ವಿಜಯಪುರ | ಲೋಕಸಭೆ ಚುನಾವಣೆ ಕಾಂಗ್ರೆಸ್ ಪರ ಹೆಜ್ಜೆ ಗುರುತಾಗಲಿದೆ: ಸಚಿವ ಎಂ.ಬಿ ಪಾಟೀಲ್

Date:

Advertisements

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯ ಮತ್ತು ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಪರ ಬುಧವಾರ (ಮಾ.27) ನಗರದ ಕಿತ್ತೂರು ಚೆನ್ನಮ್ಮ ಭವನದಲ್ಲಿ ನಡೆದ ಜಿಲ್ಲೆಯ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಬಹುತೇಕ ಭರವಸೆಯನ್ನು ಈಡೇರಿಸಿದ್ದಾರೆ. ಕಳೆದ ಬಿಜೆಪಿಯ ಯಡಿಯೂರಪ್ಪರ ಸರಕಾರ ನೀಡಿದ್ದ ಆರು ನೂರು ಭರವಸೆಯಲ್ಲಿ ಐದು ನೂರಕ್ಕೂ ಹೆಚ್ಚು ಭರವಸೆಗಳು ಹಾಗೇ ಉಳಿದಿವೆ. ಇದಲ್ಲದೇ ದೇಶದಲ್ಲಿ ಸಾಮಾನ್ಯರ ಜೀವನ ಸ್ಥಿತಿ ಚಿಂತಾಜನಕವಾಗಿದ್ದು, ಇದೆಲ್ಲ ಮರೆ ಮಾಚಲು ಬರೀ ಭಾವನಾತ್ಮಕ ವಿಚಾರಗಳನ್ನು ಅವರು ಎತ್ತುತ್ತಿದ್ದಾರೆ. ಜನರಿಗೆ ಇವರ ಆಟ ಆರ್ಥವಾಗಿದೆ ಎಂದು ಟೀಕಿಸಿದರು.

Advertisements

ರಾಜು ಆಲಗೂರ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಇವರ ಬೆನ್ನಿಗೆ ನಮ್ಮ ಗ್ಯಾರಂಟಿಗಳ ಅಭಯವಿದೆ. ರಾಜ್ಯ ಸರಕಾರದ ಜನಪರ ಆಡಳಿತದ ಬೆಂಬಲವಿದೆ. ಚುನಾವಣೆಯಲ್ಲಿ ಧೈರ್ಯವಾಗಿ ಮತ ಕೇಳುವ ನೈತಿಕ ಹಕ್ಕು ನಮಗಿದೆ. ಪಕ್ಷದ ಎಲ್ಲರೂ ಸಂಘಟಿತರಾಗಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಬಹು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಗೆಲ್ಲುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು.

ರಾಜು ಆಲಗೂರ್ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸಲು ಕೋರಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದನ್ನು ನಾವು ಹೇಳುತ್ತಿಲ್ಲ, ಬಿಜೆಪಿಗೆ ಅಡಿಪಾಯ ಹಾಕಿದ ದೊಡ್ಡ ನಾಯಕರೇ ಹೇಳಿದ್ದಾರೆ. ಇದು ನೂರಾ ನಲವತ್ತು ಕೋಟಿ ಜನರ ಭವಿಷ್ಯ ನಿರ್ಮಿಸುವ ಚುನಾವಣೆ.

ಇದು ಸವಾಲಿನ ಚುನಾವಣೆ, ಈ ಸಲ ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಗೆಲುವಿನ ‘ಗ್ಯಾರಂಟಿ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು ಹೇಳಿದರು. ಆರು ಜನ ಶಾಸಕರಿದ್ದು, ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ. ಬಿಜೆಪಿಗೆ ಸುಳ್ಳೇ ಬಂಡವಾಳ, ಕಾಂಗ್ರೆಸ್‌ಗೆ ಜನಪರ ಕೆಲಸಗಳೇ ಆಧಾರ ಎಂದು ಸಭೆಯಲ್ಲಿದ್ದ ನಾಲ್ವರು ಶಾಸಕರು ಹೇಳಿದರು. ಬೂತ್ ಮಟ್ಟದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಿದರು.

ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಮಕ್ಬೂಲ್ ಬಾಗವಾನ, ಹಮೀದ್ ಮುಶ್ರೀಫ್, ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಸುಭಾಶ ಛಾಯಾಗೋಳ, ಡಿ.ಎಲ್. ಚೌಹಾಣ್, ಮಲ್ಲಣ್ಣ ಸಾಲಿ, ಅರ್ಜುನ ರಾಠೋಡ, ಸುಜಾತಾ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ, ಆರ್.ಆರ್.ಪಾಟೀಲ, ಬಸವರಾಜ ದೇಸಾಯಿ, ಸಿದ್ದು ಗೌಡನವರ, ಈರನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಅಬ್ದುಲ್ ರಜಾಕ್ ಹೊರ್ತಿ, ಕನ್ನಾನ ಮುಶ್ರಿಫ್, ಆರತಿ ಶಹಾಪುರ, ಬಿ. ಎಸ್. ಪಾಟೀಲ ಯಾಳಗಿ, ಟಪಾಲ್ ಎಂಜಿನಿಯರ್ ಸೇರಿದಂತೆ ನಗರ ಪಾಲಿಕೆ ಸದಸ್ಯರು, ವಿಡಿಎ ಅಧ್ಯಕ್ಷರು, ಸದಸ್ಯರು, ಜಿಲ್ಲೆಯ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಅನೇಕರಿದ್ದರು.

ಸಂಗಮೇಶ ಬಬಲೇಶ್ವರ ಸ್ವಾಗತಿಸಿದರು, ಶಬ್ಬೀರ್ ಜಾಹಗೀರದಾರ ನಿರೂಪಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್

ಯುವ ಪೀಳಿಗೆಯನ್ನು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ವ್ಯಸನದ...

ಹಾವೇರಿ | ಕಾನೂನು ಸುವ್ಯವಸ್ಥೆ ಕಾಪಾಡಿ: ಡಿವೈಎಸ್ಪಿ ಗುರುಶಾಂತಪ್ಪ

"ಗೌರಿ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು...

ಶಿರಸಿ | 35 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ

ಹಳೆಯ ಪ್ರಕರಣವೊಂದರಲ್ಲಿ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉತ್ತರ ಕನ್ನಡ...

ಹಾವೇರಿ | ಗುಣಾತ್ಮಕ ಶಿಕ್ಷಣಕ್ಕಾಗಿ ಕಲಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಮಸುಂದರ ಅಡಿಗ

"ಎಲ್. ಬಿ.ಎ.ಫ್.ಲ್ ಎನ್ ಕಾರ್ಯಕ್ರಮಗಳ ಪರಿಣಾಮ ಮುಂದಿನ ದಿಗಳಲ್ಲಿ ಕಾಣಬಹುದು. ಆಂಗ್ಲ...

Download Eedina App Android / iOS

X