯಬೇಕಿದೆ. ನಮ್ಮ ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಹುತಾತ್ಮರ ಆಶಯಗಳ ಪರವಾದ ಸರ್ಕಾರವನ್ನು ಚುನಾಯಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸರ್ಕಾರಿ ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಎಐಡಿಎಸ್ಒ ಆಗ್ರಹ

ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯರುಗಳಾದ ಸತೀಶ್‌ ಅರವಿಂದ್, ಖಲೀಲ್ ಬಿ, ಆದೀಲ್‌ಖಾನ್, ಪವಿತ್ರ, ಡಿಕ್ಕಿ ರಮೇಶ್, ಗುರುರಾಜ್, ವನೀತ್, ಬೆಳವನೂರು ಮನು ಮತ್ತು ಸಾರ್ವಜನಿಕರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X