ಚುನಾವಣಾ ಬಾಂಡ್‌ | ಸಾಮಾನ್ಯ ಜನರಿಗೆ ಆಗುವ ನಷ್ಟವೆಷ್ಟು, ಹಾನಿ ಏನು? ಇಲ್ಲಿದೆ ಓದಿ

Date:

Advertisements
ಚುನಾವಣಾ ಬಾಂಡ್‌  ಎನ್ನುವುದು ಭಾರತ ಕಂಡ ಬೃಹತ್ ಹಗರಣ. ಈ ಬಾಂಡ್ ದೇಣಿಗೆಯಿಂದಾಗಿ ಸಾಮಾನ್ಯ ಜನರಿಗೆ ಏನೆಲ್ಲ ನಷ್ಟವಾಗುತ್ತದೆ, ಎಷ್ಟೆಲ್ಲ ಹಾನಿಯಾಗುತ್ತದೆ ಎಂಬ ವಿವರವಾದ ಮಾಹಿತಿ ಇಲ್ಲಿದೆ ಓದಿ…

ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳು ಭಾರೀ ದೇಣಿಗೆಯನ್ನು ಪಡೆದುಕೊಂಡಿವೆ. ಅದರಿಂದ ನಮಗೆ ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ ಅಲ್ವ ಎಂದು ಹೇಳುವ ಅದೆಷ್ಟೋ ಜನರು ಇದ್ದಾರೆ. ನಿಮ್ಮಲ್ಲೂ ಆ ಭಾವನೆ ಇದ್ದರೆ ಮೊದಲು ಈ ಸುದ್ದಿಯನ್ನು ಓದಿ.

ಚುನಾವಣಾ ಬಾಂಡ್ ಮೂಲಕ ನಿಮ್ಮೆಲ್ಲರ ಹಣವನ್ನ ಕಳ್ಳತನ ಮಾಡಲಾಗಿದೆ. ದೇಶದ ಹಣವನ್ನ ಲೂಟಿ ಮಾಡಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣ ಇದಾಗಿದೆ. ಸಣ್ಣ ವಿಷಯವನ್ನ ವೈಭವೀಕರಿಸಿ ಹೇಳುತ್ತಿದ್ದೇನೆ ಎಂದು ನಿಮಗನಿಸಬಹುದು. ಆದರೆ ಸಂಪೂರ್ಣ ಮಾಹಿತಿ ತಿಳಿದರೆ ಇದು ಎಷ್ಟು ದೊಡ್ಡ ಹಗರಣ ಎಂಬುವುದು ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ.

ಅಷ್ಟಕ್ಕೂ ಈ ಚುನಾವಣಾ ಬಾಂಡ್ ಹಗರಣ ಕೇವಲ ಒಂದು ಹಗರಣವಲ್ಲ. ಬದಲಾಗಿ ಇದು ಹಗರಣಗಳ ಭಂಡಾರ! ಈ ಒಂದು ಹಗರಣದೊಳಗೆ ಎಷ್ಟು ಹಗರಣಗಳು ಅಡಗಿದೆ ಎಂದರೆ ನೀವು ಲೆಕ್ಕ ಹಾಕಲು ಸಾಧ್ಯವಾಗದು. ಒಟ್ಟಿನಲ್ಲಿ ಇದು ದೇಶದಲ್ಲಿ ನಡೆದಿರುವ ಅತೀ ದೊಡ್ಡ ದಂಧೆ ಎಂದರೆ ತಪ್ಪಾಗಲಾರದು. “ನೀನು ನನಗೆ ಚಂದಾ ನೀಡು ನಾನು ನಿನಗೆ ದಂಧಾ ನೀಡುತ್ತೇನೆ. ನೀನು ಚಂದಾ ನೀಡದಿದ್ದರೆ ಇಡಿ, ಐಟಿ, ಸಿಬಿಐ ದಾಳಿ ಮಾಡಿಸುತ್ತೇನೆ” ಎಂಬುವುದು ಈ ಚುನಾವಣಾ ಬಾಂಡ್ ಹಗರಣದ ಸರಳ ವಿವರಣೆ.

Advertisements

ಹಗರಣದಲ್ಲಿ ಮೂರು ವಿಭಾಗ ಭಾಗಿ

ಚುನಾವಣಾ ಬಾಂಡ್‌ನ ಒಂದು ಹಗರಣದ ಒಳಗಿರುವ ಹಲವು ಹಗರಣಗಳಲ್ಲಿ ಮೂರು ವಿಭಾಗ ಭಾಗಿಯಾಗಿದೆ. ಮೊದಲನೆಯದಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಥವಾ ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಯಾ ರಾಜಕೀಯ ಪಕ್ಷಗಳು. ಎರಡನೆಯದಾಗಿ ಚಂದಾ ನೀಡುವ ದೊಡ್ಡ ಸಂಸ್ಥೆಗಳು. ಮೂರನೆಯದಾಗಿ ನೀವು ಅಂದರೆ ಸಾರ್ವಜನಿಕರು. ಕಂಪನಿಗಳು ಜನರ ಹಣದಿಂದ ಬೊಕ್ಕಸ ತುಂಬಿಸಿಕೊಂಡು, ಸ್ವಲ್ಪ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡುತ್ತವೆ. ಹಾಗಿದ್ದಾಗ ಇದು ಹಗರಣವಲ್ಲದೆ ಬೇರೇನು?

ಇದನ್ನು ಓದಿದ್ದೀರಾ?  ಬಾಂಡ್ ದಂಧೆ | ಬಿಜೆಪಿಗೆ 12,930 ಕೋಟಿ ರೂ ದೇಣಿಗೆ, ಕೇಸರಿ ಪಕ್ಷದ ಚಂದಾ ಅಭಿಯಾನಗಳ ಪಟ್ಟಿ!

ಈಗ ಈ ಹಗರಣದಲ್ಲಿ ನಾವು ಹೇಗೆ ಭಾಗಿ, ನಮ್ಮ ಹಣವನ್ನು ಈ ಕಂಪನಿಗಳು ಹೇಗೆ ಪಡೆಯುತ್ತವೆ ಎಂಬ ಪ್ರಶ್ನೆ ನಿಮ್ಮಲ್ಲಿ ಬರುತ್ತದೆ. ಅದಕ್ಕೆ ನಾವು ಉದಾಹರಣೆಗಳನ್ನು ನೀಡುತ್ತೇವೆ. ಮೊದಲನೆಯದ್ದು ತೆರಿಗೆ ವಂಚನೆ. ಅಂದರೆ ಕಾರ್ಪೊರೇಟ್ ಸಂಸ್ಥೆಗಳು ತೆರಿಗೆ ಪಾವತಿ ಮಾಡದೆ ಇರುವುದು. ಇದರಿಂದಾಗಿ ಸರ್ಕಾರಿ ಉದ್ಯೋಗಿಗಳಿಗೆ ವೇತನ ಸರಿಯಾದ ಸಮಯಕ್ಕೆ ಸಿಗುವುದಿಲ್ಲ, ಸರ್ಕಾರಿ ಉದ್ಯೋಗ ಭರ್ತಿ ಮಾಡಲಾಗುವುದಿಲ್ಲ, ಶಾಲೆ ಆಸ್ಪತ್ರೆಗಳ ಅಭಿವೃದ್ಧಿ ಆಗುವುದಿಲ್ಲ. ಯಾಕೆಂದರೆ ಈ ದೊಡ್ಡ ಸಂಸ್ಥೆಗಳು ತೆರಿಗೆ ವಂಚನೆ ಮಾಡುವುದರಿಂದ ಜನರಿಗಾಗಿ ಬಳಸಲು ಮೀಸಲಿಡುವ ಹಣದಲ್ಲಿ ಕೊರತೆ ಉಂಟಾಗುತ್ತದೆ. ಆದರೆ ಹೀಗೆ ತೆರಿಗೆ ವಂಚನೆ ಮಾಡಿದಾಗ ಐಟಿ, ಸಿಬಿಐ, ಇಡಿ ದಾಳಿ ನಡೆಸಲಾಗುತ್ತದೆ. ಆದರೆ ನಾವೀಗ “ನಮ್ಮ ಪಕ್ಷಕ್ಕೆ ದೇಣಿಗೆ ನೀಡಿ, ನಿಮ್ಮ ಮೇಲೆ ನಾವು ಐಟಿ ದಾಳಿ ನಡೆಸುವುದಿಲ್ಲ” ಎಂಬುವುದನ್ನು ನಾವು ಪ್ರಶ್ನಿಸಬೇಕಾಗುತ್ತದೆ.

ಸಾವು ನೋವಿಗಿಲ್ಲ ಕೊನೆ!

ಇನ್ನು ಬಿಜೆಪಿ ಅಥವಾ ಬೇರೆ ಪಕ್ಷಗಳಿಗೆ ದೇಣಿಗೆ ನೀಡಿ ಕಂಪನಿಗಳು ಯೋಜನೆಗಳ ಗುತ್ತಿಗೆಯನ್ನು ಪಡೆದರೆ ನಮಗೆ ಏನು ತೊಂದರೆ ಇದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಅದರಿಂದಾಗಿ ಮಾಡಲಾದ ಕಳಪೆ ಕಾಮಗಾರಿ ಬಗ್ಗೆ ನೀವು ತಿಳಿಯಲೇಬೇಕು.

ಒಂದು ಸಂಸ್ಥೆಗೆ ಯಾವುದೇ ಕಾಮಗಾರಿ ಗುತ್ತಿಗೆಯನ್ನು ನೀಡಬೇಕಾದರೂ ಆ ಸಂಸ್ಥೆ ಅದನ್ನು ನಿರ್ವಹಿಸಲು ಅರ್ಹವೇ? ಅದಕ್ಕೆ ಬೇಕಾದ ವ್ಯವಸ್ಥೆ ಸಂಸ್ಥೆಯಲ್ಲಿದೆಯೇ? ಸಂಸ್ಥೆಯ ಹಣಕಾಸು ಸ್ಥಿತಿ ಹೇಗಿದೆ? ಎಂದು ನೋಡಬೇಕಾಗುತ್ತದೆ. ಆದರೆ ಬರೀ ದೇಣಿಗೆ ಪಡೆಯುವ ನಿಟ್ಟಿನಲ್ಲಿ ಜನರಿಗೆ ಆಗುವ ತೊಂದರೆಗಳ ಬಗ್ಗೆ ಆಲೋಚಿಸದೆಯೇ ಗುತ್ತಿಗೆ ನೀಡಿದರೆ ಏನಾಗುತ್ತದೆ ಎಂಬುವುದಕ್ಕೆ ನಾವಿಲ್ಲಿ ಹೇಳುವ ಘಟನೆಗಳೇ ಉದಾಹರಣೆ.

ಇದನ್ನು ಓದಿದ್ದೀರಾ?  ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ – ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು

ಉತ್ತರಾಖಂಡದಲ್ಲಿ ಸುರಂಗ ಕುಸಿತದ ಸುದ್ದಿ ನೀವು ಕೇಳಿರಬಹುದು. ಸುರಂಗ ಕುಸಿತದಿಂದಾಗಿ 40 ಮಂದಿ ಕಾರ್ಮಿಕರನ್ನು 17 ದಿನಗಳ ಬಳಿಕ ರಕ್ಷಣೆ ಮಾಡಲಾಗಿದೆ. ಈ ಸುರಂಗದ ಗುತ್ತಿಗೆಯನ್ನು ಪಡೆದಿರುವುದು ನವಯುಗ ಇಂಜಿನಿಯರಿಂಗ್ ಕಂಪನಿ. ಈ ಗುತ್ತಿಗೆ ಪಡೆದಿರುವ ಕಂಪನಿ 55 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಅನ್ನು ಖರೀದಿ ಮಾಡಿತ್ತು.

2021ರ ಡಿಸೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತವಾಗಿತ್ತು. ಈ ಮೇಲ್ಸೆತುವೆಯನ್ನು ರಂಜಿತ್ ಬಿಲ್ಡ್‌ಕಾನ್‌ ಎಂಬ ಕಂಪನಿ ನಿರ್ಮಿಸುತ್ತಿತ್ತು. ಈ ಕಂಪನಿ ನಡೆಸುತ್ತಿರುವ ಕಾಮಗಾರಿಯು ಕುಸಿತವಾಗಿರುವ ಮೂರನೇ ಪ್ರಕರಣ ಇದಾಗಿದೆ. ಈ ಕಂಪನಿ ಕಳಪೆ ಗುಣಮಟ್ಟದಲ್ಲಿ ಕಾಮಗಾರಿ ನಡೆಸುತ್ತದೆ ಎಂಬುವುದು ಸಾಬೀತಾಗಿದ್ದರೂ ಕೂಡಾ ಇದಕ್ಕೆ ಗುಜರಾತ್‌ನಲ್ಲಿ ಹಲವಾರು ಯೋಜನೆಗಳನ್ನು ನೀಡಲಾಗಿದೆ. ಈ ನಡುವೆಯೇ ಬಿಜೆಪಿ ಸರ್ಕಾರದಿಂದ ಯೋಜನೆಗಳ ಗುತ್ತಿಗೆ ಪಡೆದಿರುವ ಈ ರಂಜಿತ್ ಬಿಲ್ಡ್‌ಕಾನ್‌ ಕಂಪನಿಯು ಜನವರಿ 2023ರಿಂದ ಜುಲೈ 2023ರವರೆಗೆ ಒಟ್ಟು ಒಂಬತ್ತು ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಇನ್ನು ಪುಣೆ ಮೂಲದ ಸಂಸ್ಥೆ ಬಿಜೆ ಶಿರ್ಖೆ ಒಟ್ಟಾಗಿ 118 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದೆ. ಒಂದು ವರ್ಷಕ್ಕೂ ಮುನ್ನ ಈ ಸಂಸ್ಥೆಯ ವಿರುದ್ಧವಾಗಿ “ಅಜಾಗರೂಕತೆ ಕಾರಣದಿಂದ ಸಾವು” ಸಂಭವಿಸಿದ ಪ್ರಕರಣ ದಾಖಲಾಗಿದೆ. ಈ ಕಂಪನಿ ನಿರ್ಮಾಣ ಮಾಡಿದ ಕಟ್ಟಡದಲ್ಲಿ ಎಲಿವೇಟರ್ ದುರಂತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಈ ಕಂಪನಿಯ ಕಾಮಗಾರಿ ಸ್ಥಳದಲ್ಲಿ ಟವರ್ ಕ್ರೇನ್‌ನಿಂದ ಬಿದ್ದು ನಾಲ್ಕು ಮಂದಿ ಮೃತಪಟ್ಟಿದ್ದರು.

ಒಟ್ಟಿನಲ್ಲಿ ಈ ಬಿಜೆಪಿ ಸರ್ಕಾರಕ್ಕೆ ನಿಮ್ಮ ಜೀವದ ಬೆಲೆಯಿಲ್ಲ, ಬರೀ ತಮ್ಮ ಪಕ್ಷಕ್ಕೆ ದೇಣಿಗೆ ಸಿಕ್ಕರೆ ಸಾಕು ಎಂಬುವುದು ಖಚಿತವಾಗುತ್ತದೆ. ಬಿಜೆಪಿ ಸರ್ಕಾರ ತನ್ನ ಬೊಕ್ಕಸ ತುಂಬಿಸಲು ಕಳಪೆ ಕಾಮಗಾರಿ ಮಾಡುವ ಸಂಸ್ಥೆಗಳಿಗೆ ಅತೀ ದೊಡ್ಡ ದೊಡ್ಡ ಯೋಜನೆಗಳ ಗುತ್ತಿಗೆ ನೀಡಿ ಜನರ ಜೀವವನ್ನು ಬಲಿ ಪಡೆಯುವುದು ಎಷ್ಟು ಸರಿ ಎಂದು ನಾವು ಪ್ರಶ್ನಿಸಬೇಕಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X